ಬೆಂಗಳೂರು: ನಿನ್ನೆ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವಾರ್ ರೂಂ ಮೂಲಕ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಸಂಸದರ ತನಿಖೆಯನ್ನು ರಾಜಕೀಯ ದಾಳ ಟೀಕಿಸಿರುವ ವಿರೋಧ ಪಕ್ಷದ ನಾಯಯ ಸಿದ್ದರಾಮಯ್ಯ ಅವರು ಚಾಮರಾಜನಗರ ವಿಚಾರ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು.
ಇದನ್ನು ಓದಿ: ಬಿಬಿಎಂಪಿ ಬೆಡ್ ಹಗರಣ : ಹಗರಣದ ಹಿಂದಿರುವವರು ಯಾರು?
ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ಬಂದು ಹತ್ತು ದಿನ ಆಯ್ತು ಅಂತೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು @Tejasvi_Surya? 3/11#Corona
— Siddaramaiah (@siddaramaiah) May 5, 2021
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ತೇಜಸ್ವಿ ಸೂರ್ಯ ರಾಜಕೀಯವಾಗಿ ಇದನ್ನು ಮಾಡಿರೆ ಹೊರತು ಒಬ್ಬ ಸಂಸದರಾಗಿ ಮಾಡಬೇಕಾದ ಕಾರ್ಯವನ್ನು ಮಾಡಿಲ್ಲ. ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿರುವುದು ಭಾರೀ ಸುದ್ದಿ ಆಗುತ್ತಿದೆ ಆ ವಿಚಾರವೆಲ್ಲವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ.
ಅವರ ಕೆಲಸ ಒಳ್ಳೆಯದೆ ಆದರೆ, ಇಲ್ಲಿ ಹೀಗೆ ಮಾಡುವುದು ಬಿಟ್ಟು ಒಬ್ಬ ಸಂಸದನಾಗಿ ಕೇಂದ್ರ ಸರ್ಕಾರದ ಮುಂದೆ ಆಕ್ಸಿಜನ್ ಬೇಕೆಂದು ಕೇಳಲಿಲ್ಲ. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿರುವ ಅವರು ಎಲ್ಲಾ ಸಂಸದರನ್ನು ಪ್ರಧಾನಿ ಬಳಿಗೆ ಹೋಗಲಿ ರಾಜ್ಯದ ಆಕ್ಸಿಜನ್ ಪರಿಸ್ಥಿತಿಯನ್ನು ಖುದ್ದಾಗಿ ತಿಳಿಸಬೇಕು. ಜನ ಸಾಯುತ್ತಿದ್ದಾರೆ. ಕೊರೋನದಿಂದ ಹೆಚ್ಚು ಜನ ಸಾಯಬಾರದು. ಅದನ್ನು ಕೇಂದ್ರದಿಂದ ಕೇಳಿ ಪಡೆಯಲು ಮುಂದಾಗಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.