ಗದಗ: ಶುಕ್ರವಾರ ಮುಂಜಾನೆ ಕರ್ನಾಟಕದ ಗದಗ ಪಟ್ಟಣದಲ್ಲಿ ಗದಗ-ಬೆಟಗೇರಿ ನಗರ ಪುರಸಭೆ (ಜಿಬಿಸಿಎಂಸಿ) ಉಪಾಧ್ಯಕ್ಷರ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಲಾಗಿದೆ.
ಮೃತರನ್ನು ಜಿಬಿಸಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಬಾಕಳೆ ಮತ್ತು ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ ಹಾದಿಮನಿ (55), ಅವರ ಪತ್ನಿ ಲಕ್ಷ್ಮಿ (45) ಮತ್ತು ಅವರ ಪುತ್ರಿ ಆಕಾಂಕ್ಷಾ (16) ಎಂದು ಗುರುತಿಸಲಾಗಿದೆ. ಏಪ್ರಿಲ್ 17 ರಂದು ಕಾರ್ತಿಕ್ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಕೊಪ್ಪಳದಿಂದ ಆಗಮಿಸಿದ್ದರು ಮತ್ತು ಅವರು ಕೊಲೆಯಾದಾಗ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಬಾಕಳೆವರು ಮನೆಯ ನೆಲ ಮಹಡಿಯಲ್ಲಿ ಮಲಗಿದ್ದರು ಮತ್ತು ಹಾದಿಮನಿಗಳು ಮೊದಲ ಮಹಡಿಯಲ್ಲಿ ತಂಗಿದ್ದರು. ಬೆಳಗಿನ ಜಾವ 2.15ರ ಸುಮಾರಿಗೆ ಯಾರೋ ಬಾಗಿಲಿಗೆ ಬಡಿಯುತ್ತಿರುವ ಸದ್ದು ಪ್ರಕಾಶ್ ಮತ್ತು ಸುನಂದಾ ಅವರಿಗೆ ಕೇಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನೇಹಾ ಹತ್ಯೆ ಪ್ರಕರಣ; ಹಿಂದೂ-ಮುಸ್ಲಿಮ ಸಮುದಾಯದ ಜಂಟಿ ಪ್ರತಿಭಟನೆ
ದರೋಡೆಕೋರರೆಂದು ಅನುಮಾನಗೊಂಡ ದಂಪತಿಗಳು ಸಹಾಯಕ್ಕಾಗಿ ಪೊಲೀಸರನ್ನು ಕರೆದರು. “ಹಂತಕರು ಮೊದಲ ಮಹಡಿಯಿಂದ ಕೋಣೆಗೆ ಪ್ರವೇಶಿಸಿ ಪರಶುರಾಮ್, ಲಕ್ಷ್ಮಿ ಮತ್ತು ಆಕಾಂಕ್ಷಾ ಅವರನ್ನು ಕೊಂದರು. ದೊಡ್ಡ ಶಬ್ದ ಕೇಳಿದ ಕಾರ್ತಿಕ್ ಮೊದಲ ಮಹಡಿಗೆ ಹೋಗಿ ಪರಿಶೀಲಿಸಿದರು ನಂತರ ದುಷ್ಕರ್ಮಿಗಳು ಅವರನ್ನು ಕೊಂದಿದ್ದಾರೆ , ”ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ತಮ್ಮ ಬಳಿಯಿದ್ದ ಆಯುಧಗಳನ್ನು ಚರಂಡಿಯ ಹಳ್ಳದಲ್ಲಿ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 18 ರಂದು, ಬಾಕಳೆ ಮತ್ತು ಹಾದಿಮನಿ ಕುಟುಂಬ ಆಕಾಂಕ್ಷಾ ಜನ್ಮದಿನವನ್ನು ಆಚರಿಸಿದ್ದರು. ಸುನಂದಾ ಪ್ರಕಾಶ್‌ಗೆ ಎರಡನೇ ಪತ್ನಿಯಾಗಿದ್ದು, ಮೊದಲ ಮದುವೆಯಿಂದ ಅವರಿಗೆ ಒಬ್ಬ ಮಗನಿದ್ದಾನೆ. ಘಟನೆಯಲ್ಲಿ ಆತನ ಪಾಲ್ಗೊಳ್ಳುವಿಕೆ ಇದೆಯೆ ಎಂಬುದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಕಾಶ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಒಬ್ಬರಿಗಿಂತ ಹೆಚ್ಚು ಮಂದಿ ಮನೆಗೆ ನುಗ್ಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮನೆಯನ್ನು ಧ್ವಂಸ ಮಾಡಲಾಗಿದ್ದರೂ ಲಾಭಕ್ಕಾಗಿ ಕೊಲೆ ಮಾಡಿದಂತೆ ಕಾಣುತ್ತಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ.
ಇದನ್ನೂ ನೋಡಿ: ಬಿಜೆಪಿಯನ್ನು ಸೋಲಿಸುವುದು ದೇಶಪ್ರೇಮದ ಕೆಲಸ – ಯು. ಬಸವರಾಜ