ವಾಲ್ಮೀಕಿ ನಿಗಮ ಹಗರಣ : ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್‌ ಆತ್ಮಹತ್ಯೆ

ಬೆಂಗಳೂರು :  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ  ಲೆಕ್ಕ ಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆಗೆ ಆಡಳಿತ ನಿರ್ದೇಶಕ ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರುಶರಾಮ್  ಕಾರಣ ವಿಶೇಷ ತನಿಖಾ (SIT) ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ  ಜಿಲ್ಲಾಸತ್ರ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರೋಪ ಪಟ್ಟಿಯಲ್ಲಿ ನಿಗಮದ ಹಗರಣದಲ್ಲಿ ಒಂದಷ್ಟು ಹಣವನ್ನು ಚಂದ್ರಶೇಖರ್ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಪದ್ಮನಾಭ್ ಮತ್ತು ಪರಶುರಾಮ್‌ ಒತ್ತಡ ಹಾಕಿದ್ದರು. ನೀನು ಹಣವನ್ನು ಪಡೆದುಕೊಂಡಿದ್ದಿ. ಪ್ರಕರಣ ಬೆಳಕಿಗೆ ಬಂದರೆ ನೀನೊಬ್ಬನೇ ಜೈಲಿಗೆ ಹೋಗಬೇಕಾಗುತ್ತದೆ. ನಿನ್ನ ವಿರುದ್ಧ ನಾವೇ ದೂರು ಕೊಡುತ್ತೇನೆ ಎಂದು ಭಯಬೀಳಿಸಿದ್ದರು. ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

300 ಪುಟಗಳ ದೋಷಾರೋಪ ಪಟ್ಟಿಗೆ ಚಂದ್ರಶೇಖರ್‌ ಪತ್ನಿ ಮತ್ತು ನಿಗಮದ ಅಧಿಕಾರಿಗಳನ್ನು ಎಸ್ ಐಟಿ ಸಾಕ್ಷ್ಯವನ್ನಾಗಿ ಮಾಡಿದೆ. ಈ ಪ್ರಕರಣದಲ್ಲೂ ನಾಗೇಂದ್ರ ಅವರ ಹೆಸರನ್ನು ಎಸ್‌ಐಟಿ ಕೈ ಬಿಟ್ಟಿದೆ.

ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿರುವುದಾಗಿ ಆರೋಪಿಸಿ ಅಧಿಕಾರಿ ಚಂದ್ರಶೇಖರ್ ಅವರು ಮೇ 26ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರವಾಗಿ ವಿಪಕ್ಷ ಬಿಜೆಪಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್ ನ ವಿರುದ್ಧ ಮುಗಿಬಿದ್ದಿತ್ತು. ಇಲ್ಲಿನ ಹಣವನ್ನು ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುವಾವಣೆಗಾಗಿ ಬಳಸಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ ಐಟಿ ತನಿಖೆಗೆ ಆದೇಶಿಸಿತ್ತು.

Donate Janashakthi Media

Leave a Reply

Your email address will not be published. Required fields are marked *