ವಿಜಯನಗರ: ಮೂರು ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಿದರು. ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ.
ಮೊದಲ ದಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆದವು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಹಾಡು ಹಾಡಿ ಜನರ ಮನರಂಜಿಸಿದರು. ಡ್ರೋನ್ ಶೋದಲ್ಲಿ, ಬಾನಂಗಳದಲ್ಲಿ ವಿಜಯನಗರ ಸಾಮ್ರಾಜ್ಯ ಗತವೈಭವ ಸಾರಲಾಯಿತು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಹಂಪಿ ಉತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗಿನೊಂದಿಗೆ ಚಾಲನೆ ನೀಡಲಾಯಿತು. ವಿಜಯನಗರದ ಸಾಮ್ರಾಜ್ಯದ ಗತ ವೈಭವ ಸಾರುವ ಹಂಪಿ ಉತ್ಸವ ಅತ್ಯಂತ ಸಂಭ್ರಮದಿಂದ ಆರಂಭವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಭಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ : ನವದೆಹಲಿ | ಅರಾವಳಿ ರಕ್ಷಣೆಗೆ ಸುಪ್ರೀಂ ಕೋರ್ಟ್ ಕಠಿಣ ನಿಲುವು – ಸುಪ್ರೀಂ ಕೋರ್ಟ್
ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರೂರಿನ ವರುಣಾದ ಶಿವ ಮಲ್ಲು ತಂಡದ ವೀರ ಮಕ್ಕಳ ಕುಣಿತವನ್ನು ವೀಕ್ಷಣೆ ಮಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸರ್ಕಾರ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಂಪಿ ಉತ್ಸವ, ಕಿತ್ತೂರು ಉತ್ಸವ ಸೇರಿ ಎಲ್ಲಾ ಉತ್ಸವಗಳನ್ನು ನಡೆಸಲು ಅನುದಾನ ನೀಡುತ್ತಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಬೇಕೆಂದರು.
ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ, ಕೃಷ್ಣದೇವರಾಯ ಸೇರಿದಂತೆ ವಿವಿಧ ಕಲಾಕೃತಿಗಳು ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ. ಉತ್ಸವದ ಹಿನ್ನೆಲೆಯಲ್ಲಿ, ಹಂಪಿಯ ಮಾತಂಗ ಪರ್ವತ ಮೈದಾನ ಪ್ರದೇಶದಲ್ಲಿ ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಆಯೋಜನೆ ಮಾಡಲಾಗಿದೆ. ಅಲ್ಲದೆ, ತುಂಗಭದ್ರಾ ಡ್ಯಾಂ ಕಲಾಕೃತಿ, ಅರಣ್ಯ ಇಲಾಖೆಯಿಂದ ದರೋಜಿ ಹಾಗೂ ಗುಡೇಕೋಟೆ ಕರಡಿಧಾಮ, ಅಂಕ ಪಕ್ಷಿಧಾಮ ಪ್ರತಿಕೃತಿಗಳು ಜನರನ್ನು ಆಕರ್ಷಿಸುತ್ತಿವೆ. ಮತ್ಸ್ಯ ಮೇಳದಲ್ಲಿ ಅಪರೂಪದ ಬಣ್ಣ, ಬಣ್ಣದ ಮೀನುಗಳಿವೆ.
ಇದನ್ನೂ ನೋಡಿ : ಪಿಚ್ಚರ್ ಪಯಣ – 166 | ಸಿನೆಮಾ: ‘ನಮ್ಮ ಸಾಲಿ, ನಿರ್ದೇಶನ – ಅನಿಲ್ ರೇವೂರ ವಿಶ್ಲೇಷಣೆ : ಮೀನಾಕ್ಷಿ ಬಾಳಿ
