ಬೆಂಗಳೂರು : ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗ ಪ್ರಕರಣ ಮತ್ತು ಬಿಎಸ್‌ವೈ ಸರ್ಕಾರದ ಆರು ಸಚಿವರು ಕೋರ್ಟ್ ಮೆಟ್ಟಿಲೇರಿರುವುದರ ಕುರಿತಂತೆ ಸದನದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇತ್ತ ಗೃಹ ಸಚಿವರು ಮತ್ತು ಎಸ್.ಐ.ಟಿ ಮುಖ್ಯಸ್ಥರು ಮುಖಾಮುಖಿಯಾಗಿ ಚರ್ಚೆ ನಡೆಸಿದ್ದಾರೆ.
ಇದನ್ನು ಓದಿ : ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಸಚಿವರು
ಗೃಹ ಸಚಿವ ಬೊಮ್ಮಾಯಿ ಅವರನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಭೇಟಿಮಾಡಿ ಚರ್ಚೆ ನಡೆಸಿರೋದು ಭಾರೀ ಕೂತುಹಲಕ್ಕೆ ಕಾರಣವಾಗಿದೆ.
ವಿಧಾನಸೌಧದಲ್ಲಿ ವಿಪಕ್ಷ ನಾಯಕರು ಸಿಡಿ ವಿಚಾರ ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿಬೇಕು, ಯುವತಿಗೆ ರಕ್ಷಣೆ ನೀಡಬೇಕು ಎಂದು ವಿಪಕ್ಷದ ನಾಯಕರು ಬಿಎಸ್ ವೈ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸದನದ ಭಾವಿಗಿಳಿದು ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದರೆ, ಇತ್ತ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿಧಾನಸೌಧಕ್ಕೆ ಆಗಮಿಸಿ ಗೃಹ ಸಚಿವ ಬೊಮ್ಮಾಯಿಯವರನ್ನು ಬೇಟಿಯಾದ ಹಿನ್ನಲೇ ಏನಿರಬಹುದು ಎಂಬ ಹಲವು ಪ್ರಶ್ನೆಗಳು ಸೃಷ್ಠಿಯಾಗಿವೆ. ಇದು ಗುಪ್ತಸಭೆ ಮಾಧ್ಯಮಗಳಿಗೆ ಪ್ರತಿಕ್ರಿಸುವುದಿಲ್ಲ ಎಂದು ಸೌಮೇಂದು ಮುಖರ್ಜಿ ತಿಳಿಸಿದರು.