ಕೊನೆ ಕ್ಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆಗಾಗಿ ಮೋದಿಯವರಿಗೆ ಮಹಿಳೆಯರು ಕೃತಜ್ಞರಾಗಿರಬೇಕೇ?

– ಬೃಂದಾ ಕಾರಟ್

ಹೆಣ್ಣನ್ನು ಗೃಹಿಣಿಯಾಗಿ ಮಾತ್ರ ನೋಡುವ ವಿಚಾರಧಾರೆ, ಮಹಿಳೆಯರಿಗೆ ಮೀಸಲಾತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಅವರ ಭಾಗವಹಿಸುವಿಕೆಯ  ಪ್ರಜಾಸತ್ತಾತ್ಮಕ ದ್ವನಿಯನ್ನು ಬಲಪಡಿಸಲು ಅಗತ್ಯವಾದ ಪ್ರಕ್ರಿಯೆಗಳೊಂದಿಗೆ ಅಳವಡಿಸಲು ಇನ್ನೂ ಹಿಂಜರಿಯುತ್ತಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಹಿಳಾ ಹೋರಾಟವನ್ನು ದಾಖಲಿಸಲು ಪುನಃ ಮುನ್ನುಡಿ ಬರೆಯಬೇಕಿದೆ. ಮಹಿಳಾ ಮೀಸಲಾತಿ ಕಾಯಿದೆ ಐತಿಹಾಸಿಕವಾಗಿದೆ. ಅವರು ವ್ಯಕ್ತಪಡಿಸಿದ ಉದ್ದೇಶಗಳು ಮತ್ತು ಚುನಾವಣಾ ಪರಿಗಣನೆಗಳಿಂದಾಗಿ ಈ ಕಾಯಿದೆಯು ಕಳಂಕಿತವಾಗಬಾರದು. ಮೀಸಲಾತಿ

ಸಂಸದೀಯ ಕಾರ್ಯಸೂಚಿಯೊಂದನ್ನು ಒಂದು ಸರ್ಕಾರ ನಿಗೂಢ ಉತ್ಸಾಹದಿಂದ ಮಾಡಿದಾಗ, ಕಾರ್ಯಕ್ರಮದ ಯೋಜಕರು ಕಾರ್ಯಕ್ರಮವನ್ನು ಸ್ಫೋಟಿಸಲು ಕೆಲಸ ಮಾಡಿದ್ದಾರೆ ಎಂದು ಯಾರಾದರೂ ಖಚಿತವಾಗಿ ನಂಬಬಹುದು.

ಮಹಿಳಾ ಮೀಸಲಾತಿ ಮಸೂದೆಯ ಹೋರಾಟದ ಭಾಗವಾಗಿದ್ದ ನಮ್ಮಲ್ಲಿ ಬಹುತೇಕರಿಗೆ ಸುಮಾರು ಮೂರು  ದಶಕಗಳ ನಮ್ಮ ಹೋರಾಟ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧನವಾಗಿ ಪರಿಣಮಿಸಿರುವುದು ನಿಜಕ್ಕೂ ದುರದೃಷ್ಟಕರ. ನಾನು ಇದನ್ನು ಪ್ರಸ್ತಾಪಿಸಲು ಕಾರಣವೇನೆಂದರೆ,

ಈ ಮಸೂದೆಯನ್ನು ಇಷ್ಟು ತಡವಾಗಿ ಅಂಗೀಕರಿಸುವುದರಿಂದ 18 ನೇ ಲೋಕಸಭೆಯ ವಿಷಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.ಪ್ರಸ್ತುತ ಸಂವಿಧಾನದ 128 ನೇ ತಿದ್ದುಪಡಿ ಮಸೂದೆಯು ಇದನ್ನು ಸಾಕಷ್ಟು  ಸ್ಪಷ್ಟಪಡಿಸುತ್ತದೆ. ಮಹಿಳಾ ಮತದಾರರ ಸಂಖ್ಯೆಯ ಆಧಾರದ ಮೇಲೇನೂ  ಕ್ಷೇತ್ರಗಳನ್ನು ನಿರ್ಧರಿಸಲಾಗಿಲ್ಲ. ಆದ್ದರಿಂದ ಜನಗಣತಿಗೂ ಅದಕ್ಕೂ ಯಾವುದೇ  ಸಂಬಂಧವಿಲ್ಲ. ಆದರೆ ಈ ವಿಧೇಯಕದ ಜಾರಿಯಲ್ಲಿ ಮತ್ತಷ್ಟು  ವಿಳಂಬವಾಗಲು ಇದು ಮತ್ತೊಂದು ಕಾರಣವಾಗಿದೆ.

ಹಾಗಾದರೆ, ಭಾರತೀಯ ಮಹಿಳೆಯರು ಮೋದಿಯವರಿಗೆ ಕೃತಜ್ಞರಾಗಿರಬೇಕೇ?

ಈ ಪ್ರಶ್ನೆಗೆ ದೃಢವಾದ ಉತ್ತರ -‘ಇಲ್ಲ’.

ತಮಗೆ ಮತ ಹಾಕಿದರೆ ಮಹಿಳೆಯರಿಗೆ ಕನಿಷ್ಟ ಮೂರನೇ ಒಂದು ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದಕ್ಕಾಗಿ ಬಿಜೆಪಿ 2014ರಲ್ಲಿ ಚುನಾವಣಾ ಭರವಸೆ ನೀಡಿತ್ತು. ಬಿಜೆಪಿ ಅಧಿಕಾರದಲ್ಲಿದ್ದ  2014-19ರ ತನ್ನ ಮೊದಲ ಅವಧಿಯಲ್ಲಿ ತಾನು ನೀಡಿದ ಭರವಸೆಗಳನ್ನು ಅದು ಈಡೇರಿಸಲಿಲ್ಲ. ಈ ಕಾರಣದಿಂದಾಗಿ ಮಹಿಳೆಯರಿಗೆ ಈ ಕಾರಣದಿಂದಾಗಿ ಮಹಿಳೆಯರಿಗೆ ಯಾವುದೇ ಮೀಸಲಾತಿ ನೀಡಲಾಗದೆ, 17 ನೇ ಲೋಕಸಭೆಯಲ್ಲಿ ಕೇವಲ 14 ಪ್ರತಿಶತದಷ್ಟು ಮಹಿಳೆಯರಿದ್ದರು. ಬಿಜೆಪಿ 2019 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಯನ್ನು ಪುನರಾವರ್ತಿಸಿತು. ಆದರೆ ಅವರ ಎರಡನೇ ಆಡಳಿತದ ಕೊನೆಯ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಈ ಮಹಿಳಾ ಮೀಸಲಾತಿ ವಿಷಯವನ್ನುಸದನದಲ್ಲಿ ಮಂಡಿಸುವ ಮಸೂದೆಗಳ  ಪಟ್ಟಿಯಲ್ಲಿ ಸೇರಿಸಲಿಲ್ಲ. ಅಲ್ಲದೆ, ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಈ ಮಸೂದೆಯನ್ನು ತರುವ ಮೂಲಕ, 18ನೇ ಲೋಕಸಭೆಯು ಮಹಿಳೆಯರಿಗೆ ಅಸಮಾನತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖಚಿತಪಡಿಸಿದ್ದಾರೆ. ಇಂತಹ ಪರಿಸ್ಥಿತಿಗೆ ಮೋದಿ ಸರಕಾರವೇ ಹೊಣೆ. ಇಷ್ಟು ತಡವಾಗಿ ಈ ವಿಧೇಯಕ ಮಂಡನೆಗೂ  ಮುಂಬರುವ ಚುನಾವಣೆಗೂ ನಿಕಟ ಸಂಬಂಧವಿದೆ. ತಾನು ನೀಡಿದ ಚುನಾವಣಾ ಭರವಸೆಯನ್ನು ಈಡೇರಿಸಿಲ್ಲ ಎಂಬ ಆರೋಪದಿಂದ ತಪ್ಪಿಸಿಕೊಳ್ಳುವ ಹಂಬಲವೂ ಇದರಲ್ಲಿದೆ.

ಚುನಾವಣಾ ಪ್ರಣಾಳಿಕೆಯಂತಿರುವ  ಮುನ್ನುಡಿ

ಆದರೆ, ಆಕ್ಷೇಪಾರ್ಹವಾದದ್ದು ಮತ್ತು ಪ್ರಶ್ನಿಸಬೇಕಾದದ್ದು, ಅತ್ಯಂತ ಏಕಪಕ್ಷೀಯವಾಗಿ ವ್ಯಕ್ತವಾಗುವ ಉದ್ದೇಶಗಳು ಮತ್ತು ಕಾರಣಗಳು, ಅಂತಹ ಹೇಳಿಕೆಯು ನಿಖರವಾಗಿರಬೇಕು – ಉದ್ದೇಶ, ಗುರಿ, ಕಾನೂನಿನ ಇತಿಹಾಸವನ್ನು ಉಲ್ಲೇಖಿಸುವುದು-ನಿಖರವಾಗಿ ಇರಬೇಕು. ಆದರೆ ಅವರ ಹೇಳಿಕೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆಯೇ ಇದೆ. ಅಡುಗೆ ಅನಿಲ ಸಿಲಿಂಡರ್‌ನಿಂದ ಹಿಡಿದು ಶೌಚಾಲಯದ ವರೆಗೆ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಮಾಡಿದೆ ಎಂದು ಹೇಳಲಾದ ಎಲ್ಲವನ್ನೂ ಇದು ಪಟ್ಟಿ ಮಾಡುತ್ತದೆ. ಹೆಣ್ಣನ್ನು ಗೃಹಿಣಿಯಾಗಿ ಮಾತ್ರ ನೋಡುವ ವಿಚಾರಧಾರೆ, ಮಹಿಳೆಯರಿಗೆ ಮೀಸಲಾತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಅವರ ಭಾಗವಹಿಸುವಿಕೆಯ  ಪ್ರಜಾಸತ್ತಾತ್ಮಕ ಧ್ವನಿಯನ್ನು ಬಲಪಡಿಸಲು ಅಗತ್ಯವಾದ ಪ್ರಕ್ರಿಯೆಗಳೊಂದಿಗೆ ಅಳವಡಿಸಲು ಇನ್ನೂ ಹಿಂಜರಿಯುತ್ತಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಹಿಳಾ ಹೋರಾಟವನ್ನು ದಾಖಲಿಸಲು ಪುನಃ ಮುನ್ನುಡಿ ಬರೆಯಬೇಕಿದೆ. ಮಹಿಳಾ ಮೀಸಲಾತಿ ಕಾಯಿದೆ ಐತಿಹಾಸಿಕವಾಗಿದೆ. ಅವರು ವ್ಯಕ್ತಪಡಿಸಿದ ಉದ್ದೇಶಗಳು ಮತ್ತು ಚುನಾವಣಾ ಪರಿಗಣನೆಗಳಿಂದಾಗಿ ಈ ಕಾಯಿದೆಯು ಕಳಂಕಿತವಾಗಬಾರದು.

ಇದನ್ನೂ ಓದಿ:ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಮನೆ ವ್ಯವಸ್ಥೆ ಕಲ್ಪಿಸಲು ಡಿವೈಎಫ್ಐ ಒತ್ತಾಯ

ಸುದೀರ್ಘ ಇತಿಹಾಸ ಹೊಂದಿರುವ ಮಸೂದೆ

ಈ ಮಸೂದೆಯ ಇತಿಹಾಸದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ. ದೇಶಾದ್ಯಂತ ಮಹಿಳಾ ಸಂಘಟನೆಗಳು ಮತ್ತು ಚಳುವಳಿಗಳ ದೃಢತೆ, ನಿರಂತರ ಸಜ್ಜುಗೊಳಿಸುವಿಕೆ, ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ, ಸ್ಥಳೀಯ ಸಂಸ್ಥೆಗಳಲ್ಲಿಯೂ ಜಾರಿಗೆ ಬಂದ ನಂತರ, ಇದೇ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದ ಚುನಾಯಿತ ಮಹಿಳಾ ಪ್ರತಿನಿಧಿಗಳ ಗಮನಾರ್ಹ ಕೆಲಸದಿಂದ ಬಲಗೊಂಡಿತು. ಇವುಗಳಿಂದಾಗಿ, ಮಸೂದೆಗೆ ತನ್ನದೇ ಆದ ಇತಿಹಾಸವಿದೆ ಮತ್ತು 1996 ರಲ್ಲಿ ಪ್ರಾರಂಭವಾದಾಗಿನಿಂದ ಅದನ್ನು ಅಗೆದು ಹೂಳಲಾಗಿಲ್ಲ ಎಂಬುದು ನಿಜ. ಅವಹೇಳನ, ನಿರಾಕರಿಸುವ ವರ್ತನೆಗಳು, ನಿರ್ಧಾರ ತೆಗೆದುಕೊಳ್ಳುವ ರಚನೆಗಳಲ್ಲಿ ಬೇರೂರಿರುವ ನಿರಂಕುಶಾಧಿಕಾರದಿಂದ ಹೇರಲಾದ ಎಲ್ಲಾ ಅಡೆತಡೆಗಳನ್ನು ನಿವಾರಿಸುವುದು, ಇವುಗಳಲ್ಲಿ ತಾವೇನೂ ಕಡಿಮೆಯಲ್ಲ ಎಂಬುದನ್ನು ಪ್ರತಿ ರಾಜ್ಯದಲ್ಲೂ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಮಹಿಳೆಯರು ಸಾಭೀತುಪಡಿಸಿದರು. ಈ ಮಸೂದೆಯನ್ನು ಜೀವಂತವಾಗಿರಿಸಿಕೊಂಡ ಮಹಿಳಾ ಹೋರಾಟಗಾರರು, ಮಹಿಳಾ ಚಳುವಳಿಗಳನ್ನು ಈ ದೇಶ ನೆನಪಿಸಿಕೊಳ್ಳಬೇಕು ಮತ್ತು ಗೌರವಿಸಬೇಕು.

ಈ ಹಿಂದೆ  ಅಡ್ಡಿಪಡಿಸುವ ಬಿಜೆಪಿ ಯತ್ನ

ಯುಪಿಎ ಆಡಳಿತಾವಧಿಯಲ್ಲಿ 2010ರ ಮಾರ್ಚ್‌ನಲ್ಲಿ ರಾಜ್ಯಸಭೆಯಲ್ಲಿ ಮಸೂದೆಯ ಅಂಗೀಕಾರ ಆದಾಗ, ಅಲ್ಲಿ ನಡೆದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಆ ಚರ್ಚೆಗಳಲ್ಲಿ ಭಾಗವಹಿಸಿದ ವಿವಿಧ ಜನರ ದುಷ್ಕೃತ್ಯಗಳಿಗೆ ನಾನೂ ಸಹ ಸಾಕ್ಷಿಯಾಗಿದ್ದೆ. ಸಭಾಪತಿ ಸಭಾಂಗಣದಲ್ಲಿ ನಡೆದ ಚರ್ಚೆಯಲ್ಲಿ ಹಲವು ವಿಷಯಗಳು ಪ್ರಸ್ತಾಪವಾದವು. ಈ ಮಸೂದೆ ಅಂಗೀಕಾರಕ್ಕೆ “ತಮ್ಮ ಆದೇಶ”  ಷರತ್ತಾಗಿರಬೇಕು ಎಂದು ಬಿಜೆಪಿ  ನಾಯಕರೊಬ್ಬರು ಪ್ರಸ್ತಾಪಿಸಿದ ವಿಷಯವೂ ಒಂದು. ಈ ಮಸೂದೆ ಅಂಗೀಕಾರವಾಗದಿರಲು, ಮಸೂದೆಯ ಅಂಗೀಕಾರದ ಶ್ರೇಯಸ್ಸು ಯುಪಿಎ ಸರ್ಕಾರಕ್ಕೆ ಹೋಗಬಾರದು ಎಂದು ಖಚಿತ ಪಡಿಸಿಕೊಳ್ಳಲು ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಲು ಅದಾಗಲೇ ಯೋಜಿಸಿದ್ದವರಿಗೆ ಇದು ಅನುಮತಿಯಂತೆ ನನಗೆ ತೋರಿತು.

      2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದಾಗ

ಸೋನಿಯಾ ಗಾಂಧಿ, ಹಮೀದ್ ಅನ್ಸಾರಿ  ದೃಢ ಬೆಂಬಲ ;

ಯುಪಿಎ ಯೊಂದಿಗೆ ಸ್ಥಾನ ಪಡೆದಿರುವವರೊಂದಿಗೆ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರಮುಖರು ಸೇರಿದಂತೆ, ಪಕ್ಷದಲ್ಲಿ ಈ ವಿಷಯದಲ್ಲಿ ಆಸಕ್ತಿ ಇಲ್ಲದವರಿದ್ದರು. ಆದಾಗ್ಯೂ, ಯುಪಿಎನ ಅಂದಿನ ನಾಯಕಿ ಸೋನಿಯಾ ಗಾಂಧಿಯವರು ಮಸೂದೆಯನ್ನು ಬೆಂಬಲಿಸಿದ್ದರಿಂದ, ಮಸೂದೆಯನ್ನು ಪುನರುಜ್ಜೀವನಗೊಳಿಸುವ ವಿವಿಧ ಯೋಜನೆಗಳನ್ನು ವಿಫಲಗೊಳಿಸಲಾಯಿತು. ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ತೆಗೆದುಕೊಂಡ ದೃಢ ನಿಲುವು ಮಸೂದೆ ಅಂಗೀಕಾರಕ್ಕೆ ಪ್ರಮುಖ ಅಂಶವಾಗಿತ್ತು. ನನ್ನ ಹಿಂದೆ ಕುಳಿತಿದ್ದ  ಸಮಾಜವಾದಿ ಪಕ್ಷದ  ಸದಸ್ಯರೊಬ್ಬರು ಗ್ಲಾಸ್ ಒಡೆದು, ಕೈ ಕೊಯ್ದುಕೊಂಡು, ಮೇಜಿನ ಮೇಲೆ ರಕ್ತ ಸುರಿಯುತ್ತಾ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. ಮಸೂದೆಯನ್ನು ವಿರೋಧಿಸಿದ ಹಲವರು ಜೋರಾಗಿ ಕೂಗುತ್ತಿದ್ದರು.

ಇಂತಹ ಕೃತ್ಯಗಳಿಂದ ವಿಚಲಿತರಾಗದ ಸಭಾಪತಿಯವರು ಯಾವುದೇ ಮುಲಾಜಿಲ್ಲದೆ ಅವರನ್ನೆಲ್ಲ ಸದನದಿಂದ ಹೊರ ಹಾಕಿ ಸದನವನ್ನು ಸುವ್ಯವಸ್ಥೆಗೆ  ತಂದರು. ನಂತರ ಮಸೂದೆ ಅಂಗೀಕಾರವಾಯಿತು. ಅದನ್ನು ಸಾಧಿಸಿದ ಕ್ಷಣವು  ಐತಿಹಾಸಿಕವಾಗಿತ್ತು.

ಸುಷ್ಮಾ ಸ್ವರಾಜ್ ಕಾಯುತ್ತಿದ್ದರು

ತಂಪಾದ ರಾತ್ರಿಯ ಗಾಳಿಗೆ ನಾವು ಹೊರನಡೆಯುತ್ತಿದ್ದಂತೆ, ಲೋಕಸಭೆಯ ಆಗಿನ ವಿರೋಧ ಪಕ್ಷದ ನಾಯಕಿ  ಸುಷ್ಮಾ ಸ್ವರಾಜ್ ನಮಗಾಗಿ ಕಾಯುತ್ತಿದ್ದರು. ಪಕ್ಷಾತೀತವಾಗಿ ಮಹಿಳಾ ಸಂಸದರು ಒಟ್ಟಾಗಿ ಈ ದಿನವನ್ನು ಆಚರಿಸಿದರು. ಒಂದು ದೊಡ್ಡ ಉದ್ದೇಶಕ್ಕಾಗಿ ಒಗ್ಗೂಡುವುದಕ್ಕೆ ಇದು ಉತ್ತಮ ಉದಾಹರಣೆಯಾಗಿತ್ತು. ಅಂತಹ ಸಂಬಂಧ ಇಂದು ಆಡಳಿತ ಪಕ್ಷಕ್ಕೆ ಸೇರಿದ ಮಹಿಳಾ ಮುಖಂಡರು ಮತ್ತು ಸಚಿವರಲ್ಲಿ ಇಲ್ಲ. ಮಹಿಳೆಯರ ಪ್ರತಿಭಟನೆಯ  ಬಲವು ಮಸೂದೆ ಮರಳಿ ಬರುತ್ತದೆ ಎಂಬುದನ್ನು ಖಚಿಪಡಿಸಿತು. ಅಲ್ಲದೆ ,ಆ ಮೂಲಕ ಇದು ಭಾರತೀಯ ಪ್ರಜಾಪ್ರಭುತ್ವದ ದನಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

(ಅನು: ಸಿ.ಸಿದ್ದಯ್ಯ)

ವಿಡಿಯೋ ನೋಡಿ:ಮುಂದಿನ ಕೆಲವು ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ದೇಶವಾಗುತ್ತದೆಯೇ?Janashakthi Media

Donate Janashakthi Media

Leave a Reply

Your email address will not be published. Required fields are marked *