ಇಂಫಾಲ್: ಮೇ 3 ರಂದು ಮಣಿಪುರದಲ್ಲಿ ಮೇತ್ತಾಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಸುಮಾರು ಮೂರು ತಿಂಗಳ ಹಿಂದೆ ಮಣಿಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿಗಿತ್ತು. ಇದೀಗ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಕೆಲವು ಷರತ್ತುಗಳೊಂದಿಗೆ ಮಂಗಳವಾರ ಹಿಂಪಡೆದಿದೆ ಆದರೆ ಮೊಬೈಲ್ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿದಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್, ವರ್ಕ್‌ಫ್ರಮ್ ಹೋಮ್, ಕಚೇರಿಗಳು, ಮೊಬೈಲ್ ರೀಚಾರ್ಚ್, ಬಿಲ್ ಪಾವತಿ ಸೇರಿದಂತೆ ಕೆಲವು ಆನ್‌ಲೈನ್ ಸೇವೆಗಳಿಗೆ ಸೇವೆಯನ್ನು ಪುನರ್‌ಸ್ಥಾಪಿಸಿದೆ.
ಇದನ್ನೂ ಓದಿ:ಪ್ರಧಾನಿಗೆ ರಾಹುಲ್ ತಿರುಗೇಟು:ಮಣಿಪುರದಲ್ಲಿ ಭಾರತದ ಕಲ್ಪನೆ ಪುನರ್ ನಿರ್ಮಾಣ
ಇಂಟರ್ ನೆಟ್ ಸಂಪರ್ಕವು ಸ್ಥಿರ IP ಮೂಲಕ ಮಾತ್ರ ಇರುತ್ತದೆ ಮತ್ತು ಸಂಬಂಧಿತ ಚಂದಾದಾರರು ಸದ್ಯಕ್ಕೆ ಇತರೆ ಯಾವುದೇ ಹೊಸ ಸಂಪರ್ಕಕ್ಕೂ ಅನುಮತಿ ನೀಡಬಾರದು ಎಂಬ ಷರತ್ತು ವಿಧಿಸಲಾಗಿದೆ. ರೌಟ್ ಅಥವಾ ಯಾವುದೇ ವ್ಯವಸ್ಥೆಯಿಂದ ವೈಫೈ ಹಾಟ್‌ಸ್ಪಾಟ್ ಒದಗಿಸಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.