ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗು ದುಡಿಯುತ್ತಿದ್ದ ಸುನಿಲ್ 24 ವರ್ಷ ಇವರು ಮಂಗಳವಾರ ಅನ್ವರ್ ಕಾಲೋನಿ ಯಲ್ಲಿ ಮಾಸ್ಕ್ ಹಾಕಿ ಕೊಳ್ಳಲು ಹೇಳಿದ್ದನ್ನು ಸಹಿಸದ ಕಿಡಿಗೇಡಿಗಳು ಸುನಿಲ್ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಮಾರಾಕಾಸ್ತಗಳಿಂದ ಇರಿದಿದ್ದರು. ಈ ಘಟನೆಯಲ್ಲಿ ಗಾಯಗೊಂಡ ಸುನಿಲ್ ಹಾಗು ಸಹೊದ್ಯೋಗಿ ಶ್ರೀಕಂಠ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,
ಚಿಕಿತ್ಸೆ ಸ್ಪಂದಿಸದೆ ಸುನಿಲ್ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಾಳು ಅಗಿರುವ ಶ್ರೀಕಂಠ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯನ್ನು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ರಾಜ್ಯ ಸಮಿತಿಯು ಖಂಡಿಸಿದೆ. ಅಲ್ಲದೆ ಈ ಘಟನೆಯಲ್ಲಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿದೆ. ಮೃತನ ಕುಟುಂಬಕ್ಕೆ 25, ಲಕ್ಷ ಪರಿಹಾರ ಹಾಗು ಅವಲಂಬಿತರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ. ಹಾಗೂ ಶ್ರೀಕಂಠನಿಗೆ ಉತ್ತಮ ಚಿಕಿತ್ಸೆಯನ್ನು ನೀಡಬೇಕು ಹಾಗು ಅದರ ವೆಚ್ಚವನ್ನು ಸರ್ಕಾರವೆ ಭರಿಸುವಂತೆ ಅಗ್ರಹಿಸಿದೆ.
ಇದನ್ನೂ ಓದಿ : ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?
ಇತ್ತೀಚಿನ ದಿನಗಳಲ್ಲಿ ಮುನಿಸಿಪಾಲ್ ಕಾರ್ಮಿಕರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಕೆಲಸದ ಒತ್ತಡವು ಹೆಚ್ಚಿದೆ. ಸೂಕ್ತ ರಕ್ಷಣಾ ಸಲಕರಣೆಗಳು ನೀಡದೆ ಕೋವಿಡ್ -೧೯ ಕೆಲಸಗಳಲ್ಲಿ ತೊಡಗಿಸಲಾಗುತ್ತಿದೆ. ನೂರಾರು ಪೌರ ಕಾರ್ಮಿಕರು, ಕಸದ ಅಟೋಚಾಲಕರು, ವಾರ್ಟರ್ ಮ್ಯಾನ್ಗಳು ಸೋಂಕಿತರಾಗಿ ಬಳಲುವಂತೆ ಅಗಿದೆ. ಇವರಿಗೆ ಅಗತ್ಯವಾದ ಚಿಕಿತ್ಸೆ ಹಾಗು ಸೂಕ್ತವಾದ ಪರಿಹಾರವನ್ನು ನೀಡುವಂತೆ ಸಹ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ರಾಜ್ಯ ಸಮಿತಿಯು ಒತ್ತಾಯಿಸಿದೆ.
ಇದನ್ನೂ ಓದಿ : ಆಕ್ಸಿಜನ್ ಸೇವಾ ಕೇಂದ್ರ ಆರಂಭಿಸಿದ ಸಿಐಟಿಯು
ಕೋವಿಡ್-19 ಮರಣ ಹೊಂದುವ ಶವ ಸಂಸ್ಕಾರ, ಸೋಂಕಿತರ ಮನೆಗಳಿಗೆ ಔಷಧಿ ಸಿಂಪಡಿಸುವ ಕೆಲಸಕ್ಕೆ ತಾತ್ಕಾಲಿಕ ಟೆಂಡರ್ ಮೂಲಕ ಪ್ರತ್ಯೇಕ ಕಾರ್ಮಿಕರನ್ನು ತಕ್ಷಣವೆ ನೇಮಿಸಬೇಕು. ಪಿ.ಪಿ.ಇ ಕಿಟ್ ಗಳನ್ನು ಹಾಗು ಸೂಕ್ತ ಸುರಕ್ಷತಾ ಸಲಕರಣೆಗಳಾದ ಕೈಗೆ ಗ್ಲೌಸ್, ಮಾಸ್ಕ್, ಪೇಸ್ ಶೀಲ್ಡ್, ಸ್ಯಾನಿಟೈಜಾರ್ ನೀಡದೆ ಈ ಕೆಲಸದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಬಾರದು, ಸೋಂಕು ಹರಡುವಿಕೆಯು ತುಂಬ ವೇಗವಾಗಿರುವ ಕಾರಣ ಪೌರ ಕಾರ್ಮಿಕರು. ಕಸದ ಆಟೋಚಾಲಕರು/ ಸಹಾಯಕರು ಕೆಲಸ ಮುಗಿಸಿ ಮನೆಗೆ ತೆರಳುವಾಗ ಸ್ವಚ್ಚವಾಗಿಹೋಗಲು ಅನುವಾಗುವಂತೆ ಪೌರ ಕಾರ್ಮಿಕರ ಸ್ನಾನ ಗೃಹಗಳನ್ನು ತಕ್ಷಣವೆ ಕಾರ್ಯಾರಂಭಿಸುವಂತೆ ಕ್ರಮ ವಹಿಸಲು ಸರ್ಕಾರವನು ಒತ್ತಾಯಿಸಿದೆ.
ಕರ್ನಾಟಕರಾಜ್ಯದ ಉಚ್ಚ ನ್ಯಾಯಲಯದ ನಿರ್ದೇಶನದಂತೆ ಬೆಳಿಗ್ಗೆ 6 ರಿಂದ 11 ತನಕ ಮಾತ್ರ ಕೆಲಸಮಾಡಿಸುವಂತೆ ಪೌರಾಡಳಿತ ನಿರ್ದೇಶನಾಲಯವು ಆದೇಶ ನೀಡಿದ್ದರು ಇದನ್ನು ಪರಿಪಾಲಿಸದೆ ಉಲ್ಲಂಘಿಸಲಾಗುತ್ತಿದೆ , ಇದರ ಕಡ್ಡಾಯ ಜಾರಿಗೆ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷರಾದ ಹರೀಶ್ ನಾಯಕ್, ರಾಜ್ಯ ಪ್ರಧಾನಕಾರ್ಯದರ್ಶಿ ಸೈಯದ್ ಮುಜೀಬ್ ಆಗ್ರಹಿಸಿದ್ದಾರೆ.