ವಿಜಯನಗರ : ಸಿದ್ದರಾಮಯ್ಯ ಇಂದು ಕೂಡ್ಲಿಗಿ, ಹರಪನಹಳ್ಳಿ, ಹಗರಿಬೊಮ್ಮನ ಹಳ್ಳಿ, ಹೊಸಪೇಟೆ ವಿಧಾನ ಸಭೆ ಕ್ಷೇತ್ರಗಳಲ್ಲಿ ಮತಯಾಚನೆಗೆ ತೆರಳಿದ್ದು ಈ ಸಂದರ್ಭ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿದ್ದಾರೆ.
ಬೆಳಗ್ಗೆ ಕೂಡ್ಲಿಗಿ, ಮಧ್ಯಾನ ಹರಪನಹಳ್ಳಿ, ಸಂಜೆ ನಾಲ್ಕು ಗಂಟೆಗೆ ಹಗರಿಬೊಮ್ಮನ ಹಳ್ಳಿ, ರಾತ್ರಿ 7 ಕ್ಕೆ ಹೊಸಪೇಟೆಯಲ್ಲಿ ಅದ್ದೂರಿ ಪ್ರಚಾರ ಸಿದ್ದರಾಮಯ್ಯ ನಡೆಸಲಿದ್ದರು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿಗೆ ಸಿದ್ದರಾಮಯ್ಯ ಬಳ್ಳಾರಿ ರಸ್ತೆಯಲ್ಲಿರೋ ಹೆಲಿಪ್ಯಾಡ್ನಲ್ಲಿ ಬಂದಿಳಿದ ಮಾಜಿ ಸಿದ್ದರಾಮಯ್ಯ ಬಂದಿಳಿದಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.75ರಷ್ಟು ಮೀಸಲಾತಿ ಹೆಚ್ಚಳ : ಸಿದ್ದರಾಮಯ್ಯ
ಕೂಡ್ಲಿಗಿಯಲ್ಲಿ ಬಿಸಿಲಿನ ತಾಪಕ್ಕೆ ಕ್ಷಣಮಾತ್ರದಲ್ಲಿ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಕೂಡ್ಲಿಗಿಯ ಹೆಲಿಪ್ಯಾಡ್ ಬಳಿ ಕಾರಿನ ಬಾಗಿಲಿನ ಬಳಿ ಏಕಾಏಕಿ ಸಿದ್ದರಾಮಯ್ಯ ಕುಸಿದು ಬೀಳುತ್ತಿದ್ದಂತೆಯೇ ಕೈ ಹಿಡಿದ ವೈದ್ಯ ಗ್ಲೂಕೋಸ್, ನೀರು ಕುಡಿಸಿದ್ದಾರೆ. ಅಭ್ಯರ್ಥಿ ಡಾ.ಶ್ರೀನಿವಾಸ್ ಈಗ ಸಿದ್ದರಾಮಯ್ಯರ ಆರೈಕೆ ಮಾಡುತ್ತಿದ್ದಾರೆ.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ:
ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ಬರೆದಿದ್ದು ನಾನು ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಎಂದು ಪೋಸ್ಟ್ ಮಾಡಿದ್ದಾರೆ.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ.
ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ.— Siddaramaiah (@siddaramaiah) April 29, 2023