ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಕಣಿವೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗುವುದರೊಂದಿಗೆ ಕಳೆದ 32 ತಿಂಗಳಿನಲ್ಲಿ ಈ ಪ್ರದೇಶದಲ್ಲಿ ಉಗ್ರರ ದಾಳಿಗೆ 48 ಮಂದಿ ಬಲಿಯಾಗಿದ್ದಾರೆ.
ಜುಲೈ 8 ರಂದು ಕಥುವಾ ಜಿಲ್ಲೆಯಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಐವರು ಸೇನಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು ಮತ್ತು ಐವರು ಗಾಯಗೊಂಡಿದ್ದರು.
ಜೂನ್ 9 ರಂದು ರಿಯಾಸಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 33 ಮಂದಿ ಗಾಯಗೊಂಡಿದ್ದರು.ಮೇ 4 ರಂದು ಪೂಂಚ್ ಜಿಲ್ಲೆಯಲ್ಲಿ ಐಎಎಫ್‌ನ ಒಂದು ಸೇರಿದಂತೆ ಎರಡು ವಾಹನಗಳು ಭಾರೀ ಭಯೋತ್ಪಾದಕರ ಗುಂಡಿನ ದಾಳಿಗೆ ಸಿಲುಕಿದಾಗ ಭಾರತೀಯ ವಾಯುಪಡೆಯ ಒಬ್ಬ ಯೋಧ ಹುತಾತರಾಗಿದ್ದರು.ಕಳೆದ ವರ್ಷದ ಡಿಸೆಂಬರ್ 21ರಂದು ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಸೈನಿಕರು ಕೊಲ್ಲಲ್ಪಟ್ಟರು.
ಇದನ್ನೂ ಓದಿ : ಏಕಲವ್ಯ ಶಾಲೆಗಳಿಗೆ ನೇಮಕಾತಿಯ ವಿಪರೀತ ಕೇಂದ್ರೀಕೃತ ವಿಧಾನವನ್ನು ಹಿಂತೆಗೆದುಕೊಳ್ಳಬೇಕು: ಬೃಂದಾ ಕಾರಟ್ ವಿನಂತಿ
2023ರ ನವಂಬರ್ ತಿಂಗಳಿನಲ್ಲಿ ಇಬ್ಬರು ನಾಯಕರು ಸೇರಿದಂತೆ ಐವರು ಸೈನಿಕರು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು.ಏಪ್ರಿಲ್ ಮತ್ತು ಮೇ ತಿಂಗಳ ಅವಳಿ ದಾಳಿಯಲ್ಲಿ 10 ಸೈನಿಕರು ಹುತಾತರಾಗಿದ್ದರು.2022ರ ಮೇ ತಿಂಗಳಿನಲ್ಲಿ ಕತ್ರಾದಲ್ಲಿ ಯಾತ್ರಿಕ ಬಸ್ ಮೇಲೆ ದಾಳಿ ನಡೆಸಿದ ನಂತರ ನಾಲ್ವರು ಕೊಲ್ಲಲ್ಪಟ್ಟರು. 2021ರ ಡಿಸಂಬರ್‌ನಲ್ಲಿ ನಡೆದ ಕಾರ್ಯಚರಣೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು.
ಕೇಂದ್ರ ಸರ್ಕಾರದ ರಾಜಕೀಯ ಹಪಾಹಪಿ ಹಾಗೂ ನಿರ್ಲಕ್ಷ್ಯಕ್ಕೆ ಯೋದರು ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರರು ನುಸುಳದಂತೆ ನೋಡಿಕೊಳ್ಳುವುದಾಗಿ ಹೇಳಿದ್ದ ಬಿಜೆಪಿ ಈಗ ವಚನ ಭ್ರಷ್ಟವಾಗಿದೆ ಎಂದು ಆರೋಪಿಸಿದ್ದಾರೆ.