ಒಡಿಶಾ: ಆಪರೇಷನ್ ಬಿಜೆಪಿಗೆ ಒಳಗಾದ ಶಾಸಕರಿಗೆ ಒಡಿಶಾ ವಿಧಾನಸಭೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಪಕ್ಷಾಂತರ
ಶಾಸಕರು ಬಿಜೆಡಿಯಿಂದ ಬಿಜೆಪಿಗೆ ಪಕ್ಷವನ್ನು ಬದಲಾಯಿಸಿದ ನಂತರ ರಾಜ್ಯ ವಿಧಾನಸಭೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮೇ 27ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಬಿಜೆಡಿಯಿಂದ ಬಿಜೆಪಿಗೆ ಪಕ್ಷವನ್ನು ಬದಲಾಯಿಸಿದ ನಾಲ್ವರು ಶಾಸಕರಿಗೆ ಪಕ್ಷಾಂತರದ ಆಧಾರದ ಮೇಲೆ ಅವರನ್ನು ಏಕೆ ಅನರ್ಹಗೊಳಿಸುವುದಿಲ್ಲ ಎಂದು ಉತ್ತರಿಸಲು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪಕ್ಷಾಂತರ
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಮೆಟ್ರೋಗೆ ಕುತ್ತು ಎಂಬ ಪ್ರಧಾನ ಮಂತ್ರಿಗಳಾದ ಮೋದಿಯ ಹೇಳಿಕೆ ಅವೈಜ್ಞಾನಿಕ
ಲೋಕಸಭಾ ಎಲೆಕ್ಷನ್ ಸಮಯದಲ್ಲಿ ಬಿಜೆಡಿಯ ಶಾಸಕರಾದ ನಿಮಾಪಾದ ಶಾಸಕ ಸಮೀರ್ ದಾಶ್, ಹಿಂದೋಲ್ ಶಾಸಕ ಸಿಮರಾಣಿ ನಾಯಕ್, ಅಥಾಮಲ್ಲಿಕ್ ಶಾಸಕ ರಮೇಶ್ ಸಾಯಿ ಮತ್ತು ಸೊರೊ ಶಾಸಕ ಪರಶುರಾಮ್ ಧಾಡಾ ತಮ್ಮ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಿದ್ದರು.
ಆದರೂ ಕೂಡ ಬಿಜೆಡಿ ಪಕ್ಷವು ನಾಲ್ವರನ್ನು ಅನರ್ಹಗೊಳಿಸಬೇಕು. ಆದರೆ ಬಿಜೆಡಿ ಸರ್ಕಾರ ಅವರನ್ನು ತಮ್ಮ ಪಕ್ಷದಿಂದ ತೆಗೆದುಹಾಕಿಲ್ಲ ಈ ಕಾರಣ ಒಡಿಶಾದ ರಾಜ್ಯ ವಿಧಾನಸಭೆಯು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದು, ಮೇ 27ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆಕ್ರೋಶ