ಶಿವಮೊಗ್ಗ: ಮಾಜಿ ಸಚಿವ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರದಲ್ಲೇ ರಾಷ್ಟ್ರಲಾಂಛನಕ್ಕೆ ಅಪಮಾನಗೊಸಲಾಗಿದೆ. ಅಶೋಕ ಲಾಂಚನದ ಮೇಲೆ ಭಗ್ವಧ್ವಜ ಹಾರಿಸಿ ಅಪಮಾನಿಸಲಾಗಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗದ ಅಶೋಕ ವೃತ್ತದಲ್ಲಿರುವ ರಾಷ್ಟ್ರಲಾಂಛನಕ್ಕೆ ಅಪಮಾನವಾಗಿದೆ. ರಾಷ್ಟ್ರಲಾಂಛನದ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಿಸಲಾಗಿದೆ. ಹಿಂದುಮಹಾಸಭಾ ಗಣಪತಿವಿಸರ್ಜನಾ ಮೆರವಣಿಗೆ ಹಿನ್ನೆಲ್ಲೆಯಲ್ಲಿ ಇಡೀ ಶಿವಮೊಗ್ಗ ಕೇಸರಿಮಯ ಮಾಡಲಾಗಿದ್ದು ಅಲಂಕಾರ ಸಮಿತಿಯು ರಾಷ್ಟಲಾಂಚನದ ಮೇಲೆ ಕೇಸರಿ ಧ್ವಜ ಹಾರಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಬಂದ ನಂತರ ಪೊಲೀಸರು ತೆಗೆಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಕೆಂಪುಕೋಟೆ ಮೇಲೆಯೂ ಭಾಗವಧ್ವಜ ಹಾರಿಸುವುದಾಗಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದೀಗ ಅವರ ಕ್ಷೇತ್ರದಲ್ಲೇ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಹಾರಿಸಿ ಅವಮಾನ ಮಾಡಲಾಗಿದೆ. ಬಿಜೆಪಿ ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನದ ಬಗ್ಗೆ ಗೌರವ ಇಲ್ಲ, ಕೂಡಲೇ ಪೊಲೀಸರು ಸ್ವಯಂ ದೂರು ದಾಖಲಿಸಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.