ಅಶ್ಲೀಲ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟಸಿ ಹಾಕಿದ್ಧ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ವಿಡಿಯೋದಲ್ಲಿರುವುದು ನಾನೇ. ಅದು ಸಹಮತದ ಲೈಂಗಿಕ ಸಂಪರ್ಕ ಎಂದು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ತನಿಖಾಧಿಕಾರಿ ಎಂ. ಸಿ. ಕವಿತಾ ಎದುರು ವಿಚಾರಣೆಗೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಗೂ ಒಳಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಾಜೆಕ್ಟ್ ವಿಚಾರವಾಗಿ ಯುವತಿ ನನ್ನನ್ನು ಭೇಟಿ ಮಾಡಿದ್ದಳು.ಆಕೆಯೊಂದಿಗೆ ಸಂಪರ್ಕದಲ್ಲಿ ಇದ್ದದ್ದು ನಿಜ. ಆದರೆ, ನನಗೆ ಗೊತ್ತಿಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಅವರು ತನಿಖಾಧಿಕಾರಿ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ನ್ಯಾಯಾಲಯದತ್ತ ಯುವತಿ – ಕೋಲ್ಹಾಪುರದತ್ತ ರಮೇಶ್ ಜಾರಕಿಹೊಳಿ!!
ಸಹಮತದ ಲೈಂಗಿಕ ಸಂಪರ್ಕವನ್ನೇ ಅತ್ಯಾಚಾರವೆಂದು ಬಿಂಬಿಸಲು ಹೊರಟಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಮೇಶ್ ಜಾರಕಿಹೊಳಿ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಈ ಸಿ.ಡಿ ಹೊರ ಬಿದ್ದಾಗ ರಮೇಶ್ ಜಾರಕಿಹೊಳಿ, ಇದನ್ನು ನಕಲಿ ವೀಡಯೊ ಎಂದು ಸಮರ್ಥಿಸಿಕೊಂಡಿದ್ದಲ್ಲದೇ, ನನ್ನನ್ನು ರಾಜಕೀಯ ಕುತಂತ್ರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ಕೊನೆಗೆ ತಪ್ಪು ಒಪ್ಪಿಕೊಳ್ಳುವ ಮೂಲಕ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.