-
ಕೇಂದ್ರ ಸರ್ಕಾರದ RDSS ಯೋಜನೆಯಡಿಯಲ್ಲಿ ವಿಧಿಸಲಾದ ವ್ಯವಸ್ಥೆ ಕಡ್ಡಾಯ
-
ಸಂಪೂರ್ಣ ವಿದ್ಯುತ್ ಮೀಟರ್ ತಂತ್ರಜ್ಞಾನ ಮತ್ತು ನಿಯತಾಂಕಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಅಪಾಯಕಾರಿ ಯೋಜನೆ
-
ಹೋರಾಟದ ಮೂಲಕ ತಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ಪಶ್ಚಿಮ ಬಂಗಾಳದ ಜನತೆ
ಬೆಂಗಳೂರು ವಿದ್ಯುತ್ ಸರಭರಾಜು ಕಂಪನಿ (ಬೆಸ್ಕಾಂ) ತನ್ನ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1 ರಿಂದ ಮೀಟರ್ ಕಡ್ಡಾಯಗೊಳಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಆದೇಶದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದೆ. 2025ರ ಫೆಬ್ರವರಿ 15ರಿಂದ ಪ್ರಾರಂಭವಾದ ಸ್ಮಾರ್ಟ್ ಮೀಟರ್ ನಿಯೋಜನೆಯು, ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳಲ್ಲಿ ಮಾತ್ರ ಕಡ್ಡಾಯವಾಗಿತ್ತು. ಈಗ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೂ ಕಡ್ಡಾಯಗೊಳಿಸಿದೆ. ಹೊಸ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿದಾರರು ಬೆಸ್ಕಾಮ್-ಅಧಿಕೃತ ಔಟ್‌ಲೆಟ್ ಗಳಿಂದ ಸ್ಟಾರ್ಟ್ ಮೀಟರ್‌ಗಳನ್ನು ಖರೀದಿಸಬಹುದು ಮತ್ತು ಸಂಪರ್ಕ ಔಪಚಾರಿಕತೆಗಳೊಂದಿಗೆ ಮುಂದುವರಿಯಬಹುದು ಎಂದು ಪ್ರಕಟಣೆ ತಿಳಿಸಿದೆ. ಕಡ್ಡಾಯ
“ಆಡ್ವಾನ್ಸ್ ಮೀಟರಿಂಗ್ ಇಸ್ಟ್ರಾಸ್ಟ್ರಕ್ಟರ್ (AMI) ತಂತ್ರಜ್ಞಾನವನ್ನು ಬಳಸಿಕೊಂಡು. ಈ ಮೀಟರ್‌ಗಳು ಗ್ರಾಹಕರು ಮತ್ತು ಬೆಸ್ಕಾಮ್ ನಡುವೆ ವಿದ್ಯುತ್ ಬಳಕೆಯ ಡೇಟಾವನ್ನು ಸಂಗ್ರಹಿಸುವ ಮೂಲಕ ನೇರ ಸಂವಹನವನ್ನು ಸಕ್ರಿಯಗೊಳಿಸುತ್ತವೆ. ಬಳಕೆದಾರರು ಮೊಬೈಲ್ ಆಪ್ಲಿಕೇಶನ್ ಮೂಲಕ ನೈಜ-ಸಮಯದೆ ವಿದ್ಯುತ್ ಬಳಕೆ. ವೋಲ್ವೇಜ್ ಮತ್ತು ವಿದ್ಯುತ್ ಅಂಶವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ರೀಚಾರ್ಜ್ ಆಯ್ಕೆಗಳನ್ನು ಪ್ರವೇಶಿಸಬಹುದು. ಗ್ರಾಹಕರು ಮುಂಗಡ ಪಾವತಿಗಳನ್ನು ಮಾಡಬಹುದು ಮತ್ತು ತಮ್ಮ ಅಪೇಕ್ಷಿತ ಅವಧಿಗೆ ರೀಚಾರ್ಜ್ ಮಾಡಬಹುದು, ಇದು ಅಗತ್ಯವಿರುವಂತೆ ವಿದ್ಯುತ್ ಬಳಸಲು ಅನುವು ಮಾಡಿಕೊಡುತ್ತದೆ. ವಿದ್ಯುತ್ ಕಡಿತದ ಸಂದರ್ಭದಲ್ಲಿ ಬಿಲ್ ಪಾವತಿಯ ನಂತರ ವಿದ್ಯುತ್ ಅನ್ನು ತಕ್ಷಣವೇ ಮರುಸ್ಥಾಪಿಸಬಹುದು” ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರು ನಗರ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಬೆಸ್ಕಾಂ ತನ್ನ ಸೇವೆಗಳನ್ನು ಒದಗಿಸುತ್ತದೆ. ಕಡ್ಡಾಯ
ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ‘ಪರಿಷ್ಕೃತ ವಿತರಣಾ ವಲಯ ಯೋಜನೆ’ (RDSS) ರೂಪಿಸಿತ್ತು. ಈ ಯೋಜನೆಯಡಿಯಲ್ಲಿ ವಿಧಿಸಲಾದ ಈ ವ್ಯವಸ್ಥೆಯು ಸಂಪೂರ್ಣ ವಿದ್ಯುತ್ ಮೀಟರ್ ತಂತ್ರಜ್ಞಾನ ಮತ್ತು ನಿಯತಾಂಕಗಳನ್ನು ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸುವ ಅಪಾಯಕಾರಿ ಯೋಜನೆಯಾಗಿದೆ. ದೇಶದ ಇತರೆ ರಾಜ್ಯಗಳಂತೆ ಕರ್ನಾಟದಲ್ಲಿಯೂ ಕೇಂದ್ರ ಸರ್ಕಾರದ ಈ ಯೋಜಜನೆಯನ್ನು ವೇಗವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಹೊರಟಿದೆ. ಇದರ ಭಾಗವಾಗಿ 2024ರ ಮಾರ್ಚ್ 6ರಂದು ಸ್ಮಾರ್ಟ್ ಮೀಟರ್ ಅನುಷ್ಠಾನದ ಕುರಿತು ಕೆಇಆರ್ ಸಿ ಮಾರ್ಗಸೂಚಿಗಳನ್ನು ಹೊರಡಿಸಿತು. ಅಂದಿನಿಂದ ಹಂತಹಂತವಾಗಿ ಸಾರ್ಟ್ ಮೀಟರ್ ಅಳವಡಿಕೆಗಳನ್ನು ಕೈಗೊಳ್ಳುತ್ತಿದೆ. ಈಗ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕಡ್ಡಾಯಗೊಳಿಸಿರುವ ಸರ್ಕಾರ ಹಂತ ಹಂತವಾಗಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮಾಡುತ್ತದೆ. ಕಡ್ಡಾಯ
ಇದನ್ನೂ ಓದಿ: ಖಾಲಿ ಇರುವ 9 – 10 ನೇ ತರಗತಿಯ ಸ್ಥಾನಗಳಿಗೆ ವಸತಿ ಶಾಲೆಗಳಲ್ಲಿ ನೇರ ಪ್ರವೇಶ
ಕಾರ್ಪೊರೇಟ್ ಗಳ ಗುಪ್ತ ಕಾರ್ಯಸೂಚಿ
ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಗೆ 5,000 ಮತ್ತು ತ್ರೀ ಫೇಸ್ ಸ್ಮಾರ್ಟ್ ಮೀಟರ್ ಗೆ 8,800 ರೂ. ದರ ನಿಗಧಿ ಮಾಡಲಾಗಿದೆ ಎಂದು ಕೆಇಆರ್‌ಸಿ ಹೇಳಿದೆ. ಸ್ಮಾರ್ಟ್ ಮೀಟರ್ ಗುತ್ತಿಗೆ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂದು ರಾಜ್ಯದ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸಿದ್ದನ್ನು ನಾವು ನೋಡಿದ್ದೇವೆ. ಮತ್ತೊಂದಡೆ, ಈ ಹಗರಣದ ಬಗ್ಗೆ ಮತ್ತು ಸ್ಮಾರ್ಟ್ ಮೀಟರ್‌ಗಳ ದುಬಾರಿ ದರಕ್ಕೆ ಸಂಬಂಧಿಸಿ ಮತ್ತು ಗ್ರಾಹಕರಿಗೆ ವಿದ್ಯುತ್ ಸ್ಮಾರ್ಟ್ ಮೀಟರ್ ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸುವ ನಿರ್ಧಾರಗಳ ಕಾನೂನು ಬದ್ಧತೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ಪ್ರಕರಣ ಚಾಲ್ತಿಯಲ್ಲಿದೆ. ಆದರೆ, ಈ ಯೋಜನೆಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಮತ್ತು ಇದನ್ನು ದೇಶಾದ್ಯಂತ ಜಾರಿಗೊಳಿಸಲು ಆಯಾ ರಾಜ್ಯಗಳು ಕ್ರಮಕೈಗೊಳ್ಳುತ್ತಿವೆ. ಕಡ್ಡಾಯ
ಮೀಟರ್ ಗಳ ಜೀವಿತಾವಧಿ ಕೇವಲ 5 ವರ್ಷಗಳು ಮಾತ್ರ
ಸಿಂಗಲ್ ಫೇಸ್ ಪ್ರತಿ ಸ್ಮಾರ್ಟ್ ಮೀಟರ್‌ಗೆ 5,000 ಮತ್ತು ತ್ರೀ ಫೇಸ್ ಸ್ಮಾರ್ಟ್ ಮೀಟರ್‌ಗೆ 8,800 ರೂ. ದರ ನಿಗಧಿಮಾಡಲಾಗಿದ್ದರೂ, ಇದರ ವೆಚ್ಚ 10,000 ರೂ.ಗಳವರೆಗೂ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇಷ್ಟು ವೆಚ್ಚ ಮಾಡಿದರೂ, ಈ ಮೀಟರ್ ಗಳ ಜೀವಿತಾವಧಿ ಕೇವಲ 5 ವರ್ಷಗಳು ಮಾತ್ರ. ಅಂದರೆ, ಪ್ರತಿ ಗ್ರಾಹಕರಿಗೆ ಒಂದು ಮೀಟರ್ ಗಾಗಿಯೇ ವರ್ಷಕ್ಕೆ ರೂ. 2,000 ಹೆಚ್ಚುವರಿ ಹೊರೆಯಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಜನರ ಮೇಲೆ ಅಂದಾಜು ರೂ. 50,000 ಕೋಟಿ ಹೆಚ್ಚುವರಿ ವೆಚ್ಚವನ್ನು ಹೇರಲಾಗುತ್ತದೆ. ಈ ಯೋಜನೆಯ ಕ್ರೌರ್ಯ ಇಲ್ಲಿಗೆ ನಿಲ್ಲುವುದಿಲ್ಲ. ಖಾಸಗಿ ಕಂಪನಿಗಳು ಗ್ರಾಹಕರ ಹಣದಿಂದ ತಮ್ಮ ವ್ಯವಹಾರವನ್ನು ನಡೆಸುತ್ತವೆ. ಕಡ್ಡಾಯ

ಮೀಟರ್ ನಲ್ಲಿ ಪ್ರಿಪೇಯ್ಡ್ ಹಣ ಖಾಲಿಯಾದರೆ ಅಥವಾ ಅದರಲ್ಲಿ ತಾಂತ್ರಿಕ ದೋಷ ಉಂಟಾದರೆ, ಸ್ವಯಂಚಾಲಿತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಬಡವರಿಗೆ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಲಾಗುತ್ತದೆ. ವೇರಿಯಬಲ್ ಬೆಲೆಗಳು, ವೈಯಕ್ತಿಕ ಡೇಟಾ ಸಂಗ್ರಹಣೆ, ಸೈಬರ್ ದಾಳಿಯ ಅಪಾಯಗಳು ಜನರ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುತ್ತವೆ. ಇದರಿಂದ ಪಾರಾಗಲು ಜನತೆ ಹೋರಾಟಕ್ಕೆ ಇಳಿಯಬೇಕಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿನ ರಹಸ್ಯ ಕಾರ್ಯಸೂಚಿಯನ್ನು ಗುರುತಿಸಿ, ಅವುಗಳನ್ನು ಜನರ ನಡುವೆ ಬಹಿರಂಗಪಡಿಸಿ, ಜನರನ್ನು ಹೋರಾಟಕ್ಕೆ ಆಣಿನೆರಸಬೇಕಿದೆ. ಈ ವಿಷಯದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ ನಮಗೆ ದಾರಿ ದೀಪವಾಗುತ್ತದೆ.
ಹೋರಾಟದ ಮೂಲಕ ತಡೆಹಿಡಿದ ಪಶ್ಚಿಮ ಬಂಗಾಳ ಜನತೆ
ಪಶ್ಚಿಮ ಬಂಗಾಳದಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಯೋಜನೆಯ ವಿರುದ್ಧ ಅಲ್ಲಿನ ವಿದ್ಯುತ್ ನೌಕರರು ಮತ್ತು ಜನತೆ ಒಟ್ಟಾಗಿ ಹೋರಾಟ ನಡೆಸಿದ ಪರಿಣಾಮ ಅಲ್ಲಿನ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿದೆ. 15 ವರ್ಷಗಳಲ್ಲಿ ಇದೇ ಮೊದಲ ಇಂತಹ ಪ್ರತಿಭಟನೆಯನ್ನು ಕಂಡಿದೆ. ಇದು ಐತಿಹಾಸಿಕ ವಿಜಯವಾಗಿದ್ದು, ಇದು ತೃಣಮೂಲ ಸರ್ಕಾರದ ಜನವಿರೋಧಿ ನೀತಿಗಳನ್ನು ಬಾರಿಗೆ ಪಶ್ಚಿಮ ಬಂಗಾಳ ರಾಜ್ಯವು ಜನರಿಂದ ಸಂಘಟಿತವಾಗಿ ಹಿಮ್ಮೆಟ್ಟಿಸಲು ಕಾರಣವಾಗಿದೆ. ಕಡ್ಡಾಯ
ಆಧುನಿಕ ಹೋರಾಟದ ತಂತ್ರ
ಪಶ್ಚಿಮ ಬಂಗಾಳದಲ್ಲಿ ಭಾರತೀಯ ವಿದ್ಯುತ್ ನೌಕರರ ಒಕ್ಕೂಟ (EEFI) ನೇತೃತ್ವದ ಈ ಆಂದೋಲನವು ಆರಂಭದಲ್ಲಿ ಸಮಸ್ಯೆಯ ರಹಸ್ಯ ಕಾರ್ಯಸೂಚಿಯನ್ನು ಗುರುತಿಸಿ ಜನರ ನಡುವೆ ಬಹಿರಂಗಪಡಿಸಿತು. ಆದರೆ ಅದರ ನಿಜವಾದ ಶಕ್ತಿ ವಿದ್ಯುತ್ ವಲಯದ ಉದ್ಯೋಗಿಗಳಿಂದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಮತ್ತು MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಗಳಿಗೆ ವಿಸ್ತರಿಸುವುದರಲ್ಲಿತ್ತು. ಪ್ರತಿ ಜಿಲ್ಲೆಯಲ್ಲಿಯೂ ಗ್ರಾಹಕ-ನೌಕರರ ಸಮ್ಮೇಳನಗಳನ್ನು ನಡೆಸಲಾಯಿತು.
ಗ್ರಾಮ ಪಂಚಾಯತ್ ಮತ್ತು ವಾರ್ಡ್‌ವಾರು ಸಭೆಗಳು, ರೈತರೊಂದಿಗೆ ನೂರಾರು ಸಂಭಾಷಣೆಗಳು, ನಿವಾಸಿಗಳ ಸಂಘಗಳೊಂದಿಗೆ ವ್ಯಾಪಕ ಪ್ರಚಾರದಂತಹ ಸಮಗ್ರ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ದೂರದ ಹಳ್ಳಿಗಳಲ್ಲಿಯೂ ಸಹ ಜನರು ತಂಡ ತಂಡವಾಗಿ ಬಂದು ಈ ಸಂಕೀರ್ಣ ತಾಂತ್ರಿಕ ಸಮಸ್ಯೆಯನ್ನು ಗಮನವಿಟ್ಟು ಆಲಿಸಿದರು. ಬೀದಿ ಬದಿಯಲ್ಲಿರುವ ಸಣ್ಣ ಕೂಟಗಳು ದೊಡ್ಡ ಕೂಟಗಳಾಗಿ ಬೆಳೆಯಲು ಪ್ರಾರಂಭಿಸಿದವು. ಜನರು ತಮ್ಮ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುವ ಈ ಯೋಜನೆಯ ವಿರುದ್ಧ ತಮ್ಮದೇ ಆದ ಬಂಡಾಯದ ರೀತಿಯಲ್ಲಿ ಒಟ್ಟುಗೂಡಿದರು.
ಗೆಲುವಿನ ಸವಿಯಾದ ಕ್ಷಣಗಳು
ಡಿಸೆಂಬರ್ 2023ರಲ್ಲಿ, ಪಶ್ಚಿಮ ಬಂಗಾಳದ 37 ಲಕ್ಷ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ಪ್ರತಿಭಟನೆಯ ತೀವ್ರತೆಯಿಂದಾಗಿ ಸರ್ಕಾರ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. 2024ರಲ್ಲೂ ಇಡೀ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. 2024ರ ಅಂತ್ಯದ ವೇಳೆಗೆ ಕೆಲವು ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಮೋಸದ ಪ್ರಯತ್ನಗಳು ನಡೆದಾಗ ಜನರ ಕೋಪ ಭುಗಿಲೆದ್ದಿತು. ಸರಿಯಾದ ಅಧಿಸೂಚನೆಯಿಲ್ಲದೆ ಅಸ್ತಿತ್ವದಲ್ಲಿರುವ ಮೀಟರ್ ಗಳನ್ನು ಬದಲಾಯಿಸುವುದು ಮತ್ತು ಹೆಚ್ಚಿನ ಶುಲ್ಕ ವಿಧಿಸುವಂತಹ ಅಕ್ರಮಗಳು ಸಾರ್ವಜನಿಕರ ವಿರೋಧವನ್ನು ಮತ್ತಷ್ಟು ತೀವ್ರಗೊಳಿಸಿದವು. ಸಿಐಟಿಯು ನೇತೃತ್ವದಲ್ಲಿ ವಿದ್ಯುತ್ ವಿತರಣಾ ಕಚೇರಿಗಳ ಹೊರಗೆ ತೀವ್ರ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗಳು ರಾಜ್ಯಾದ್ಯಂತ ಹರಡುತ್ತಿದ್ದಂತೆ, ಸಾರ್ವಜನಿಕ ವಿರೋಧದ ಬಲ ಮತ್ತು ಯೋಜನೆಯ ವ್ಯಾಪಕ ತಿರಸ್ಕಾರವನ್ನು ಸರ್ಕಾರ ಒಪ್ಪಿಕೊಳ್ಳಬೇಕಾಯಿತು. ಅಂತಿಮವಾಗಿ, ಪಶ್ಚಿಮ ಬಂಗಾಳ ಸರ್ಕಾರವು ಇಡೀ ಯೋಜನೆಯನ್ನು ಹಿಂತೆಗೆದುಕೊಂಡಿತು.
ನಮಗೆ ಪಾಠಗಳು
ಈ ಗೆಲುವು ನಮಗೆ ಹಲವು ಪ್ರಮುಖ ಪಾಠಗಳನ್ನು ಕಲಿಸುತ್ತದೆ. ಸರಿಯಾದ ಸಮಸ್ಯೆ ಗುರುತಿಸುವಿಕೆ ಮತ್ತು ಸರಿಯಾದ ಸಾರ್ವಜನಿಕ ಅರಿವು ಗೆಲುವಿಗೆ ಆಧಾರವಾಗಿದೆ. ಸೇವಾ ವಲಯದ ಸೇವೆಗಳನ್ನು ಬಳಸುವ ಗ್ರಾಹಕರೊಂದಿಗೆ ಸೇರಿಕೊಂಡಾಗ, ಹೋರಾಟದ ಶಕ್ತಿ ಹಲವು ಪಟ್ಟು ಹೆಚ್ಚಾಗುತ್ತದೆ. ಖಾಸಗೀಕರಣದ ಸಂಕೀರ್ಣ ಮತ್ತು ವಿಕಸನಗೊಳ್ಳುತ್ತಿರುವ ರೂಪಗಳನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ನವ ಉದಾರವಾದಿ ಪ್ರತಿರೋಧದ ಹೃದಯಭಾಗದಲ್ಲಿದೆ. ಪಶ್ಚಿಮ ಬಂಗಾಳದ ಜನರ ಈ ಗೆಲುವು ಕತ್ತಲೆಯ ಕಾಲದಲ್ಲಿ ಭರವಸೆಯ ದಾರಿದೀಪವಾಗಿ ನಿಂತಿದೆ. ಇದು ಸಾಮೂಹಿಕ ಹೋರಾಟದ ಶಕ್ತಿಯನ್ನು ಪುನರುಚ್ಚರಿಸುತ್ತದೆ ಮತ್ತು ಭವಿಷ್ಯದ ಲೆಕ್ಕವಿಲ್ಲದಷ್ಟು ಜನ ಚಳುವಳಿಗಳಿಗೆ ಬಾಗಿಲು ತೆರೆಯುತ್ತದೆ. ನಿಸ್ಸಂದೇಹವಾಗಿ, ಇದು ಜನ ಚಳುವಳಿಗಳಲ್ಲಿ ನಂಬಿಕೆಯನ್ನು ಮನೆರುಜ್ಜಿವನಗೊಳಿಸುವ ಐತಿಹಾಸಿಕ ವಿಜಯವಾಗಿದೆ.
ಸ್ಮಾರ್ಟ್ ಮೀಟರ್ ಗಳನ್ನು ಏಕೆ ವಿರೋಧಿಸಬೇಕು ?
1) ಈಗ ನಾವು ಮೊದಲು ವಿದ್ಯುತ್ ಬಳಸುತ್ತೇವೆ. ನಂತರ ವಿದ್ಯುತ್ ಬಿಲ್ ಪಾವತಿಸುತ್ತೇವೆ. ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಯಲ್ಲಿ, ನಾವು ಮೊದಲು ಪಾವತಿಸಬೇಕು. ನಂತರ ವಿದ್ಯುತ್ ಬಳಸಬಹುದು. ಉದಾಹರಣೆಗೆ, ಮೊಬೈಲ್ ಫೋನ್ ನಲ್ಲಿ, ಮೊದಲು ಪಾವತಿಸಿ, ನಂತರ ಮಾತನಾಡಬಹುದು. ಹಣ ಖಾಲಿಯಾದಾಗ, ವಿದ್ಯುತ್ ಮೀಟರಿಂಗ್ ಕಂಪನಿಯ ತಪ್ಪಿನಿಂದಾಗಿ ಹಣ ಖಾಲಿಯಾಗಿದ್ದರೂ, ಪ್ರಾಯೋಗಿಕವಾಗಿ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಸಂಪರ್ಕವು ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ.
2) ಈಗ ರಾಜ್ಯ ಸರ್ಕಾರ ಗ್ರಾಹಕರಿಗೆ ಕೊಡುತ್ತಿರುವ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೃಷಿ ಗ್ರಾಹಕರಿಗೆ ಪರಸ್ಪರ ಸಬ್ಸಿಡಿಗಳನ್ನು ಅವರ ಫೀಡರ್ ಗಳನ್ನು ಬೇರ್ಪಡಿಸುವ ಮೂಲಕ ಹಿಂತೆಗೆದುಕೊಳ್ಳಲಾಗುತ್ತದೆ. ಇದರ ಪರಿಣಾಮವಾಗಿ, ದೇಶದ ಕೃಷಿ ವ್ಯವಸ್ಥೆಯು ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
3) ನೇರ ಲಾಭ ವರ್ಗಾವಣೆ(ಡಿಬಿಟಿ)ಯನ್ನು ಪರಿಚಯಿಸಲಾಗುವುದು. ಅಂದರೆ, ರಾಜ್ಯ ಸರ್ಕಾರವು ಸಬ್ಸಿಡಿ ನೀಡಲು ಬಯಸಿದರೆ, ಅದನ್ನು ನೇರವಾಗಿ ಬ್ಯಾಂಕಿಗೆ ವರ್ಗಾಯಿಸಲಾಗುತ್ತದೆ. ಆಡುಗೆ ಅನಿಲದ ಸಬ್ಸಿಡಿ ವಿಷಯದಲ್ಲಿ ಇದನ್ನು ಈಗಾಗಲೇ ಪರಿಚಯಿಸಲಾಗಿದೆ. ನಂತರ ಫಲಿತಾಂಶ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ.
4) ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಯು ಗ್ರಾಹಕರನ್ನು ನೇರವಾಗಿ ಮುಕ್ತ ಮಾರುಕಟ್ಟೆಗೆ ತಳ್ಳುತ್ತದೆ. ವಿದ್ಯುತ್ ದರವು ಆಸಹಜ ದರದಲ್ಲಿ ಹೆಚ್ಚಾಗುತ್ತದೆ. ದಿನದ ವಿವಿಧ ಸಮಯಗಳಲ್ಲಿ ವಿದ್ಯುತ್ ಬೆಲೆಗಳು ಬದಲಾಗುತ್ತವೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ, ವಿದ್ಯುತ್ ಬೆಲೆಗಳು ಸಾಮಾನ್ಯ ಜನರ ವ್ಯಾಪ್ತಿಯನ್ನು ಮೀರುತ್ತವೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ, ಪ್ರತಿ ಯೂನಿಟ್ ವಿದ್ಯುತ್ ಬೆಲೆ ಮತ್ತಷ್ಟು ಹೆಚ್ಚುತ್ತದೆ.
5) ವಿತರಣಾ ಕಂಪನಿಗಳು (ESCOM) ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸಿ ಗ್ರಾಹಕರಿಗೆ ಪೂರೈಸುತ್ತದೆ. ಆದರೆ ಸ್ಮಾರ್ಟ್ ಮೀಟರಿಂಗ್ ಕಂಪನಿಯು ಗ್ರಾಹಕರಿಂದ ಹಣ ಸಂಗ್ರಹಿಸುತ್ತದೆ ಮತ್ತು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಹಣವನ್ನು ಹಿಂದಿರುಗಿಸಿದ ನಂತರ ವಿತರಣಾ ಕಂಪನಿಯು ಉಳಿದದ್ದನ್ನು ಪಡೆಯುತ್ತದೆ. ಅಂದರೆ, ವಿತರಣಾ ಕಂಪನಿಯು ತನಗೆ ಅರ್ಹವಾದ ಹಣಕ್ಕಾಗಿ ಮೂರನೇ ವ್ಯಕ್ತಿಯನ್ನು ಅವಲಂಬಿಸಬೇಕಾಗುತ್ತದೆ.
6) ರಾಜ್ಯದ ವಿದ್ಯುತ್ ಸರಭರಾಜು ಕಂಪನಿಗಳು ಆರ್ಥಿಕವಾಗಿ ದುರ್ಬಲಗೊಳ್ಳುತ್ತದೆ. ಖಾಸಗಿ ಕಂಪನಿಗಳು ಲಾಭದಾಯಕ ಪ್ರದೇಶಗಳಲ್ಲಿ ವಿದ್ಯುತ್ ವ್ಯವಹಾರವನ್ನು ಮಾಡುತ್ತವೆ.
7) ಹೆಚ್ಚಿನ ಸಂಖ್ಯೆಯ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ದೇಶೀಯ ಮತ್ತು ವಿದೇಶಿ ಖಾಸಗಿ ಕಂಪನಿಗಳಿಗೆ ವರ್ಗಾಯಿಸಲಾಗುತ್ತದೆ.
8) ಈ ವ್ಯವಸ್ಥೆ ತುಂಬಾ ಅಪಾಯಕಾರಿ ಎಂದು ವಿಶ್ವ ಬ್ಯಾಂಕ್ ಹೇಳುತ್ತದೆ.
9) ಈ ವ್ಯವಸ್ಥೆಯಿಂದ ದೇಶದ ಸಾರ್ವಭೌಮತ್ವ ಮತ್ತು ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ.
ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ Janashakthi Media
