ಶಿರಾ : ಭಾರತದಲ್ಲಿ ಸುಮಾರು 37 ಕೋಟಿ ಜನಸಂಖ್ಯೆ ಯುವಜನರು ಇದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ 2.1 ಕೋಟಿ ಯುವ ಜನರು ಇದ್ದಾರೆ. ಇಷ್ಟು ಜನ ಸಂಖ್ಯೆ ಇರುವ ನಮಗೆ ಯುವಜನ ಆಯೋಗ ಇಲ್ಲವೆಂಬುದು ಬೇಸರದ ಸಂಗತಿ ಎಂದು ಸಾಮಜಿಕ ಹೋರಾಟಗಾರರಾದ ಜನಾರ್ಧನ ಕೆಸರಗದ್ದೆ ತಿಳಿಸಿದರು.
ಸಿರಾ ಯುವಜನ ಒಕ್ಕೂಟ, ಸಖಿ ಸಂಸ್ಥೆ, ಸಂವಾದ ಸಂಸ್ಥೆ, ಯುವ ಧ್ವನಿ, ಬಹುತ್ವ ಪ್ರತಿಷ್ಠಾನ ಹಲವು ಸಂಘಟನೆಗಳು ಸೇರಿ ಯುವಜನ ಆಯೋಗ ರಚನೆಯಾಗಬೇಕು ಎಂದು ಹಲವು ವರ್ಷಗಳಿಂದ ಬಹಳಷ್ಟು ಕೆಲಸಗಳು ಮಾಡುತ್ತಾ ಬಂದಿವೆ ಅದರ ಭಾಗವಾಗಿ ನಾವು ರಾಜ್ಯಮಟ್ಟದಲ್ಲಿ ಯುವಜನರಟ್ಟಿಗೆ ಕೆಲಸ ಮಾಡುತ್ತಿರುವ ಎಲ್ಲ ಸಂಘ ಸಂಸ್ಥೆಯವರು ಸೇರಿ ಯುವಜನ ಆಯೋಗಕ್ಕಾಗಿ ಆಂದೋಲನ ಮಾಡಲ ಹೊರಟಿದ್ದೇವೆ. ಎಂದು ಹೇಳಿದರು.
ಇದನ್ನೂ ಓದಿ : ಶಿಕಾರಿಪುರ | ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸರ್ಕಲ್ಯರ್ ಎಕಾನಮಿ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೋಗಿ ಅಲ್ಲಿ ನಮ್ಮ ಶಾಸಕರು ಸಚಿವರುಗಳು MLCಗಳು ಎಲ್ಲರನ್ನೂ ಭೇಟಿ ಮಾಡಿ ಯುವಜನ ಆಯೋಗವನ್ನು ಸ್ಥಾಪಿಸಲು ಅವರಲ್ಲಿ ಮನವಿ ಮಾಡಲು ಹೊರಟಿದ್ದೇವೆ. ಎಂದು ತಿಳಿಸಿದರು.
ಇಂದು ಶಿರಾದಲ್ಲಿ ರಾಜ್ಯಮಟ್ಟದ ಸಭೆ ನಡೆಸಿ ರಾಜ್ಯದ ಎಲ್ಲಾ ಯುವ ಜನರ ಪರವಾಗಿ ಇಂದು ಶಿರಾ ಕ್ಷೇತ್ರದ ಶಾಸಕರು ಹಾಗೂ ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿಬಿ ಜಯಚಂದ್ರ ರವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಯುವಜನ ಆಯೋಗ ಸ್ಥಾಪಿಸಲು ಮನವಿ ಮಾಡಿ ಮಾಡಿದ್ದೆವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಿರಾ ಯುವಜನ ಒಕ್ಕೂಟ, ಸಖಿ ಸಂಸ್ಥೆ, ಸಂವಾದ ಸಂಸ್ಥೆ, ಯುವ ಧ್ವನಿ, ಬಹುತ್ವ ಪ್ರತಿಷ್ಠಾನ ಹಲವು ಸಂಘಟನೆಗಳ ಮುಖಂಡರು ಪೂಜಾ ಕಂಬೀಮನೆ ಹಾಗೂ ಇತರರು ಇದ್ದರು.
ಇದನ್ನೂ ನೋಡಿ : ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ಹೋರಾಟ | ಕೇಂದ್ರ ಸರಕಾರ ಕೊಟ್ಟ ಭರವಸೆ ಏನು? Janashakthi Media
