ಬೆರ್ಹಾಂಪುರ್: ಒಡಿಶಾದ ಮೂಲದ 19 ವರ್ಷದ ವಿದ್ಯಾರ್ಥಿ ಶುಭಮ್ ಸಬರ್ ಬೆಂಗಳೂರಿನ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈಗ ನೀಟ್ ಯುಜಿ’ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾರೆ.
ವೈದ್ಯನಾಗಬೇಕೆಂಬ ಕನಸನ್ನು ಹೊತ್ತಿದ್ದ ಸಬರ್, ಕುಟುಂಬದ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕಾಗಿ ದುಡಿಯಲು ಬೆಂಗಳೂರಿಗೆ ಬರಬೇಕಾಯಿತು. ಸಬರ್ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಜಿ ನೀಟ್ ಪರೀಕ್ಷೆಯನ್ನು ಕಿರಿಯ ವಯಸ್ಸಿನಲ್ಲಿಯೇ ಪಾಸ್ ಮಾಡಿದ್ದಾರೆ. ಬೆರ್ಹಾಂಪುರ್
ಇದನ್ನೂ ಓದಿ : ಮಂಗಳೂರು | ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ, ಚಿಂತಕ ಎರಿಕ್ ಒಝಾರಿಯೋ ನಿಧನ
ಎಂದಿನಂತೆ ಕೆಲಸದಲ್ಲಿ ನಿರತನಾಗಿದ್ದ ಸಬರ್‌ಗೆ ಅವರ ಶಿಕ್ಷಕ ಬಸುದೇವ್ ಮೊಹರಾನ ಕರೆ ಮಾಡಿ ನೀಟ್‌ನಲ್ಲಿ ಉತ್ತೀರ್ಣನಾಗಿರುವುದಾಗಿ ತಿಳಿಸಿದರು. ಪರಿಶಿಷ್ಟ ಪಂಗಡ ವಿಭಾಗದಲ್ಲಿ 18,212 ನೇ ಶ್ರೇಯಾಂಕ ಪಡೆಯುವ ಮೂಲಕ ಒಡಿಶಾದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶವನ್ನು ಪಡೆದಿದ್ದಾರೆ. ಬೆರ್ಹಾಂಪುರ್
’ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿಷಯ ಕೇಳಿದಾಗ ಬಹಳ ಸಂತೋಷವಾಯಿತು. ವೈದ್ಯನಾಗುವ ನನ್ನ ಕನಸು ನನಾಸಾಗಿತು. ಫಲಿತಾಂಶ ಬಂದ ಮಾರನೇಯ ದಿನ ಗುತ್ತಿಗೆದಾರರ ಬಳಿ ಅನುಮತಿ ಪಡೆದು ಊರಿಗೆ ಮರಳಿದೆ ಎಂದು ಸಬರ್ ಹೇಳಿದ್ದಾರೆ’.
ನೀಟ್ ಪರೀಕ್ಷೆ ಮುಗಿಸಿಕೊಂಡು ಕುಟುಂಬಕ್ಕೆ ಸಹಾಯ ಮಾಡಲೆಂದು ಕೆಲಸವನ್ನು ಹುಡುಕುತ್ತಿದ್ದೆ. ಆಗ ಸ್ಥಳೀಯ ಗುತ್ತಿಗೆದಾರರೊಬ್ಬರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ಮೂರು ತಿಂಗಳುಗಳು ಕೆಲಸ ಮಾಡಿ ₹45,000 ಸಂಪಾದಿಸಿದ್ದೇನೆ. ಅದರಲ್ಲಿ ₹25,000 ಉಳಿತಾಯ ಮಾಡಿದ್ದೇನೆ. ನನ್ನ ಕುಟುಂಬಕ್ಕೆ ಸಹಾಯ ಮಾಡುವವರು ಯಾರೂ ಇಲ್ಲದ ಕಾರಣ ಬೆಂಗಳೂರಿಗೆ ದುಡಿಯಲು ಬರಬೇಕಾಯಿತು. ಉಳಿತಾಯ ಮಾಡಿರುವ ಹಣವು ಕಾಲೇಜಿಗೆ ಪ್ರವೇಶವನ್ನು ಪಡೆಯಲು ನೇರವಾಗುತ್ತದೆ ಎಂದು ಹೇಳಿದರು.
’ಆರಂಭದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂದು ಬಯಸಿದ್ದೆ. ಉನ್ನತ ವ್ಯಾಸಂಗಕ್ಕೆ ತಯಾರಿ ಆರಂಭಿಸಿದಾಗ ವೈದ್ಯನಾಗಬೇಕೆಂಬ ಆಸೆ ಹುಟ್ಟಿಕೊಂಡಿತು. ನನ್ನ ವಿದ್ಯಾಭ್ಯಾಸ ಪೂರ್ಣಗೊಂಡು ವೈದ್ಯನಾದ ಮೇಲೆ ಒಡಿಶಾದ ಜನರ ಸೇವೆಯನ್ನು ಮಾಡಲು ಬಯಸುತ್ತೇನೆ’ ಎಂದು ಸರಬ್ ಹೇಳಿದ್ದಾರೆ.
ಸರಬ್‌ನ ಪೋಷಕರಾದ ಸಹದೇಬ್ ಹಾಗೂ ರಂಗಿ ಸುದ್ದಿಗಾರರೊಂದಿಗೆ ಮಾತನಾಡಿ, ಮಗನ ಐದು ವರ್ಷಗಳ ಎಂಬಿಬಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಲು ಸರ್ಕಾರವು ಆರ್ಥಿಕ ನೆರವು ನೀಡಬೇಕಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media
