ಮಂಡ್ಯ: “ವಯಸ್ಸಾದ ತಂದೆ-ತಾಯಿ ಮನೆಯಲ್ಲಿ ಕಿರಿಕಿರಿ.” “ನನ್ನ ಹೆಂಡತಿ ಮಕ್ಕಳಿಗೆ ಅಪ್ಪ-ಅಮ್ಮ ಹೊಂದಾಣಿಕೆ ಆಗುತ್ತಿಲ್ಲ.” “ನನ್ನ ಪತಿಗೆ ನನ್ನ ಪೋಷಕರು ಇಷ್ಟವಾಗುತ್ತಿಲ್ಲ.”ಈ ರೀತಿಯ ಕಾರಣಗಳನ್ನು ಕೊಟ್ಟು ಪೋಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸಿರುವ, ಸೇರಿಸಲು ಯೋಚಿಸಿರುವ ಮಕ್ಕಳು ಹೆಚ್ಚಾಗಿದ್ದಾರೆ.
ಅದರಂತೆ ಇಲ್ಲೋರ್ವ ಪಾಪಿ ಮಗ ಮಾನಸಿಕ ಅಸ್ವಸ್ಥ ತಾಯಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದ ಕೃಷ್ಣನಾಯಕ್
“ಬರುತ್ತೇನೆ, ಇಲ್ಲೇ ಇರು” ಎಂದು ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದ ಎನ್ನಲಾಗಿದೆ. ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು.
ಸುಮಾರು 70 ರಿಂದ 80 ವರ್ಷದ ವೃದ್ಧೆಗೆ ಸ್ಥಳೀಯರು ಆಹಾರ ನೀಡಿ ರಕ್ಷಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದೆ.
ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media
