ಕೇಂದ್ರ ಕೃಷಿ ಸಚಿವರ ಸಾಗರ ಭೇಟಿ-ಕಪ್ಪು ಬಾವುಟ ಪ್ರದರ್ಶಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ

ಶಿವಮೊಗ್ಗ : ಹಿರಿಯ ರೈತ ನಾಯಕ ಶ್ರೀ ದಲ್ಲೇವಾಲ ರವರ ಪ್ರಾಣ ಉಳಿಸಲು ಆಗ್ರಹಿಸಿ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಕೃಷಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ ಎಂದು ಸಂಯೋಜಕರಾದ ಬಡಗಲಪುರ ನಾಗೇಂದ್ರ, ಕೋರ್ ಕಮಿಟಿ ಸದಸ್ಯರಾದ ಟಿ ಯಶವಂತ ತಿಳಿಸಿದ್ದಾರೆ. ಸಾಗರ 

ಕೃಷಿ ಉತ್ಪನ್ನ ಗಳಿಗೆ ಕನಿಷ್ಠ ಬೆಂಬಲ ಖಾತರಿಗೆ ಕಾನೂನು, ಸಾಲ ಮನ್ನಾ, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು ವಾಪಸ್ಸಾತಿ ಸೇರಿದಂತೆ ಐತಿಹಾಸಿಕ ದೆಹಲಿ ಹೋರಾಟದ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ನಡೆಸುತ್ತಿರುವ ಹಿರಿಯ ರೈತ ನಾಯಕ ಶ್ರೀ ದಲ್ಲೇವಾಲ ರವರ ಪ್ರಾಣವನ್ನು ಉಳಿಸಲು ಕೇಂದ್ರ ಸರ್ಕಾರ ಆಸಕ್ತಿ ವಹಿಸದೇ ಅತೀವ ನಿರ್ಲಕ್ಷ್ಯ ತೋರಿ ಇಡೀ ದೇಶದ ರೈತಾಪಿ ಸಮುದಾಯಕ್ಕೆ ಅವಮಾನ ಎಸಗುತ್ತಿರುವ ಕಾರಣ ದಿನಾಂಕ 18-01-25 ರಂದು ಸಾಗರಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಕಪ್ಪು ಬಾವುಟದ ಸ್ವಾಗತ ಕೋರುವ ಮೂಲಕ ಪ್ರತಿಭಟಿಸಲು ಸಭೆ ತೀರ್ಮಾನಿಸಿದೆ.

ಇದನ್ನೂ ಓದಿ : ಬಿಪಿಎಲ್ ಕುಟುಂಬಗಳಿಗೆ ಉಚಿತ ಎಂಆರ್​ಐ ಸ್ಕ್ಯಾನಿಂಗ್​: ಸಚಿವ ಸಂಪುಟ ಸಭೆ

ಅತ್ಯಂತ ಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರ ಕೃಷಿ ಸಚಿವರು ಬರುವುದು ಮತ್ತು ಈ ಬೆಳೆಗಾರರ ಅಹವಾಲು ಆಲಿಸುವುದು ಸ್ವಾಗತಾರ್ಹ ವಿಷಯವೇ ಆಗಿದ್ದರೂ ಇಡೀ ದೇಶದ ಕೃಷಿ ಉಳಿಸಲು ಹಾಗೂ ರೈತರನ್ನು ಕಾಪಾಡಲು ಶ್ರೀ ದಲ್ಲೆವಾಲರವರ ಉಪವಾಸ ಸತ್ಯಾಗ್ರಹ ಕೊನೆಗಾಣಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಕೂಡ ಬಹಳ ಮುಖ್ಯ ವಾಗಿದೆ.

ಆದರೆ ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಸರ್ಕಾರ ಶ್ರೀ ದಲ್ಲೇವಾಲರವರ ಪ್ರಾಣ ಉಳಿಸಲು ಕ್ರಮ ಕೈಗೊಳ್ಳದೇ ರೈತ ಸಮುದಾಯವನ್ನು ಅಪಮಾನಿಸುತ್ತಿದೆ ಮತ್ತು ಕೆರಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವರಿಗೆ ಕಪ್ಪು ಬಾವುಟದ ಸ್ವಾಗತ ಕೋರುವ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಹಾಗೂ ಸುತ್ತಲಿನ ಜಿಲ್ಲೆ ಗಳ ಸಂಯಕ್ತ ಹೋರಾಟ ಕರ್ನಾಟಕದ ಎಲ್ಲಾ ಸಹಭಾಗಿ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಕೃಷಿ ಸಚಿವರಿಗೆ ರೈತ ಸಮುದಾಯದ ಆಕ್ರೋಶವನ್ನು ವ್ಯಕ್ತಪಡಿಸಬೇಕು ಎಂದು ಸಭೆ ವಿನಂತಿಸಿದೆ ಎಂದು ಸಂಯೋಜಕರಾದ ಬಡಗಲಪುರ ನಾಗೇಂದ್ರ, ಕೋರ್ ಕಮಿಟಿ ಸದಸ್ಯರಾದ ಟಿ ಯಶವಂತ ತಿಳಿಸಿದ್ದಾರೆ.

ಇದನ್ನೂ ನೋಡಿ : ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ : ತಡೆಗಟ್ಟುವಲ್ಲಿ ಸಮಾಜವೂ ವಿಫಲ, ಸರ್ಕಾರವೂ ವಿಫಲ Janashakthi Media

Donate Janashakthi Media

Leave a Reply

Your email address will not be published. Required fields are marked *