2028ರ ವರೆಗೂ ಸಿದ್ದರಾಮಯ್ಯ ಸಿಎಂ? – ಡಿ.ಕೆ ಶಿ ಪ್ರತಿಕ್ರಿಯೆ

ಬೆಂಗಳೂರು: ಇಂದಿಗೆ ಸಿದ್ದರಾಮಯ್ಯ ಸಿಎಂ ಅಗಿ ಆಳ್ವಿಕೆ ನಡೆಸಿ 2792ದಿನಗಳಾಗಿದೆ. ಹೀಗಾಗಿ ಅರಸು ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಮಯದಲ್ಲಿ ಸಿಎಂ‌ ಆರ್ಥಿಕ ಸಲಹೆಗಾರ ರಾಯರೆಡ್ಡಿ 2028ರ ವರೆಗೂ ಸಿದ್ದರಾಮಯ್ಯ ಸಿಎಂ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದು, ಇದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬರೆದ ಪತ್ರದಲ್ಲಿ 2028ರವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವಂತೆ ಹಾರೈಸಿದ್ದು, ಈಗ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಮಾತನಾಡಿದ ಡಿಕೆಶಿ, 2028ರವರೆಗೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿ ಎಂದು ರಾಯರೆಡ್ಡಿ ಪತ್ರ ಬರೆದ ವಿಚಾರ ಯಶಸ್ಸಾಗಲಿ, ಭಗವಂತ ಒಳ್ಳೆಯದು ಮಾಡಲಿ ಎಂದಿದ್ದಾರೆ.

ನಾನು ನಿನ್ನೆಯೇ ಹೇಳಿದ್ದೇನೆ, ಸಿಎಂ ಸಿದ್ದರಾಮಯ್ಯ ಅವರಿಗೆ ಹೆಚ್ಚಿಗೆ ಆರೋಗ್ಯ ಸಿಗಲಿ. ಜನರಿಗೆ ಇನ್ನು ಹೆಚ್ಚಿಗೆ ಸೇವೆ ಮಾಡುವ ಅವಕಾಶ ಕೊಡಲಿ ಎಂದು ನಾನು ಪ್ರಾರ್ಥನೆ ಮಾಡ್ತೀನಿ ಎಂದು ಹೇಳಿದ್ದಾರೆ. ಇನ್ನೂ ಕ್ಯಾಬಿನೆಟ್ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಡಿ.ಕೆ ಶಿವಕುಮಾರ್​, ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟಿದ್ದಾರೆ.

ಇದನ್ನೂ ಓದಿ: ತೋರಣಗಲ್ಲು | ದಿನಗೂಲಿ ಕೆಲಸಗಾಗರರ ಹಾಗೂ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ರೈಲು ಸಮಯ ಹೆಚ್ಚಿಸಿ

ರಾಯರೆಡ್ಡಿ ಪತ್ರದಲ್ಲಿ ಏನಿದೆ?

ರಾಯರೆಡ್ಡಿ ಹೇಳಿಕೆ ಪ್ರಕಾರ, “2028ರ 28 ಮೇ ವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ವಿಶ್ವಾಸವಿದೆ” ಎಂದು ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಾಧನೆಯನ್ನು ಹೊಗಳಿ ಬರೆದ ಪತ್ರದಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ.

ಕರ್ನಾಟಕ ರಾಜಕೀಯ ಇತಿಹಾಸವನ್ನು ನೆನಪಿಸಿ ರಾಯರೆಡ್ಡಿ ಅವರು ಪತ್ರದಲ್ಲಿ ದೇವರಾಜ ಅರಸು ಜೊತೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ನಿಜಲಿಂಗಪ್ಪ ಅವರ ವಿಶಾಲ ದೃಷ್ಟಿಕೋನ ಮತ್ತು ಪ್ರಾಮಾಣಿಕ ಚಿಂತನೆಗಳನ್ನು ಉಲ್ಲೇಖಿಸಿದ್ದಾರೆ. ಸಮಕಾಲೀನ ಅಗತ್ಯತೆಗೆ ಸಿದ್ದರಾಮಯ್ಯ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬಡವರಿಗೆ ಹಲವು ಯೋಜನೆಗಳನ್ನು ಕೊಟ್ಟಿದ್ದು ಮಹತ್ವದ ಸಾಧನೆಯಾಗಿದೆ ಎಂದು ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ಕಾದಾಟದ ಚರ್ಚೆ ನಡುವೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ಗುದ್ದಾಟದ ಸದ್ದು ಕೇಳಿಬಂದಿತ್ತು. ಸಿದ್ದರಾಮಯ್ಯ ಆಪ್ತರು ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ ಎಂದು ಓಪನ್ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದೀಗ ರಾಯರೆಡ್ಡಿ ಅವರ ಪತ್ರದಲ್ಲಿ ಪೂರ್ಣಾವಧಿ ಸಿಎಂ ವಿಚಾರ ಪ್ರಸ್ತಾಪಿಸಿರುವುದು ಪಕ್ಷದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪವರ್​ ಶೇರಿಂಗ್​ ಪಾಲಿಟಿಕ್ಸ್​ ಚರ್ಚೆ!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸ್ಪರ್ಧೆ ಇದ್ದುದು ಗೊತ್ತೇ ಇದೆ. ಕಳೆದ ವರ್ಷಗಳಲ್ಲಿ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಸಿದ್ದರಾಮಯ್ಯ ಸಿಎಂ ಆದರೆ, ಡಿಕೆ ಡಿಸಿಎಂ ಆದರು. ಆದರೆ ಪವರ್ ಶೇರಿಂಗ್ ಫಾರ್ಮುಲಾ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು. ವರದಿಗಳ ಪ್ರಕಾರ, ಅರ್ಧಾವಧಿಯ ನಂತರ ಸಿಎಂ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ತಮ್ಮ ಪೂರ್ಣ ಅವಧಿ ಮುಗಿಸುವುದಾಗಿ ಹೇಳಿಕೆ ನೀಡಿದ್ದರು.

ಇತ್ತೀಚಿನ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಮಾತನಾಡಿರುವುದು ಪಕ್ಷದ ಏಕತೆಯನ್ನು ತೋರಿಸುತ್ತದೆ. ನನಗೆ ಪಕ್ಷ ಮುಖ್ಯ. 2028ರ ಚುನಾವಣೆಗೆ ಗಮನ ಹರಿಸುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯಿಸದೆ ಹೊರಟಿದ್ದು, ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

ಸಿದ್ದರಾಮಯ್ಯ ಸಾಧನೆಗಳನ್ನು ಹೊಗಳಿದ ರಾಯರೆಡ್ಡಿ!

ರಾಯರೆಡ್ಡಿ ಅವರ ಪತ್ರದಲ್ಲಿ ಸಿದ್ದರಾಮಯ್ಯ ಅವರ ಸಾಧನೆಗಳನ್ನು ಹೊಗಳಲಾಗಿದೆ. ಬಡವರಿಗಾಗಿ ಗ್ಯಾರಂಟಿ ಯೋಜನೆಗಳು, ಆರ್ಥಿಕ ಸುಧಾರಣೆಗಳು ಮತ್ತು ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಉಲ್ಲೇಖಿಸಲಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹಲವು ನಾಯಕರು ಪೂರ್ಣ ಅವಧಿ ಮುಗಿಸಿದ ಉದಾಹರಣೆಗಳನ್ನು ನೀಡಿ, ಸಿದ್ದರಾಮಯ್ಯ ಸಹ ಅದೇ ರೀತಿ ಮುಂದುವರಿಯಲಿ ಎಂದು ಹಾರೈಸಿದ್ದಾರೆ.

ಇದನ್ನೂ ನೋಡಿ: ಅಖ್ಲಾಕ್‌ ಗುಂಪು ಹತ್ಯೆ ಪ್ರಕರಣ & ಸೇಂಗಾರ್‌ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media

Donate Janashakthi Media

Leave a Reply

Your email address will not be published. Required fields are marked *