ವಿಜಯಪುರ: ಅನಿರ್ಧಿಷ್ಟ ಧರಣಿಗೆ ಶುಕ್ರವಾರ 100 ನೇ ದಿನ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ಗಾಂಧಿವೃತ್ತದಲ್ಲಿ 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿಜಯಪುರದ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಕಾರ್ಮಿಕರು, ರೈತರು, ಅಂಗವಿಕಲರು, ಮಕ್ಕಳು ಸಹಿ ಹಾಕಿದರು.
ಇದನ್ನೂ ಓದಿ : ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ: ಈಶ್ವರ ಖಂಡ್ರೆ
ಸರ್ಕಾರ ಇನ್ನು ಜನಗಳ ಹೋರಾಟಕ್ಕೆ ಸ್ಪಂದಿಸದಿದ್ದಕ್ಕಾಗಿ ಜಿಲ್ಲೆಯ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ 100 ಮೀಟರ್ ಬ್ಯಾನರ್ ಮೇಲೆ ಸಾವಿರಾರು ಸಹಿಯನ್ನು ದಿನವಿಡಿ ಸಹಿ ಸಂಗ್ರಹ ಮಾಡಲಾಯಿತು. ಸರ್ಕಾರದ ಪಿಪಿಪಿ ನೀತಿಯನ್ನು ಖಂಡಿಸಿ, ಕಳೆದ ನೂರು ದಿನಗಳಿಂದ ಅನಿರ್ದಿಷ್ಟ ಧರಣಿ ಹಾಗೂ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು.
100 ಮೀಟರ್ ಬ್ಯಾನರ್ ಅನ್ನು ಹಿಡಿದು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಿದರು.
ನೂರು ದಿನದ ಸಂಗ್ರಹಣ ಅಭಿಯಾನವನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲವನ್ನು ಖಾಸಗೀಕರಣ ಮಾಡಲು ಹೊರಟಿದೆ. ಜನ ಜಾಗೃತ ಆಗಬೇಕು. ಈ ಐತಿಹಾಸಿಕ ಹೋರಾಟ ಎಲ್ಲಾ ಜನರಿಗೆ ಮಾದರಿಯಾಗಲಿ ಎಂದು ಹೇಳಿದರು.
ಇದನ್ನೂ ನೋಡಿ : ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media
