ರಾಷ್ಟ್ರಗಾನ ಕುರಿತ ಆದೇಶ: ಸಂವಿಧಾನದ ಭಾವವನ್ನು ಎತ್ತಿ ಹಿಡಿಯಲು ತಕ್ಷಣವೇ ಹಿಂತೆಗೆದುಕೊಳ್ಳಬೇಕು-ಸಿಪಿಐ(ಎಂ)

ನವದೆಹಲಿ: ಭಾರತ ಸರ್ಕಾರವು ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದೆ. ಇದು ಸಂವಿಧಾನದ ಭಾವವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಭಾರತ ಸಂವಿಧಾನದ ವಿಧಿ 51A(ಅ) ಪ್ರಕಾರ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಸಮಗ್ರ ಚರ್ಚೆಯ ನಂತರ ಸಂವಿಧಾನ ಸಭೆಯು ರಾಷ್ಟ್ರಗಾನದ ಕುರಿತು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್  ರವರು ನೀಡಿದ ಹೇಳಿಕೆಯನ್ನು ಅಂಗೀಕರಿಸಿತು; ಅದರಲ್ಲಿ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ನವದೆಹಲಿ | ಅರಾವಳಿ ರಕ್ಷಣೆಗೆ ಸುಪ್ರೀಂ ಕೋರ್ಟ್ ಕಠಿಣ ನಿಲುವು – ಸುಪ್ರೀಂ ಕೋರ್ಟ್

ಇತ್ತೀಚಿನ ಆದೇಶದ ಮೂಲಕ ಸರ್ಕಾರವು ಉಳಿದ ನಾಲ್ಕು ಚರಣಗಳನ್ನು ಸೇರಿಸಲು ಯತ್ನಿಸುತ್ತಿದೆ. ಅವು ಭಾರತೀಯ ಗಣರಾಜ್ಯದ ಧರ್ಮನಿರಪೇಕ್ಷ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲವೆಂದು ಸಂವಿಧಾನ ಸಭೆ ಅಭಿಪ್ರಾಯಪಟ್ಟಿತ್ತು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುರುದ್ದೇಶಗಳಿಂದ ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆಯ ವಿಷಯದಲ್ಲಿ ಒಂದು ಅನಗತ್ಯ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.

ಇಂತಹ ಐತಿಹಾಸಿಕ ಸಾಂಸ್ಕೃತಿಕ ಚಿಹ್ನೆಗಳೊಂದಿಗೆ ಬಿಜೆಪಿ ಸರ್ಕಾರ ಆಟವಾಡಲು ಅವಕಾಶ ನೀಡಬಾರದು ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸರ್ಕಾರವು ಸಂವಿಧಾನದ ಭಾವವನ್ನು ಎತ್ತಿ ಹಿಡಿಯಲು ಈ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.

ಇದನ್ನೂ ನೋಡಿ: ಕಾರ್ಮಿಕ–ರೈತ- ಕೂಲಿಕಾರರ ಮಹಾ ಹೋರಾಟ – ದೇಶವ್ಯಾಪಿ ಮುಷ್ಕರಕ್ಕೆ ಭಾರೀ ಸ್ಪಂದನೆ Janashakthi Media

Donate Janashakthi Media

Leave a Reply

Your email address will not be published. Required fields are marked *