ಫ್ರಾನ್ಸ್ ; ಪ್ಯಾರಿಸ್ ಒಲಿಂಪಿಕ್ಸ್ ನ ಐದನೆ ದಿನವಾದ ಇಂದು ಭಾರತ ಶೂಟಿಂಗ್ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದೆ. ಇಂದು ನಡೆದ ಪುರುಷರ ವಿಭಾಗದ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಸ್ವಪ್ನಿಲ್ ಕೌಸ್ಲೆ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೂರನೆ ಪದಕವನ್ನು ತಂದುಕೊಟ್ಟಿದ್ದಾರೆ.
ಆಟ ಮುಂದುವರೆದಂತೆ, ಅವರ ಹೊಡೆತಗಳ ನಿಖರತೆ ಸುಧಾರಿಸಿತು. ಮುಂದಿನ 15 ಪ್ರಯತ್ನಗಳಲ್ಲಿ ಸತತವಾಗಿ 10+ ಪಾಯಿಂಟ್ ಶಾಟ್‌ಗಳನ್ನು ಗಳಿಸಿ 310.1 ಅಂಕಗಳೊಂದಿಗೆ ಪ್ರೋನ್ ಹಂತಕ್ಕೆ ಎಂಟ್ರಿ ಪಡೆದರು. ಇದರಲ್ಲಿ ಮೊದಲ ಸುತ್ತಿನಲ್ಲಿ 52.7 ಅಂಕಗಳನ್ನು ಗಳಿಸಿ, ಎರಡನೇಯ ಸುತ್ತಿನಲ್ಲಿ 52.2 ಮತ್ತು ಮೂರನೇ ಸುತ್ತಿನಲ್ಲಿ 51.9 ಅಂಕಗಳನ್ನು ಗಳಿಸಿದರು, ಇದರಲ್ಲಿ ಅವರ ಅತ್ಯುತ್ತಮ ಹೊಡೆತ 10.8 ಆಗಿತ್ತು.
ಬಳಿಕ ಅಂತಿಮ ಹಂತದ ಮೊದಲ ಪ್ರಯತ್ನದಲ್ಲಿ 9.9-ಪಾಯಿಂಟ ಸಾಧಿಸಿದರು, ನಂತರ 10.7-ಪಾಯಿಂಟ್ ಶಾಟ್ನೊಂದಿಗೆ ಅದ್ಭುತ ಪುನರಾಗಮನ ಮಾಡಿದರು. ಅವರು ಮೊದಲ ಸುತ್ತಿನಿಂದ 51.1 ಅಂಕ ಮತ್ತು ನಂತರ ಎರಡನೇ ಸುತ್ತಿನಿಂದ 50.4 ಅಂಕ ಕಲೆ ಹಾಕಿದರು. ಒಟ್ಟಾರೇ 411.6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು ಎಲಿಮಿನೇಷನ್ ಸರಣಿಯನ್ನು ಪ್ರವೇಶಿಸಿದರು.
ಮೂರನೇ ಮತ್ತು ಅಂತಿಮ ಎಲಿಮಿನೇಷನ್ ಸುತ್ತಿನಲ್ಲಿ, ಅವರು ಮೊದಲ ಹಂತದಲ್ಲಿ 10.5 ಅಂಕ ಕಲೆಹಾಕಿ ಮೂರನೇ ಸ್ಥಾನ ಭದ್ರಪಡಿಸಿಕೊಂಡರು. ಕೊನೆಯಲ್ಲಿ 451.4 ಅಂಕಗಳೊಂದಿಗೆ ಕಂಚಿನ ಪದಕವನ್ನು ವಶಪಡಿಸಿಕೊಂಡರು.