ಸಂವಿಧಾನದ ಹೊಸ ಪ್ರತಿಗಳ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ’ ಪದ ಕೈಬಿಟ್ಟ ಸರ್ಕಾರ: ಅಧೀರ್ ರಂಜನ್ ಚೌಧರಿ ಆರೋಪ

ನವದೆಹಲಿ: ಮಂಗಳವಾರ ಸಂಸತ್ತಿನ ಹೊಸ ಕಟ್ಟಡದಲ್ಲಿ ನಡೆದ ಕಲಾಪದ ಆರಂಭದ ದಿನದಂದು ಸಂಸತ್ ಸದಸ್ಯರಿಗೆ ಒದಗಿಸಲಾದ ಸಂವಿಧಾನದ ಹೊಸ ಪ್ರತಿಗಳ ಮುನ್ನುಡಿಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳು ಇರಲಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಆರೋಪಿಸಿದ್ದಾರೆ. “ನಮಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳು … ನಾವು ನಮ್ಮ ಕೈಯಲ್ಲಿ ಹಿಡಿದು ಹೊಸ ಸಂಸತ್ತಿನ ಕಟ್ಟಡಕ್ಕೆ ಪ್ರವೇಶಿಸಿದ್ದೇವೆ. ಆದರೆ ಅದರ ಪೀಠಿಕೆಯಲ್ಲಿ ‘ಸಮಾಜವಾದಿ, ಜಾತ್ಯತೀತ’ ಎಂಬ ಪದಗಳಿಲ್ಲ” ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2015 ರ ವೇಳೆ ಪತ್ರಿಕೆಗಳಲ್ಲಿ ಪ್ರಕಟವಾದ ಗಣರಾಜ್ಯೋತ್ಸವದ ಸರ್ಕಾರಿ ಜಾಹೀರಾತಿನ ಸಂವಿಧಾನದ ಪೀಠಿಕೆಯ ಚಿತ್ರದಲ್ಲಿ ಕೂಡಾ “ಸಮಾಜವಾದಿ ಮತ್ತು ಜಾತ್ಯತೀತ” ಪದಗಳನ್ನು ಬಿಟ್ಟುಬಿಡಲಾಗಿತ್ತು. ಆ ವೇಳೆ ಅದು ಭಾರಿ ವಿವಾದ ಉಂಟು ಮಾಡಿತ್ತು. ಜನವರಿ 2015 ರಲ್ಲಿ, ಆಗಿನ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮುನ್ನುಡಿಯಲ್ಲಿ ”ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಇರಬೇಕೇ ಎಂದು ಚರ್ಚಿಸುವುದರಿಂದ ಯಾವುದೇ ಹಾನಿ ಇಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಬಿಜೆಪಿ ಗಂಭೀರವಾಗಿರುತ್ತಿದ್ದರೆ 2014 ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಬಹುದಿತ್ತು: ರಾಷ್ಟ್ರೀಯ ಮಹಿಳಾ ಸಂಘಟನೆಗಳು ಹೇಳಿಕೆ

ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಇಬ್ಬರು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು 2020 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳನ್ನು ಪೀಠಿಕೆಯಿಂದ ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದರು.

ಸಮಾಜವಾದ ಮತ್ತು ಜಾತ್ಯತೀತತೆಯ ತತ್ವಗಳನ್ನು ಕಡ್ಡಾಯವಾಗಿ ಅನುಸರಿಸುವುದು ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವನ್ನು ನೋಂದಾಯಿಸಲು ಷರತ್ತುಗಳಲ್ಲಿ ಒಂದಾಗಿದೆ. ಇದನ್ನು 1989 ರಲ್ಲಿ ತಿದ್ದುಪಡಿ ಮಾಡುವ ಮೂಲಕ ಜನರ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 29-A (5) ಗೆ ಸೇರಿಸಲಾಯಿತು.

“ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು 1976 ರಲ್ಲಿ ಪೀಠಿಕೆಗೆ 42 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು.

ವಿಡಿಯೊ ನೋಡಿ: ಹಿಂದುತ್ವ ರಾಜಕಾರಣ : ಸಿದ್ದಾಂತದ ವ್ಯವಹಾರಕ್ಕೆ ಹಿಂದುಳಿದ ವರ್ಗವೇ ಟಾರ್ಗೆಟ್ ! Janashakthi Media

Donate Janashakthi Media

Leave a Reply

Your email address will not be published. Required fields are marked *