ನವದೆಹಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕಾಂಗ್ರೆಸ್ ತೊರೆದು ಹೊಸದಾಗಿ ಬಿಜೆಪಿಗೆ ಸೇರ್ಪಡೆಗೊಂಡ ಅಶೋಕ್ ಚವಾಣ್, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಎಲ್. ಮುರುಗನ್ ಸೇರಿದಂತೆ 41 ಅಭ್ಯರ್ಥಿಗಳು ಮಂಗಳವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಮತದಾನ ನಡೆಯಲಿದೆ.
ಬಿಜೆಪಿ ಅತಿ ಹೆಚ್ಚು 20 ಸ್ಥಾನಗಳನ್ನು ಗೆದ್ದಿದೆ, ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ (6), ತೃಣಮೂಲ ಕಾಂಗ್ರೆಸ್ (4), ವೈಎಸ್ಆರ್ ಕಾಂಗ್ರೆಸ್ (3), ಆರ್ಜೆಡಿ (2), ಬಿಜೆಡಿ (2) ಮತ್ತು ಎನ್ಸಿಪಿ, ಶಿವಸೇನೆ, ಬಿಆರ್ಎಸ್ ಮತ್ತು ಜೆಡಿ( ಯು) ತಲಾ ಒಂದು ಸ್ಥಾನಗಳನ್ನು ಗೆದ್ದಿದೆ. ಈ 41 ಸ್ಥಾನಗಳಲ್ಲಿ ಬೇರೆ ಅಭ್ಯರ್ಥಿಗಳು ಕಣದಲ್ಲಿಲ್ಲದ ಕಾರಣ ಆಯಾ ಚುನಾವಣಾಧಿಕಾರಿಗಳು ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕದಂದು ಅವರನ್ನು ವಿಜೇತರೆಂದು ಘೋಷಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಚಲೋ | ರೈತರನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿದ ಬಿಜೆಪಿ ಸರ್ಕಾರ
56 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಫೆಬ್ರವರಿ 27 ರಂದು ಘೋಷಿಸಲಾಯಿತು. 50 ಸದಸ್ಯರು ತಮ್ಮ ಅವಧಿಯನ್ನು ಏಪ್ರಿಲ್ 2 ರಂದು ಪೂರ್ಣಗೊಳಿಸಿದರೆ ಉಳಿದ ಆರು ಮಂದಿ ಏಪ್ರಿಲ್ 3 ರಂದು ನಿವೃತ್ತರಾಗಲಿದ್ದಾರೆ.
ನಡ್ಡಾ ಮತ್ತು ಇತರ ಮೂವರು ಬಿಜೆಪಿ ನಾಮನಿರ್ದೇಶಿತರಾದ ಜಸ್ವಂತ್‌ಸಿನ್ಹ್ ಪರ್ಮಾರ್, ಮಯಾಂಕ್ ನಾಯಕ್ ಮತ್ತು ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರನ್ನು ಗುಜರಾತ್‌ನಿಂದ ವಿಜೇತರೆಂದು ಘೋಷಿಸಲಾಯಿತು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ 156 ಶಾಸಕರನ್ನು ಹೊಂದಿರುವ ಬಿಜೆಪಿ ವಿರುದ್ಧ ಕೇವಲ 15 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅಭ್ಯರ್ಥಿಗಳನ್ನು ಹಾಕಿರಲಿಲ್ಲ.
ರಾಜಸ್ಥಾನದಿಂದ ಸೋನಿಯಾ ಗಾಂಧಿ ಅವರು ಬಿಜೆಪಿಯ ಚುನ್ನಿಲಾಲ್ ಗರಾಸಿಯಾ ಮತ್ತು ಮದನ್ ರಾಥೋಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಮಹಾರಾಷ್ಟ್ರದ ಎಲ್ಲಾ ಆರು ಅಭ್ಯರ್ಥಿಗಳಾದ, ಕಳೆದ ಮಂಗಳವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಚವಾಣ್, ಮೇಧಾ ಕುಲಕರ್ಣಿ ಮತ್ತು ಅಜಿತ್ ಗೋಪ್‌ಛಾಡೆ; ಕಳೆದ ತಿಂಗಳು ಕಾಂಗ್ರೆಸ್ ತೊರೆದಿದ್ದ ಶಿವಸೇನೆಯ ಮಿಲಿಂದ್ ದಿಯೋರಾ, ಪ್ರಫುಲ್ ಪಟೇಲ್ (ಎನ್‌ಸಿಪಿ) ಮತ್ತು ಚಂದ್ರಕಾಂತ್ ಹಂದೋರೆ (ಕಾಂಗ್ರೆಸ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಹಾರದಲ್ಲಿ ಜೆಡಿಯುನ ಸಂಜಯ್ ಕುಮಾರ್ ಝಾ, ಬಿಜೆಪಿಯ ಧರ್ಮಶಿಲಾ ಗುಪ್ತಾ ಮತ್ತು ಭೀಮ್ ಸಿಂಗ್, ಆರ್‌ಜೆಡಿಯ ಮನೋಜ್ ಕುಮಾರ್ ಝಾ ಮತ್ತು ಸಂಜಯ್ ಯಾದವ್ ಮತ್ತು ಕಾಂಗ್ರೆಸ್‌ನ ಅಖಿಲೇಶ್ ಪ್ರಸಾದ್ ಸಿಂಗ್ ಗೆದ್ದಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿಪಕ್ಷದ ನಾಯಕರನ್ನು ಬೆದರಿಸಿ ಎನ್‌ಡಿಎ ಸೇರುವಂತೆ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ
ಪಶ್ಚಿಮ ಬಂಗಾಳದಿಂದ ಟಿಎಂಸಿಯ ಸುಶ್ಮಿತಾ ದೇವ್, ಸಾಗರಿಕಾ ಘೋಷ್, ಮಮತಾ ಠಾಕೂರ್ ಮತ್ತು ಎಂಡಿ ನಾದಿಮುಲ್ ಹಕ್ ಮತ್ತು ಬಿಜೆಪಿಯ ಸಾಮಿಕ್ ಭಟ್ಟಾಚಾರ್ಯ ಅವರನ್ನು ವಿಜೇತರೆಂದು ಘೋಷಿಸಲಾಗಿದೆ.
ಕೇಂದ್ರ ಸಚಿವ ಮುರುಗನ್, ವಾಲ್ಮೀಕಿ ಧಾಮ ಆಶ್ರಮದ ಮುಖ್ಯಸ್ಥ ಉಮೇಶ್ ನಾಥ್ ಮಹಾರಾಜ್, ಕಿಸಾನ್ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಬನ್ಶಿಲಾಲ್ ಗುರ್ಜಾರ್ ಮತ್ತು ರಾಜ್ಯ ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ಮಾಯಾ ನರೋಲಿಯಾ ಅವರು ಸೇರಿ ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ ನಾಲ್ಕು ಸ್ಥಾನಗಳು ಮತ್ತು ಕಾಂಗ್ರೆಸ್‌ನ ಅಶೋಕ್ ಸಿಂಗ್ ಕೂಡ ಅವಿರೋಧವಾಗಿ ಗೆದ್ದಿದ್ದಾರೆ.
ಒಡಿಶಾದಿಂದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (ಬಿಜೆಪಿ) ಮತ್ತು ಬಿಜೆಡಿಯ ದೇಬಾಶಿಶ್ ಸಾಮಂತ್ರಾಯ್ ಮತ್ತು ಸುಭಾಶಿಶ್ ಖುಂಟಿಯಾ ಗೆದ್ದಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳಾದ, ಜಿ ಬಾಬು ರಾವ್, ವೈ ವಿ ಸುಬ್ಬಾ ರೆಡ್ಡಿ ಮತ್ತು ಎಂ ರಘುನಾಥ್ ರೆಡ್ಡಿ ಆಂಧ್ರಪ್ರದೇಶದ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದರೆ, ನೆರೆಯ ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ರೇಣುಕಾ ಚೌಧರಿ ಮತ್ತು ಅನಿಲ್ ಕುಮಾರ್ ಯಾದವ್ ಅವರು ಗೆದ್ದರೆ, ಬಿಆರ್‌ಎಸ್ ಒಂದು ಸ್ಥಾನವನ್ನು ವಿ. ರವಿಚಂದ್ರ ಅವರು ಗೆದ್ದಿದ್ದಾರೆ.
ಉತ್ತರಾಖಂಡ (ಮಹೇಂದ್ರ ಭಟ್), ಸುಭಾಷ್ ಬರಾಲಾ (ಹರಿಯಾಣ), ದೇವೇಂದ್ರ ಪ್ರತಾಪ್ ಸಿಂಗ್ (ಛತ್ತೀಸ್‌ಗಢ) ಅವರು ಬಿಜೆಪಿ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಡಿಯೊ ನೋಡಿ: ಗಾಜಾ ಹತ್ಯಾಕಾಂಡ | ಇಸ್ರೇಲ್ ವಿರುದ್ಧ ಜನಾಕ್ರೋಶ – ಪ್ಯಾಲೆಸ್ಟೈನ್ ಪರ ಮಿಡಿದ ಜಗತ್ತು.