ಬೆಂಗಳೂರಿನಲ್ಲಿ ಕಸವನ್ನು ನಿರ್ವಹಣೆ ಮಾಡುವುದಕ್ಕಾಗಿ ಬಿಬಿಎಂಪಿ ಪ್ರತ್ಯೇಕ ಮಂಡಳಿ ರಚಿಸಲು ಮುಂದಾಗಿ. ಬಿಬಿಎಂಪಿ ಈ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಸವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಮಂಡಳಿಯ ಅಗತ್ಯತೆ ಇದೆಯಾ? ಈ ಮಂಡಳಿಗೆ ವಿರೋಧ ಯಾಕೆ ಬರ್ತಾ ಇದೆ. ಕಸದ ನಿರ್ವಹಣೆಗೆ ಇರುವ ದಾರಿ ಯಾವುದು? ಎಂಬ ಪ್ರಶ್ನೆ ಬಿಬಿಎಂಪಿ ಗೆ ಈಗ ತಲೆ ನೋವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ನಿರ್ವಹಣೆ ಬಿಬಿಎಂಪಿಗೆ ದೊಡ್ಡ ಸವಾಲಾಗಿದ್ದು, ಕಸದ ನಿರ್ವಹಣೆಗಾಗಿ ಪ್ರತ್ಯೇಕ ಮಂಡಳಿಯನ್ನು ರಚಿಸಲು ಮುಂದಾಗಿದೆ. ಇದರ ಬೆನ್ನಲ್ಲೆ ಕಸದ ನಿರ್ವಹಣೆಯ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಎಲ್ಲಂದರಲ್ಲಿ ಕಸ ಹಾಕುತ್ತಿರುವುದನ್ನು, ಕಸದ ಗುಡ್ಡೆಗಳನ್ನು ನಾವು ನೋಡ್ತಾ ಇರ್ತೆವೆ, ಸಿಲಿಕಾನ್ ಸಿಟಿ ವಿಸ್ತಾರ 800 ಚ.ಕಿ.ಮೀ ವರೆಗೆ ವಿಸ್ತರಣೆಯಾಗಿದ್ದು, ಸುಮಾರು 1.20 ಕೋಟಿ ಜನಸಂಖ್ಯೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರ ಬೆಳವಣಿಗೆ ಆಗುತ್ತಿರುವುದರಿಂದ ಮೂಲಸೌಕರ್ಯ ಒದಗಿಸುವುದು ಸವಾಲಿನ ಕಾರ್ಯವಾಗಿದೆ. ನಗರದ ತ್ಯಾಜ್ಯ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದ್ದು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಮಾದರಿಯಲ್ಲಿ ಪ್ರತ್ಯೇಕ ಘನತ್ಯಾಜ್ಯ ನಿರ್ವಹಣಾ ಮಂಡಳಿ ಆರಂಭಿಸುವುದು ಅಗತ್ಯವೆನಿಸುತ್ತದೆ. ಪ್ರತಿನಿತ್ಯ ಉತ್ಪಾದನೆಯಾಗುತ್ತಿರುವ ಸುಮಾರು 4,500 ಟನ್ ತ್ಯಾಜ್ಯ ನಿರ್ವಹಣೆ ಹೊರೆಯಾಗಿ ಕಾಡುತ್ತಿದೆ. 10 ಲಕ್ಷಕ್ಕೂ ಅಧಿಕ ತ್ಯಾಜ್ಯ ಉತ್ಪಾದನಾ ಕೇಂದ್ರಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಜತೆಗೆ ರಸ್ತೆಗಳು, ಉದ್ಯಾನಗಳು, ಮಾರುಕಟ್ಟೆಗಳು ಹಾಗೂ ಬ್ಲಾಕ್ ಸ್ಪಾಟ್ಗಳಿಂದ ಹೆಚ್ಚುವರಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.
ಇದನ್ನು ನಿರ್ವಹಣೆ ಮಾಡುವುದಕ್ಕಾಗಿ ಒಂದು ಪ್ರತ್ಯೇಕ ಮಂಡಳಿಯನ್ನು ಮಾಡಬೇಕು ಎಂದು ಬಿಬಿಎಂಪಿ ಯೋಜನೆಯನ್ನು ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ಥಾವನೆಯನ್ನು ಕಳುಹಿಸಲಾಗಿದೆ. ಪ್ರತ್ಯೇಕ ಮಂಡಳಿ ರಚನೆಯಾದರೆ ಕಸ ನಿರ್ವಹಣೆಯ ಜವಬ್ದಾರಿ ಆ ಮನಯವರದ್ದೆ ಆಗಿರುತ್ತದೆ, ಅದಕ್ಕಾಗಿ ಅವರು ಹಣವನ್ನು ಕೊಡಬೇಕಾಗುತ್ತದೆ. ಬಿಬಿಎಂಪಿ ಅಥವಾ ಬಿಬಿಎಂಪಿಯ ಚುನಾಯಿತ ಸದಸ್ಯರನ್ನು ಪ್ರಶ್ನಿಸುವ ಹಕ್ಕನ್ನು ಇದು ಕಸಿಯುತ್ತದೆ. ಅಂದ್ರೆ ಕಸ ತೆಗೆಯುವ ಕುರಿತು ನಾವು ಇವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದರ ವಿರುದ್ದ ಈಗ ಕೂಗು ಎದ್ದು ಬಂದಿದೆ.
ಇನ್ನೂ ಕಸದ ನಿರ್ವಹಣೆಗಾಗಿ ವಿಧಿಸುವ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವುದಕ್ಕಾಗಿ ಧರ ನಿಗದಿ ಮಾಡಲಾಗಿದೆ. ಮನಗೆಳಿಗೆ ಇಂದು ತಿಂಗಳಿಗೆ 200 ರೂ ಹಣ ನಿಗದಿ ಮಾಡಲಾಗಿದೆ. ವಸತಿ ಕಟ್ಟಡಗಳಿಗೆ – 1000 ಚದರ ಅಡಿ ವಿಸ್ತೀರ್ಣಕ್ಕೆ ಒಂದು ತಿಂಗಳಿಗೆ 10 ರೂ, 1000 ದಿಂದ 3000 ಚದರ ಅಡಿ ವಿಸ್ತೀರ್ಣಕ್ಕೆ ಒಂದು ತಿಂಗಳಿಗೆ 30 ರೂ , 3000 ಸಾವಿರ ಮೇಲ್ಪಟ್ಟು ಚದರ ಅಡಿ ವೀಸ್ತೀರ್ಣಕ್ಕೆ 50 ರೂ ದರ ನಿಗದಿ ಮಾಡಲಾಗಿದೆ.
ವಾಣಿಜ್ಯ ಕಟ್ಟಡಗಳಿಗೆ ವಾಣಿಜ್ಯ ಕಟ್ಟಡಗಳಿಗೆ : 1000ದ ವರೆಗಿನ ಚದರ ಅಡಿಗೆ ; 50 ರೂ, 1001 ದಿಂದ 5000 ಚದರ ಅಡಿಗೆ 100 ರೂ, 5000 ಮೇಲ್ಪಟ್ಟ ಚದರ ಅಡಿಗೆ 200 ರೂ ಯನ್ನು ನಿಗದಿ ಪಡಿಸಲಾಗಿದೆ.
ಕೈಗಾರಿಕಾ ಕಟ್ಟಡಗಳಿಗೆ : 1000ದವರೆಗೆ ನ ಚದರ ಅಡಿಗೆ ; 50 ರೂ, 1001– 5000 ಚದರ ಅಡಿಗೆ 200ರೂ 5000 ಮೇಲ್ಪಟ್ಟು; 300 ರೂ ನಿಗದಿ ಮಾಡಲಾಗಿದೆ.
ಹೋಟೆಲ್, ಕಲ್ಯಾಣ ಮಂಟಪ, ಆರೋಗ್ಯಸೇವಾ ಸಂಸ್ಥೆ ಕಟ್ಟಡಗಳಿಗೆ 10,000ದವರೆಗೆ ಚದರ ಅಡಿಗೆ ; 300 ರೂ, 10,000– 50,000 ಚದರ ಅಡಿಗೆ 500 ರೂ , 50,000 ಮೇಲ್ಪಟ್ಟು; 600 ರೂ ನಿಗದಿ ಮಾಡಲಾಗಿದೆ.
ಕಸ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ಅಗತ್ಯವಿಲ್ಲ, ಪ್ರಭಾವಿ ಶಾಸಕರು ಸಚಿವರು ಹಣ ನುಂಗೋದಕ್ಕೆ ಈ ಮಂಡಳಿ ಸಹಾಯ ಮಾಡಬಹುದು ಎಂದು ಅಮ್ ಆದ್ಮಿ ಪಕ್ಷದ ಶಾಂತಲಾ ದಾಮ್ಲೆಯವರು ಆರೋಪಿಸಿದ್ದಾರೆ. ಹಾಗಾದ್ರೆ ಈ ಕಸದ ನಿರ್ವಹಣೆಗೆ ಪರಿಹಾರ ಇಲ್ವಾ? ಬಿಬಿಎಂಪಿ ಮಾಡಬೇಕಿಗಿರುವ ಕೆಲಸವಾದ್ರು ಏನು ಎಂಬ ಪ್ರಶ್ನೆ ಈಗ ಸಹಜವಾಗಿ ಉದ್ಭವಿಸುತ್ತೆ. ಕಸದಿಂದ ಮುಕ್ತಿಯಾಗೋದಕ್ಕೆ ಸಾಧ್ಯವೆ ಇಲ್ಲ, ಕಸದಿಂದ ರಸ ಮಾಡಿದ ಮಾದರಿ ಎಲ್ಲಿಯಾದರೂ ಇದೆಯಾ? ಹೌದು ಖಂಡಿತಾ ಇದೆ, ಕೇರಳದಲ್ಲೇ ಗಬ್ಬು ಜಿಲ್ಲೆ ಎಂದು ಖ್ಯಾತವಾಗಿದ್ದ ಕೊಜಿಕ್ಕೋಡ್(ಕಲ್ಲಿಕೋಟೆ) ಅದನ್ನು ಸುಂದರಗೊಳಿಸಿದ ಪರಿ ಮತ್ತು ಕೊಜಿಕೊಡಿನ ಪಕ್ಕದಲ್ಲೇ ಇದ್ದ ವೆಂಗೇರಿ ಗ್ರಾಮವನ್ನು ಸಂಪೂರ್ಣ ಕೊಳೆ ಮುಕ್ತ, ಪ್ಲಾಸ್ಟಿಕ್ ಮುಕ್ತಾ ಮತ್ತು ಸಾವಯವ ಹಳ್ಳಿಯನ್ನಾಗಿ ಪರಿವರ್ತಿಸಿದ ಕಥೆ ನಮ್ಮ ಕಣ್ಮುಂದೆ ಇದೆ.
ಕೇರಳದ ಕೆ.ಎಸ್.ಎಸ್.ಪಿ(ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು) ಏನಿದೆ ಅದು ವೆಂಗೇರಿಯನ್ನು ಶುಚಿಗೊಳಿಸುವ ಜವಬ್ದಾರಿಯನ್ನು ತೆಗೆದುಕೊಂಡು ಕಾರ್ಯಾಚರಣೆಗೆ ಇಳಿಯುತ್ತೆ. ಕೊಜೊಕ್ಕೋಡಿನ ಕೆಲ ಶಾಲೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಉಂಟು ಮಾಡುವ ಪರಿಸರಹಾನಿ ಆ ಮೂಲಕ ಹಬ್ಬುವ ಆರೋಗ್ಯದ ಹಾನಿಗಳ ಕುರಿತು ಜಾಗೃತಿ ಮೂಡುಸುವ ವೇದಿಕೆಯಾಗಿ “ನಿರವು” ಹುಟ್ಟಿಕೊಂಡಿತು ಅದು ‘ಶೂನ್ಯ ಕಸ’ದ ಯೋಜನೆ ಸಿದ್ಧಪಡಿಸಿ ಕೊಜಿಕ್ಕೋಡಿನ ಸನಿಹದ ವೆಂಗೇರಿ ಗ್ರಾಮವನ್ನು ಮಾದರಿಯಾಗಿ ಆರಿಸಿಕೊಂಡು ಸುಂದರ ಬದುಕಿಗೆ ಜ್ಞಾನ, ಕಲೆ ಮತ್ತು ಸಿಹಿನಗು ಎನ್ನುವ ಘೋಷಣೆ ನೀಡಲಾಗುತ್ತದೆ. ಸಮೀಪವಿರುವ ಕೃಷಿ ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ಸ್ವಯಂಸೇವಕರು, ಕೆ.ಎಸ್.ಎಸ್.ಪಿ ಸದಸತ್ವ ಪಡೆದ ವಿದ್ಯಾರ್ಥಿಗಳು ಮತ್ತು ಪ್ರಗತಿಶೀಲ ಪ್ರಾಧ್ಯಾಪಕರು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಈಗಾಗಲೆ ಜನರು ಕಸವನ್ನು ಮನ ಬಂದಂತೆ ಎಸೆಯುತ್ತಿದ್ದ ಜಾಗದಲ್ಲಿಯೇ ತಾತ್ಕಾಲಿಕ ಗುಡಾರವನ್ನು ಹಾಕಿ, ಬ್ಯಾನರ್ ಕಟ್ಟಿ ಕಸ ಸ್ವೀಕರಣಾ ಘಟಕವನ್ನು ಸ್ಥಾಪಿಸಲಾಯಿತು. ಜನರು ತಂದ ಕಸವನ್ನು ಪ್ಲಾಸ್ಟಿಕ್ ಮತ್ತು ಗಾಜುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರವಾಗಿ ಬಂದಿಸಿ ಗುಡಾರದ ಒಂದು ಮೂಲೆಯಲ್ಲಿ ಜೋಡಿಸಿಡಲಾರಂಬಿಸಿದರು, ಕೊಳೆಯಬಹುದಾದ ಕಸವನ್ನು ಅಲ್ಲಿಯೇ ಎರೆಡೆರಡು ಅಡಿ ಅಗಲ ಮತ್ತು ಮೂರು ಅಡಿ ಆಳದ ಸುಮಾರು 50 ಗುಂಡಿಗಳನ್ನು ತೆಗೆದು, ಹೂಳಿ, ಮಣ್ಣು ಮುಚ್ಚುವ ಪ್ರಾರಂಭದ ಕೆಲಸ ಶುರುವಾಯಿತು. ಸುಮಾರು 1 ತಿಂಗಳ ಅವಧಿಯಲ್ಲಿ ಇಡಿ ವೆಂಗೇರಿಯ ಬೀದಿ ಬೀದಿಯ ಕಸ, ಕಸಕೇಂದ್ರಕ್ಕೆ ಬೇರೆ ಬೇರೆಯಾಗೇ ಬರಲು ಶುರುವಾಯಿತು.
ಆ ತಂಡದ ಸದಸ್ಯರು ಕಸವನ್ನು ರಸಮಾಡ ಹೊರಟ ಫಲವಾಗಿ ಸುಮಾರು 15 ಲೋಡು ಪ್ಲಾಸ್ಟಿಕ್ ಸಂಬಂದಿತ ವಸ್ತುಗಳು ಈರೋಡಿನ ರೀ ಸೈಕಲ್ ಕಂಪೆನಿಗೆ ಮಾರಾಟವಾಯಿತು. ಅದರ ಮಾರಾಟದಿಂದ ಸುಮಾರು 50ಸಾವಿರ ರೂ ವೆಂಗೇರಿಯ ನಿರುವ ಸಂಘಟನೆಗೆ ವರಮಾನವಾಗಿ ಬಂತು. ಆ ಹಣದಿಂದ ಅಗತ್ಯ ಮೂಲಭೂತ ಪರಿಕರ ಹಾಗೂ 50ಸಾವಿರ ಮಣ್ಣಿನ ಕುಂಡಗಳನ್ನು ಕೊಂಡು 100 ಮನೆಗೆ ವಿತರಿಸಲಾಯಿತು. ಗುಳಿಯಲ್ಲಿ ಮುಚ್ಚಿಟ್ಟ ಕರಗುವ ತ್ಯಾಜ್ಯ ಆ ವೇಳೆಗೆ ಅದ್ಬುತ ಸಾವಯವ ಗೊಬ್ಬರವಾಗಿತ್ತು ಕೃಷಿ ವಿಜ್ಞಾನ ಕೇಂದ್ರ ಮತ್ತು ವಿಶ್ವ ವಿದ್ಯಾಲಯದ ಸಹಯೋಗ ಮತ್ತು ಮಾರ್ಗದರ್ಶನದೊಂದಿಗೆ ಆ ಗೊಬ್ಬರವನ್ನು ಸರಳವಾಗಿ ಪರಿಷ್ಕರಿಸಿ ಮನೆ ಮನೆಗೆ ಮರು ವಿತರಣೆ ಮಾಡಿ ತರಕಾರಿ ಬೀಜ ಹಾಗೂ ಗಿಡಗಳನ್ನು ಕೊಟ್ಟು ಮನೆಯಂಗಳದಲ್ಲಿ ಕೃಷಿಗೆ ಚಾಲನೆ ನೀಡಲಾಯಿತು. ಮೂರು ತಿಂಗಳಲ್ಲೇ ವೆಂಗೇರಿಯ ಮನೆ-ಮನೆಯ ಕಾಂಪೌಡ್, ಟೆರೇಸ್, ಹಿತ್ತಿಲುಗಳಲ್ಲಿ ಬೆಂಡೆ, ಬದನೆ, ಸುವರ್ಣಗೆಡ್ಡೆ, ಶುಂಟಿ, ಸೋರೇಕಾಯಿ, ಕುಂಬಳ, ಬಾಳೆ, ನಳ-ನಳಿಸುವ ಹೂದೋಟ, ಮನೆಯ ಸೂರುಗಳಲ್ಲಿ ಅಣಬೆಗಳನ್ನು ಬೆಳೆಯತೊಡಗಿದ್ದರ ಮಾದರಿ ನಮ್ಮ ಕಣ್ಮುಂದೆ ಇದೆ.
ದೇಶದ 10 ಮಲೀನ ನಗರಗಳ ಪೈಕಿ ಬೆಂಗಳುರು ಒಂದಾಗಿದೆ. ವಾಯು ಮಾಲಿನ್ಯದಲ್ಲಿ ಬೆಂಗಳುರು ಮೊದಲ ಸ್ಥಾನದಲ್ಲಿದೆ. ಘನತ್ಯಾಜ್ಯ ನಿರ್ವಹಣಗೆ ಬಿಬಿಎಂಪಿ ಸುರಿಯುತ್ತಿರುವ ಹಣ ದೇಶದಲ್ಲಿ ಬೇರೆ ಯಾವ ನಗರಗಳು ಸುರಿಯುತ್ತಿಲ್ಲ. ಸರಳ ಬದುಕಿಗೆ ಮಾರಕವಾಗಿರುವ ಕಸವನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಬದ್ಧತೆ ಮತ್ತು ಸಮಾಜವಾದಿ ತತ್ವದ ನಿಲುವು ಇದ್ದವರಿಗೆ ಮಾತ್ರ ಸಾಧ್ಯ. ಬಿಬಿಎಂಪಿ ಈಗಲಾದರೂ ಎಚ್ಚುತ್ತುಕೊಳ್ಳಬೇಕಿದೆ ಕಸದ ನಿರ್ವಹಣೆಗಾಗಿ ಶಾಶ್ವತ ಪರಿಹಾರಕ್ಕೆ ಕ್ರೀಯಾಯೋಜನೆ ರೂಪಿಸಬೇಕಿದೆ. ಇತರ ರಾಜ್ಯಗಳ ಮಾದರಿಯನ್ನು ಅನುಸರಿಸಲು ಮುಂದೆ ಬರಬೇಕಿದೆ.