ಬೆಂಗಳೂರು : ಈಗಾಗಲೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವಂತ ಸಿಡಿಯಲ್ಲಿನ ಯುವತಿಯೂ ಮೊದಲ ವೀಡಿಯೋದಲ್ಲಿ ತನಗೆ ರಕ್ಷಣೆ ನೀಡುವಂತೆ ಕೋರಿದ್ದರು. ಇದೀಗ ಎರಡನೇ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಆ ವೀಡಿಯೋದಲ್ಲಿ ತನ್ನ ತಂದೆ-ತಾಯಿಗಳು ಎಸ್ ಐಟಿ ಮುಂದೆ ಸ್ವಇಚ್ಛೆಯಿಂದ ದೂರು ನೀಡಿಲ್ಲ. ಅವರಿಗೂ ಭಯವಿದೆ. ಅವರಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಸಿಡಿ ಸಂತ್ರಸ್ತ ಯುವತಿಯಿಂದ 2ನೇ ವೀಡಿಯೋ ಹೇಳಿಕೆ ರಿಲೀಸ್ : ಏನ್ ಹೇಳಿದ್ದಾರೆ ಗೊತ್ತಾ.? pic.twitter.com/kreDAJE0we
— Vasantha B Eshwaragere (@vasanthabeshwar) March 25, 2021
ಈ ಕುರಿತಂತೆ ಇಂದು ಅಜ್ಞಾತ ಸ್ಥಳದಿಂದ ಸಿಡಿ ಲೇಡಿ 2ನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, 100% ಗೊತ್ತು ನಮ್ಮ ಅಪ್ಪ ಸ್ವ ಇಚ್ಛೆಯಿಂದ ದೂರು ಕೊಟ್ಟಿಲ್ಲ. ಯಾಕೆಂದ್ರೇ ನಮ್ಮ ತಂದೆ-ತಾಯಿಗಳಿಗೆ ನಾ ಏನು ಅಂತ ಗೊತ್ತು. ನಮ್ಮ ತಂದೆ-ತಾಯಿ ಯಾವಾಗ ಸೇಫ್ ಆಗಿದ್ದಾರೆ ಅಂತ ಗೊತ್ತಾಗುತ್ತೋ ಆಗ ನಾನು ಎಸ್ ಐಟಿ ಮುಂದೆ ತನಿಖೆಗೆ ಹಾಜರಾಗುತ್ತೇನೆ ಎಂದಿದ್ದಾರೆ.
ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಬಸವರಾಜ್ ಬೊಮ್ಮಾಯಿಗೆ ಕೇಳಿಕೊಳ್ಳೋದಷ್ಟೇ.. ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಿಸಿ. ನಾನು 12ನೇ ತಾರೀಕಿಗೆ ಎಸ್ ಐಟಿ ಅಧಿಕಾರಿಗಳಿಗೆ ವೀಡಿಯೋ ನೀಡುತ್ತೇನೆ. ಆದ್ರೇ 13ನೇ ತಾರೀಕಿನಂದೇ ವೀಡಿಯೋ ಬಿಡುಗಡೆ ಆಗುತ್ತದೆ. ಈಗ ಹೇಳಿ ಎಸ್ ಐಟಿ ಅವರು ಯಾರ ಪರವಾಗಿದ್ದಾರೆ ಅಂತ ನಂಬೋದು ಎಂದು ಆರೋಪಿಸಿದ್ದಾರೆ.