ಮಂಗಳೂರು | ಚಿನ್ನಯ್ಯನ ವಿರುದ್ಧ ದೂರು ಕೊಡಲು ಸೌಜನ್ಯಾ ತಾಯಿ ಎಸ್ ಐಟಿ ಕಚೇರಿಗೆ ಆಗಮನ

ಮಂಗಳೂರು: .ಸೌಜನ್ಯಾ ಪ್ರಕರಣದಲ್ಲಿ ಚಿನ್ನಯ್ಯನ ತನಿಖೆ ಮಾಡುವಂತೆ ಕುಸುಮಾ ದೂರಿನಲ್ಲಿ ಕೇಳಿಕೊಂಡಿದ್ದಾರೆ. ಸೌಜನ್ಯಾ ಹೆಣವನ್ನು ತೆಗೆದುಕೊಂಡು ಹೋಗಿರುವುದು ನೋಡಿದ್ದಾಗಿ ಚಿನ್ನಯ್ಯ ಹೇಳಿದ್ದರು. ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಸೌಜನ್ಯಾ ತಾಯಿ ಕುಸುಮಾ ಆಗಮಿಸಿ, ಚಿನ್ನಯ್ಯನ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ

ಎಸ್‌ಐಟಿ ಅಧಿಕಾರಿಗಳು ನಾವು ಸೂಚಿಸಿದ ಬಳಿಕ ಬಂದು ದೂರು ನೀಡುವಂತೆ ವಾಪಸ್ ಕಳಿಸಿದ್ದಾರೆ. ಚಿನ್ನಯ್ಯ ಹೇಳಿಕೆ ಆಧರಿಸಿ ದೂರು ಕೊಡಲು ಆಗಮಿಸಿದ್ದಾರೆ. ಎಸ್ ಐಟಿಗೆ ಪ್ರಕರಣ ಹೋಗುವ ಮೊದಲು ಚಿನ್ನಯ್ಯ ಯೂಟ್ಯೂಬ್ ಗೆ ಸಂದರ್ಶನ ಕೊಡುವಾಗ ಈ ಹೇಳಿಕೆ ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪಿನ ಸ್ಪೂರ್ತಿಯನ್ನು ಜಾರಿಗೊಳಿಸಲು ಅಲೆಮಾರಿ ಸಮುದಾಯ ಮತ್ತು ಅತೀ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿಯ ಮತ್ತೊಂದು ವರ್ಗೀಕರಣ ಮಾಡಬೇಕು – ಸಿಪಿಐ(ಎಂ)

ಚಿನ್ನಯ್ಯ ಕೆಲಸ ಮಾಡುವ ವೇಳೆಯಲ್ಲಿ 2012 ರಲ್ಲಿ ಸೌಜನ್ಯ ಹತ್ಯೆ ಹಾಗೂ ಅತ್ಯಾಚಾರ ಆಗಿತ್ತು. ಆಕೆಯ ಹೆಣ ಹೊತ್ತುಕೊಂಡು ಹೋಗುವುದನ್ನು ನಾನು ನೋಡಿದ್ದೆ ಎಂದು ಚಿನ್ನಯ್ಯ ಯೂಟ್ಯೂಬ್‌ ಸಂದರ್ಶನಕ್ಕೆ ಹೇಳಿದ್ದರು. ಹೀಗಾಗಿ ಪ್ರಕರಣದಲ್ಲಿ ಆತನನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಮನವಿಯಲ್ಲಿ ಹೇಳಿದ್ದಾರೆ. ದೂರಿನ ಪ್ರತಿಯಲ್ಲಿ ಹೀಗೆ ಬರೆದಿದ್ದಾರೆ ಎನ್ನಲಾಗಿದೆ.

ಆದರೆ ಪೂರ್ವಾನುಮತಿ ಇಲ್ಲದೆ ಇರುವ ಕಾರಣ ಅಧಿಕಾರಿಗಳು ಕುಸುಮಾ ಅವರನ್ನು ವಾಪಸ್ ಕಳಿಸಿದ್ದಾರೆ. ಅಲ್ಲದೆ ಈ ಹಿಂದೆಯೇ ಗೃಹ ಸಚಿವ ಜಿ ಪರಮೇಶ್ವರ್, ಎಸ್‌ಐಟಿ ತನಿಖೆಯಲ್ಲಿ ಸೌಜನ್ಯಾ ಪ್ರಕರಣವನ್ನು ರಿ ಓಪನ್ ಮಾಡುವ ಪ್ರಮೇಯ ಇಲ್ಲ ಎಂದಿದ್ದರು. ಪೂರ್ವಾನುಮತಿ ಹಾಗೂ ಎಸ್‌ಐಟಿಯಲ್ಲಿ ಈ ಬಗ್ಗೆ ಸಮಯ ನಿಗದಿಯಾಗದ ಕಾರಣ ಹಿಂದೆ ಕಳಿಸಿದ್ದು, ಸೂಚನೆ ಕೊಟ್ಟ ಬಳಿಕ ಮತ್ತೆ ಎಸ್‌ಐಟಿ ಮುಂದೆ ಬರಲಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *