ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ಚಿಂತನೆ: ಸಿಎಂ ಪಿಣರಾಯಿ ವಿಜಯನ್

Please follow and like us:
ತಿರುವನಂತಪುರಂ: ದೇಗುಲಗಳಲ್ಲಿ ಗರ್ಭಗುಡಿ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರು ಮೇಲಂಗಿ (ಶರ್ಟ್​-ಬನಿಯನ್​) ಕಳಚುವ ದೀರ್ಘಕಾಲದ ಪದ್ಧತಿಗೆ ಕೇರಳದ ದೇವಸ್ವಂ ಮಂಡಳಿಗಳು​ ಇತಿಶ್ರೀ ಹಾಡಲು ಚಿಂತಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್​ ಹೇಳಿದರು.

ಮೇಲಂಗಿ ತೆಗೆಯುವ ಸಂಪ್ರದಾಯ ಸಾಮಾಜಿಕ ಅನಿಷ್ಟವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸ್ಥಾಪಿತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಸಿಎಂ ಈ ಬಗ್ಗೆ ಮಾತನಾಡಿರುವುದು ಗಮನಾರ್ಹ. ಮಂಗಳವಾರ ಶಿವಗಿರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ವಿಜಯನ್​, ಶ್ರೀಗಳ ಕರೆಗೆ ಸಹಮತ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : 1991ರ ಕಾಯ್ದೆ ಪರಿಣಾಮಕಾರಿ ಜಾರಿ: ಓವೈಸಿ ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ಇದರ ಬೆನ್ನಲ್ಲೇ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಇಂದು ದೇವಸ್ವಂ ಮಂಡಳಿ ಸದಸ್ಯರು ನನ್ನನ್ನು ಭೇಟಿಯಾಗಿದ್ದು, ಮೇಲಂಗಿ ತೆಗೆಯುವ ಆಚರಣೆಯ ಕುರಿತು ತಿಳಿಸಿದರು. ಇದು ಉತ್ತಮವಾದ ವಿಚಾರವೆಂದು ತಿಳಿಸಿದ್ದೇನೆ. ಎಂದರು.

 

ಕೇರಳದಲ್ಲಿ ಗುರುವಾಯೂರು, ತಿರುವಾಂಕೂರ್​, ಮಲಬಾರ್​, ಕೊಚ್ಚಿನ್​ ಮತ್ತು ಕೂಡಲ್​ಮನಿಕ್ಯಂ ಎಂಬ ಐದು ದೇವಸ್ವಂ ಮಂಡಳಿಗಳಿದ್ದು, ಇವರು ಒಟ್ಟಾಗಿ 3,000 ದೇಗುಲಗಳನ್ನು ನಿರ್ವಹಣೆ ಮಾಡುತ್ತಾರೆ.

“ಸಚ್ಚಿದಾನಂದ ಸ್ವಾಮಿಗಳು ಮೇಲಂಗಿ ಪದ್ಧತಿಯನ್ನು ತೆಗದುಹಾಕಲು ಕರೆ ನೀಡಿದ್ದು, ಅವರ ಮಾತನ್ನು ನಾನು ಅನುಮೋದಿಸಿದ್ದೇನೆ. ಈ ಕುರಿತು ಅಂತಿಮ ನಿರ್ಧಾರವನ್ನು ದೇವಸ್ವಂ ಮಂಡಳಿಗಳು ಕೈಗೊಳ್ಳಬೇಕಿದ್ದು, ಸರ್ಕಾರದ ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ” ಎಂದು ಸಿಎಂ ಪಿಣರಾಯಿ ಹೇಳಿದ್ದಾರೆ.

ಇದನ್ನೂ ನೋಡಿ : ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ

Please follow and like us:
Donate Janashakthi Media

Leave a Reply

Your email address will not be published. Required fields are marked *