ಕರ್ನಾಟಕ ಎಸ್‌ಐಆರ್‌ : 1.09 ಕೋಟಿ ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿ; ಬೆಂಗಳೂರು ದಕ್ಷಿಣದಲ್ಲಿ ಶೇ.50.32

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಮನೆಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಆಗಸ್ಟ್ 8ರ ಸಂಜೆ 4 ಗಂಟೆಯ ವೇಳೆಗೆ 5.54 ಕೋಟಿ ಮತದಾರರ ಪೈಕಿ 4.45 ಕೋಟಿ ಮತದಾರರ ಚುನಾವಣಾ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಇದು ಒಟ್ಟು ಮತದಾರರ ಶೇ.80.28ರಷ್ಟಾಗಿದೆ. ಇನ್ನೂ 59 ನಮೂನೆಗಳು ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಉಳಿದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಕರ್ನಾಟಕ

ಡಿಜಿಟಲೀಕರಣಗೊಂಡ ಮತದಾರರ ಪೈಕಿ 1,09,29,262 ಮಂದಿಯನ್ನು ಎಎಸ್‌ಡಿಡಿಒ (ASDDO) ಎಂದು ಗುರುತಿಸಲಾಗಿದೆ. ಇದು ರಾಜ್ಯದ ಒಟ್ಟು ಮತದಾರರ ಶೇ.19.72ರಷ್ಟಾಗಿದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದು, ಮತದಾರರು ತಮ್ಮ ವಿವರಗಳನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಪ್ಪಾಗಿ ಎಎಸ್‌ಡಿಡಿಒ ಎಂದು ಗುರುತಿಸಲಾಗಿದ್ದರೆ ಆಗಸ್ಟ್ 17ರವರೆಗೆ ಬಿಎಲ್‌ಒ ಅಥವಾ ಇಆರ್‌ಒ ಮೂಲಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ : ಒಂದು ತಿಂಗಳಿನಿಂದ ಹಿಂಬಾಲನೆ, ಕಿರುಕುಳ: ಕೂರಿಯರ್ ಬಾಯ್ ವಿರುದ್ಧ ಪ್ರಕರಣ

ಜಿಲ್ಲಾವಾರು ಅಂಕಿ-ಅಂಶಗಳಲ್ಲಿ ಎಎಸ್‌ಡಿಡಿಒ ಪ್ರಮಾಣದಲ್ಲಿ ಉಡುಪಿ ಶೇ.5.99ರೊಂದಿಗೆ ಅತಿ ಕಡಿಮೆ ಇದ್ದರೆ, ಬಿಬಿಎಂಪಿ ದಕ್ಷಿಣದಲ್ಲಿ ಶೇ.50.32ರೊಂದಿಗೆ ಅತಿ ಹೆಚ್ಚು ಇದೆ. ಬಿಬಿಎಂಪಿ ಕೇಂದ್ರದಲ್ಲಿ ಶೇ.46.83, ಬಿಬಿಎಂಪಿ ಉತ್ತರದಲ್ಲಿ ಶೇ.46.06 ಮತ್ತು ಬೆಂಗಳೂರು ನಗರದಲ್ಲಿ ಶೇ.43.77ರಷ್ಟು ಮತದಾರರನ್ನು ಎಎಸ್‌ಡಿಡಿಒ ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರಿನಲ್ಲಿ ಶೇ.18.76, ಬಳ್ಳಾರಿಯಲ್ಲಿ ಶೇ.18.18, ಯಾದಗಿರಿಯಲ್ಲಿ ಶೇ.17.90 ಮತ್ತು ಧಾರವಾಡದಲ್ಲಿ ಶೇ.16.88ರಷ್ಟು ಪ್ರಮಾಣ ದಾಖಲಾಗಿದೆ.

ಎಎಸ್‌ಡಿಡಿಒ ಎಂದು ಗುರುತಿಸಲಾದವರಲ್ಲಿ 15,71,849 ಮಂದಿ ಪತ್ತೆಯಾಗದ ಅಥವಾ ಗೈರು ಮತದಾರರು, 65,91,525 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ 16,35,379 ಮಂದಿ ಮೃತಪಟ್ಟ ಮತದಾರರು ಎಂದು ವರ್ಗೀಕರಿಸಲಾಗಿದೆ. ಈಗಾಗಲೇ ಬೇರೆಡೆ ನೋಂದಾಯಿತರಾಗಿರುವ 6,98,479 ಮಂದಿ ಹಾಗೂ ಇತರ ಕಾರಣಗಳಿಂದ 4,32,030 ಮಂದಿಯನ್ನು ಗುರುತಿಸಲಾಗಿದೆ. ಇದೇ ವೇಳೆ ಹೊಸ ಮತದಾರರ ನೋಂದಣಿಗಾಗಿ ಆಗಸ್ಟ್ 7ರವರೆಗೆ 3,90,020 ಫಾರಂ-6 ಅರ್ಜಿಗಳು ಸ್ವೀಕರಿಸಲಾಗಿದ್ದು, ಹೆಸರು ತಿದ್ದುಪಡಿ, ಸೇರ್ಪಡೆ ಮತ್ತು ಅಳಿಸುವಿಕೆ ಸೇರಿದಂತೆ ಒಟ್ಟು 12,56,457 ಅರ್ಜಿಗಳು ಬಂದಿವೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಕರ್ನಾಟಕ

ಇದನ್ನೂ ನೋಡಿ : ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *