ಧರ್ಮಸ್ಥಳ ಕೊಲೆ ಪ್ರಕರಣ | ದೂರುದಾರನ ಪರ ಎಸ್‌ಐಟಿ ಮುಂದೆ ಬಂದ 6 ಜನ ಸ್ಥಳೀಯರು!

ಮಂಗಳೂರು : ಶವ ಹೂತಿಟ್ಟ ಪ್ರಕರಣಕ್ಕೆ ಧರ್ಮಸ್ಥಳ ಗ್ರಾಮದಲ್ಲಿ ಇಂದು ರೋಚಕ ತಿರುವು ಸಿಗುವ ಸಾಧ್ಯತೆಯಿದೆ. 13ನೇ ಪಾಯಿಂಟ್​​ನಲ್ಲಿ ಇಂದು ಕಾರ್ಯಾಚರಣೆ ನಡೆಯುತ್ತಿದೆ. ಧರ್ಮಸ್ಥಳ

SIT ತನಿಖಾಧಿಕಾರಿ ಜಿತೇಂದ್ರ ಕುಮಾರ್​​ ಡಿಯಲ್​​ ನೇತೃತ್ವದಲ್ಲಿ 13ನೇ ಪಾಯಿಂಟ್​​ನಲ್ಲಿ ಸಾಕಷ್ಟು ಕಳೇಬರಹ ಪತ್ತೆಯಾಗುವ ಸಾಧ್ಯತೆಯಿದೆ. ಇದೀಗ 6 ಸ್ಥಳೀಯರು SIT ಮುಂದೆ ಬರಲು ರೆಡಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ದಲಿತ ಮಹಿಳೆಯರು – ಯುವಕನ ಮೇಲೆ ಜಾತಿ ದೌರ್ಜನ್ಯ ಎಸಗಿರುವವರನ್ನು ಬಂಧಿಸಿ: ಡಿಎಚ್ಎಸ್

6 ಸ್ಥಳೀಯರು  ಸಾಕ್ಷಿ ಹೇಳಲು ಮುಂದಾಗಿದ್ದು  ಹೆಣ ಹೂತು ಹಾಕಿದ್ದನ್ನು ನೋಡಿದ್ದನ್ನು  ಶೋಧಕಾರ್ಯಕ್ಕೆ ಸಹಾಯ ಮಾಡ್ತೇವೆಂದು ಮುಂದೆ ಬಂದಿದ್ದಾರೆ. SIT ಅಧಿಕೃತವಾಗಿ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈ 6 ಜನರ ಹೇಳಿಕೆ ಸತ್ಯಾಸತ್ಯತೆ ಬಗ್ಗೆ ಚರ್ಚೆ ನಡೆಯಲಿದೆ.

SIT ಮುಖ್ಯಸ್ಥ ಪ್ರಣಬ್​ ಮೊಹಂತಿ ನೇತೃತ್ವದಲ್ಲಿ ಬಂಟ್ವಾಳ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ DIG ಅನುಚೇತ್, ಜಿತೇಂದ್ರ ಕುಮಾರ್,  AC ಸ್ಟೆಲ್ಲಾ ವರ್ಗೀಸ್, ಕಂದಾಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಭೆಯ ಬಳಿಕ ಉತ್ಖನನ ಕಾರ್ಯಾಚರಣೆ ಶುರು ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ನೋಡಿ : ಶಾಲೆ, ಕಾಲೇಜು ಮತ್ತು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ – ಎಸ್‌ಎಫ್‌ಐ ಪ್ರತಿಭಟನೆ Janashakthi

Donate Janashakthi Media

Leave a Reply

Your email address will not be published. Required fields are marked *