ಕೊಟ್ಟೂರು | ರೈತರ ಹಿತಕ್ಕೆ ವಿರುದ್ಧ ಸ್ಮಾರ್ಟ್ ಮೀಟರ್ ಯೋಜನೆ : ಜೆ.ಎಂ. ವೀರಸಂಗಯ್ಯ ಆರೋಪ

ಕೊಟ್ಟೂರು: ನೀರಾವರಿ ಕೃಷಿಗೆ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದು, ಇದರಿಂದ ಬಹುದೊಡ್ಡ ಹೊಡೆತ ಬೀಳಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.

ಪಟ್ಟದ ಕೊಟ್ಟೂರೇಶ್ವರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಮ್ಮ ಸಂಪಾದಕತ್ವದ ‘ಪ್ರಿಪೇಯ್ಡ್ ಮೀಟರ್ ಬಂತು. ರೈತರಿಗೆ ಆಪತ್ತು ತಂತು’ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇದನ್ನೂ ಓದಿ : ಲಿಂಗತ್ವ; ಲೈಂಗಿಕ ಅಲ್ಪಸಂಖ್ಯಾತರಗಾಗಿ ಘೋಷಿಸಿದ 200 ಕೋಟಿಯನ್ನು ತಕ್ಷಣ ಮೀಸಲಿಡಲು ಆಗ್ರಹ

ರಾಜ್ಯದಲ್ಲಿರುವ 45 ಲಕ್ಷ ಪಂಪ್‌ಸೆಟ್ 2020ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಪರಿಣಾಮ  ರೈತರ ಅನ್ನದ ತಟ್ಟೆಗೆ ವಿಷ ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 303.40 ಲಕ್ಷ ಎಕರೆ ಕೃಷಿ ಭೂಮಿ ಇದ್ದು, 87 ಲಕ್ಷ ರೈತ ಕುಟುಂಬಗಳಿವೆ. ಇದರಲ್ಲಿ 69 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಸುಮಾರು 600 ಟಿ.ಎಂ.ಸಿ. ಅಡಿ ಅಂತರ್ಜಲ ಬಳಸಿ, 45 ಲಕ್ಷ ಕೃಷಿ ಪಂಪ್‌ಸೆಟ್ ಇವೆ’ ಎಂದು ಮಾಹಿತಿ ನೀಡಿದರು.

ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಈ ಯೋಜನೆ ರೈತರಿಗೆ ಮಾರಕವಾಗಲಿದೆ’ ‘ರೈತರು ಸ್ಮಾರ್ಟ್ ಮೀಟರ್‌ಗೆ ಮುಂಗಡ ಹಣ ಪಾವತಿಸಬೇಕು. ಕರೆಂಟ್ ಬಳಕೆಯಾದಂತೆ ಹಣ ಮುಗಿಯುತ್ತಾ ಹೋಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ರವಿಕುಮಾರ್, ಲೇಖಕ ಉಜ್ಜಿನಿ ರುದ್ರಪ್ಪ, ದ.ಸಂ.ಸ. ಮುಖಂಡ ಮರಿಸ್ವಾಮಿ ಮಾತನಾಡಿದರು. ಗುಡಿಯಾರ್ ಮಲ್ಲಿಕಾರ್ಜುನ್, ಪ್ರಜಾಸಿಂಹ, ರವಿಕುಮಾರ್, ಪಿ. ಚಂದ್ರಶೇಖರ್, ರಶ್ಮಿ ಪಾಲ್ಗೊಂಡಿದ್ದರು.

ಇದನ್ನೂ ನೋಡಿ : ಕೆಂಪು ಪುಸ್ತಕ ದಿನ | ದುಡಿಯುವ ಜನತೆಯ ಕೈಪಿಡಿಹಾಡಿದವರು Janashakthi Media

Donate Janashakthi Media

Leave a Reply

Your email address will not be published. Required fields are marked *