ಸೋನಿಪತ್: ಹರಿಯಾಣದಲ್ಲಿ ಬೀದಿನಾಯಿಯೊಂದರ ಬಾಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತಹದೇಹವೊಂದು ಪತ್ತೆಯಾಗಿದೆ. ಕಾನ್ಪುರ ಪಿಜಿಐ ದ್ವಾರದ ಬಳಿ ಕಾವಲುಗಾರ ಸಿಬ್ಬಂದಿ ಇದನ್ನು ಗಮನಿಸಿದ್ದಾನೆ. ನಾಯಿಯು ಬಾಲಕಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪಿಜಿಐಗೆ ಪ್ರವೇಶಿಸುತ್ತಿತ್ತು. ಅದೇ ಸಮಯಕ್ಕೆ ಅದನ್ನು ನೋಡಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಹಿಡಿಯಲು ಯತ್ನಿಸಿದಾಗ ನಾಯಿ ಬಾಲಕಿಯ ಮೃತದೇಹವನ್ನು ಬಿಟ್ಟು ಓಡಿಹೋಗಿದೆ. ನಂತರ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ
ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸತ್ರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ನಾನು ಸೋನಿಪತ್ ಖಾನ್ಪುರ್ ಪಿಜಿಐನ ದ್ವಾರ ಸಂಖ್ಯೆ 2 ಬಳಿ ಭದ್ರಾತಾ ಕಾವಲುಗಾರನಾಗಿ ನಿಯೋಜನೆಗೊಂಡಿದ್ದೆ. ನವಜಾತ ಶಿಶುವೊಂದನ್ನು ಬಾಯಿಯಲ್ಲಿ ಕಚ್ಚಿಕೊಂಡು ನಾಯಿಯೊಂದು ದ್ವಾರವನ್ನು ಪ್ರವೇಶಿಸುತ್ತಿರುವುದನ್ನು ನೋಡಿ ಕೂಡಲೇ ಶ್ವಾನವನ್ನು ಹಿಂಬಾಲಿಸಿದಾಗ ಬಾಲಕಿಯ ದೇಹವನ್ನು ಬಿಟ್ಟು ಓಡಿಹೋಗಿದೆ ಎಂದು ಸಿಬ್ಬಂದಿ ಮದನ್ ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ಸಿಸಿಟಿವಿ ಪರಿಶೀಲನೆ:
ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶಿಶುವನ್ನು ಇಲ್ಲಿ ಬಿಟ್ಟವರು ಯಾರು ಎಂದು ತಿಳಿಯಬಹುದು. ಇದರೊಂದಿಗೆ ಹೆಣ್ಣು ಮಗುವಿನ ಪೋಷಕರಿಗಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಹೊಸ ಹೆರಿಗೆಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ