ಬೆಂಗಳೂರು : ಅವನು ಎಸೆದ ಚಪ್ಪಲಿ ಗವಾಯಿವರ ಸಮುದಾಯದ ಶ್ರಮ ಸಂಸ್ಕೃತಿ. ಅದು ಅವನಿಗೆ ಗೊತ್ತಿಲ್ಲ. ಚಪ್ಪಲಿ ಎಸೆದದ್ದು ಗವಾಯಿಯವರ ಮೇಲೆ ಅಲ್ಲ, ವಿಧಾನದ ಮೇಲೆ. ಉತ್ತಮವಾದ ಕಾರ್ಯಸೂಚಿಯನ್ನು ರಚಿಸುವ ಮೂಲಕ ನಾವು ಸಂವಿಧಾನ ಹಾಗೂ ನಮ್ಮ ಸಂರಕ್ಷಣೆಗೆ ಮುಂದಾಗಬೇಕಿದೆ” ಎಂದು… ಪುರುಷೋತ್ತಮ ಬಿಳಿಮಲೆ ಜನತೆಗೆ ಕರೆ ನೀಡಿದರು. ಬೆಂಗಳೂರು
ಇದನ್ನೂ ಓದಿ : ಹಾಸನ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ
ಸುಪ್ರೀಂ ಕೋರ್ಟ್ ನ ಮುಖ್ಯ ನಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ, ಸಂವಿಧಾನ ವಿರೋಧಿ ಘಟನೆಯನ್ನು ಖಂಡಿಸಿ ಇಂದು (ಅಕ್ಟೋಬರ್ 10, 2025) ಪ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತ ಅವರು ಈ ರೀತಿ ಹೇಳಿದರು. ಬೆಂಗಳೂರು
RSS ನೂರರ ಕಾರ್ಯಕ್ರಮಕ್ಕೂ ಈ ಘಟನೆಗೂ ಸಂಬಂಧ ಇದೆ
“RSS ಮತ್ತು ಮನುವಾದಿಗಳು ಹೂಡಿದ ಕುತಂತ್ರಗಳಲ್ಲಿ ಇದೂ ಒಂದು. RSS ನೂರರ ಕಾರ್ಯಕ್ರಮಕ್ಕೂ ಈ ಘಟನೆಗೂ ಸಂಬಂಧ ಇದೆ. ನಾವು ದೊಡ್ಡ ಪ್ರತಿರೋಧವನ್ನು ರೂಪಿಸಿ ತಳಮಟ್ಟದಲ್ಲಿ ಜಾಗೃತಿ ಮಾಡದಿದ್ದರೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ” ಎಂದು ಸಿಪಿಎಂ ಮುಖಂಡರಾದ ಕೆ.ಎಸ್ ವಿಮಲಾ ಎಚ್ಚರಿಸಿದರು. ಬೆಂಗಳೂರು
ದಲಿತ ಸಂಘಟನೆಯ ಮುಖಂಡರಾದ ಮಾವಳ್ಳಿ ಶಂಕರ್ ಅವರು ಮಾತನಾಡಿ, “ಕರ್ನಾಟಕದಲ್ಲಿ 80ರ ದಶಕದಲ್ಲಿ ಜಸ್ಟೀಸ್ ಭೀಮಯ್ಯ ಅವರು ದಲಿತರು ಎಂಬ ಕಾರಣಕ್ಕೆ ಅವರನ್ನು ಹೈಕೋರ್ಟ್ ನ ನ್ಯಾಯಮೂರ್ತಿಯಾಗಲು ಬಿಡಲಿಲ್ಲ. ಇಂದು ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ, ಅಂಬೇಡ್ಕರ್ ಬದಲು ದೇವರನ್ನು ಪೂಜಿಸಿ ಎಂದು …. ಗ್ರಹಮಂತ್ರಿ ಈ ಹಿಂದೆ ಹೇಳಿದ್ದರು” ಎಂದು ಆರೋಪಿಸಿದರು.
8 ಗಂಟೆ ಸಮಯ ತೆಗೆದುಕೊಂಡ ಪ್ರಧಾನಿ
ಈ ದೇಶದಲ್ಲಿ ಇನ್ನೂ ಏನೇನು ನೋಡಬೇಕಿದೆಯೋ ಗೊತ್ತಿಲ್ಲ. ಸಿಜೆಐ ಮೇಲಿನ ದಾಳಿಯನ್ನು ಖಂಡಿಸಲು ಪ್ರಧಾನಿ 8 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಈ ದೇಶವನ್ನು ಉಳಿಸಿರುವುದು, ಉಳಿಸುತ್ತಿರುವುದು ತಳ ಸಮುದಾಯದವರು. ಈ ಪ್ರಕರಣ ನಡೆದ ನಂತರದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇನ್ನೂ ಆಘಾತವಾಗುತ್ತಿದೆ. ಬ್ರಿಟಿಷರ ಬೂಟು ನೆಕ್ಕಿದವರನ್ನು ಕೊಂಡಾಡಿದವರೇ ಇವತ್ತು ಶೂ ಎಸೆದವನನ್ನು ಕೊಂಡಾಡುತಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಈ ಘಟನೆ ಸಮರ್ಥಿಸಿ ಪೋಸ್ಟ್ ಹಾಕುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದ ಇಂದೂದರ ಹೊನ್ನಾಪುರ ಅವರು,
ಸಜ್ಜನರು ದುರ್ಜನರ ಬಗ್ಗೆ ಮಾತನಾಡಬೇಕು ಎಂದರು.
ಅಖಿಲ ಭಾರತ ವಕೀಲರ ಸಂಘದ (AILU) ವೆಂಕಟೇಶ್ ಗೌಡ ಅವರು ಮಾತನಾಡಿ, “ದಲಿತರಾದ ನ್ಯಾ. ಬಿ.ಆರ್.ಗವಾಯಿಯವರು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿರುವುದನ್ನು ಸನಾತನಿಗಳು ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿ ಇಂತಹ ಕೋಮುಕೃತ್ಯಗಳನ್ನು ನಡೆಸುತ್ತಿದ್ದಾರೆ. ಶೂ ಎಸೆದವನೊಬ್ಬ ಭಯೋತ್ಪಾದಕ, ಮತಾಂಧ” ಎಂದು ಆರೋಪಿಸಿದರು.
ಅಂಬೇಡ್ಕರ್ ಹೆಸರು ಹೇಳುವ ಎಂಪಿ, ಎಂಎಲ್ ಎಗಳು ರಾಜಿನಾಮೆ ನೀಡಿ
, “ಶಿಕ್ಷಣ, ಸಂಘಟನೆ, ಹೋರಾಟ ಈಗಲೂ ಅನುಕರಣೀಯ ಘೋಷಣೆಗಳು. ಸನಾತನವಾದಿಗಳು ಕುಲಕಂಟಕರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಹೆಸರು ಹೇಳುವ ಸಂಸದರು, ಶಾಸಕರು ನಿಮ್ಮ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಸ್ಥಾನಗಳನ್ನು ದಿಕ್ಕರಿಸಿ ಹೋರಾಟ ನಡೆಸಲು ಮುಂದಾಗಿ ಎಂದು ಕರೆ ನೀಡಿ, ಬಹುತ್ವ ಭಾರತದ ಸರ್ವಜನಾಂಗದ ಶಾಂತಿಯ ತೋಟ, ದೇಶದ ವ್ಯಕ್ತಿತ್ವ ಕೊಲೆ ಮಾಡಿದ ಘಟನೆ ಇದು” ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು
ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಕೂಡ ಗುರುತಿನ ಕಾರಣಕ್ಕೆ ಶೋಷಿತರಾಗಿದ್ದರು, ಗವಾಯಿಯವರೆಗೂ ಇದೇ ಆಗಿದೆ. ಸನಾತನವಾದಿಗಳೂ ನಮ್ಮನ್ನು ಪ್ರೇರೆಪಿಸುವ ಕೆಲಸ ಮಾಡುತ್ತಾರೆ. ದಾಳಿ ನಡೆದಾಗ ನಾವು ತೀವ್ರ ಪ್ರತಿರೋಧ ಒಡ್ಡಬೇಕಿದೆ. ಈಗ ಅವರು ಸುಪ್ರೀಂ ಕೋರ್ಟ್ ನ್ಯಾಯಾದೀಶರನ್ನು ಮುಟ್ಟಿದ್ದಾರೆ. ನಾವಿನ್ನಾದರೂ ಎಚ್ಚೆತ್ತು ಅಧಿಕಾರದಿಂದ ಅವರನ್ನು ಸರಿಸಬೇಕಿದೆ” ಎಂದು ಶಿಕ್ಷಣ ತಜ್ಞ…. ಬಿ.ಶ್ರೀಪಾದ್ ಭಟ್ ಹೇಳಿದರು.
ನಾವು ಎಚ್ಚೆತ್ತುಕೊಳ್ಳಬೇಕಿದೆ
ಬಿ.ಆರ್. ಅಂಬೇಡ್ಕರ್, ಬಿ.ಆರ್. ಗವಾಯಿ ಈ ದೇಶದ ರಕ್ಷಕರು. ರಕ್ಷಕರ ಮೇಲೆ ನಡೆದ ದಾಳಿಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಸಂವಿಧಾನದ ಆಶಯ ಏನು ಎಂಬುದನ್ನು ನಾವು ಜನರೆಡೆಗೆ ಒಯ್ಯಬೇಕಿದೆ. ನ್ಯಾಯಾಂಗ ನಮ್ಮ ಕೈಯಿಂದ ತಪ್ಪಿಹೋಗುತ್ತದೆ ಎಂದು ಮನುವಾದಿಗಳು ಇಂತಹ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಅಂತಿಮವಾದ ಹೋರಾಟಕ್ಕೆ ನಾವು ಮುನ್ನುಡಿ ಹಾಡಬೇಕಿದೆ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.
ಪ್ರತಿಭಟನೆಯಲ್ಲಿ ದಲಿತ,ಕಾರ್ಮಿಕ,ವಿದ್ಯಾರ್ಥಿ, ರೈತ, ಯುವಜನ, ಮಹಿಳಾ ಸಂಗಟನೆಗಳ ನಾಯಕರು ಇದ್ದರು.
ಇದನ್ನೂ ನೋಡಿ : ಬಿಪಿಎಲ್ ರೇಷನ್ ಕಾರ್ಡ್ |”ರದ್ದಿಗೆ ಸಿದ್ದತೆ” ; ತಪ್ಪು ಯಾರದ್ದು?! Janashakthi Media
