ಐಪಿಎಲ್ ರದ್ದುಗೊಳಿಸಿ ಕೋವಿಡ್‌ ನಿಯಂತ್ರಿಸಲು ಹಣ ನೀಡಿ: ಶೋಯೆಬ್‌ ಅಖ್ತರ್

ಭಾರತದಲ್ಲಿ ಕೋವಿಡ್-19 ಅಲೆ ತೀವ್ರರೀತಿಯಲ್ಲಿ ವ್ಯಾಪಿಸುತ್ತಿದ್ದು, ವೈದ್ಯಕೀಯ ತುರ್ತು ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಪಂದ್ಯಾವಳಿ ನಡೆಸುವುದು ಸೂಕ್ತವಲ್ಲ. ಐಪಿಎಲ್‌ ಅನ್ನು ರದ್ದುಗೊಳಿಸಿ ಅದೇ ಹಣವನ್ನು ಕೋವಿಡ್‌ ನಿಯಂತ್ರಿಸಲು ಆಮ್ಲಜನಕ ಸಿಲಿಂಡರ್ ಖರೀದಿಸಲು ಮುಂದಾಗಬೇಕೆಂದು ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಆಟಗಾರ ಶೋಯೆಬ್ ಅಖ್ತರ್‌ ವಿನಂತಿಸಿದ್ದಾರೆ.

‘ನಾವು ಸಾಂಕ್ರಾಮಿಕ ರೋಗದ ಅತಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಜೂನ್ ತಿಂಗಳಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪುನರಾರಂಭಿಸಬಾರದು. ಐಪಿಎಲ್ ಕೂಡಾ ಆಯೋಜಿಸಲು ಇದು ಸೂಕ್ತ ಸಮಯವಲ್ಲ. ಐಪಿಎಲ್ ಹಣವನ್ನು ಅಗತ್ಯವಿರುವವರಿಗೆ ನೀಡಿ, ಆಮ್ಲಜನಕ ಸಿಲಿಂಡರ್ ಖರೀದಿಸಿ ಜನರ ಪ್ರಾಣ ಉಳಿಸಿ’ ಎಂದು ಹೇಳಿದ್ದಾರೆ.

‘ಈ ಸಮಯದಲ್ಲಿ ಇಂತಹ ಕ್ರಿಕೆಟ್ ನಮಗೆ ಬೇಕಾಗಿಲ್ಲ. ಅಂತಹ ಹೀರೊಗಳು ಬೇಡ. ಮನರಂಜನೆಯೂ ಬೇಡ. ನಮಗೆ ಪಿಎಸ್‌ಎಲ್ ಅಥವಾ ಐಪಿಎಲ್ ಬೇಡ. ಭಾರತ ಹಾಗೂ ಪಾಕಿಸ್ತಾನದಲ್ಲಿ ಆ ಜೀವಗಳನ್ನು ಉಳಿಸಬೇಕೆಂದು ಬಯಸುತ್ತೇವೆ. ತುಂಬಾ ನೋವು ಹಾಗೂ ದುಃಖತಪ್ತರಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಜನರ ಜೀವವೂ ಹೆಚ್ಚು ಮುಖ್ಯವೆನಿಸುತ್ತದೆ. ನಮ್ಮಲ್ಲಿಯೂ ಪಂದ್ಯಾವಳಿಯನ್ನು ರದ್ದುಗೊಳಿಸಲು ಮುಂದಾಗಲಿ ‘ ಎಂದು ವಿನಂತಿಸಿದ್ದಾರೆ.

ಈ ಹಿಂದೆಯೂ ಸಹ ಕೋವಿಡ್‌ ನಿಯಂತ್ರಿಸಲು ಭಾರತಕ್ಕೆ ಸಹಾಯ ಹಸ್ತ ಚಾಚಬೇಕೆಂದು ನಮವಿ ಮಾಡಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *