ಆಂಧ್ರಪ್ರದೇಶ | ನೌಕಾ ಪಡೆಗೆ ಹೊಸ ಎರಡು ನೌಕೆಗಳು ಸೇರ್ಪಡೆ

Please follow and like us:
ಆಂಧ್ರಪ್ರದೇಶ : ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಅತ್ಯಾಧುನಿಕ ಯುದ್ಧ ನೌಕೆಗಳಾದ ಐಎನ್‌ಎಸ್ ಉದಯಗಿರಿ ಹಾಗೂ ಐಎನ್‌ಎಸ್ ಹಿಮಗಿರಿಯನ್ನು ನೌಕಾಪಡೆಗೆ ಮಂಗಳವಾರ ನಿಯೋಜಿಸಲಾಗಿದೆ.  ಆಂಧ್ರಪ್ರದೇಶ

ಐಎನ್‌ಎಸ್ ಉದಯಗಿರಿ ಯುದ್ಧನೌಕೆಯನ್ನು ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್‌ ನಿರ್ಮಿಸಿದೆ. ಐಎನ್‌ಎಸ್ ಹಿಮಗಿರಿಯನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್‌ ಮತ್ತು ಇಂಜನಿಯರ್ಸ್‌ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಎರಡು ಯುದ್ಧನೌಕೆಗಳನ್ನು ಏಕಕಾಲಕ್ಕೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ : ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮನೀಡಿದ ವಿದ್ಯಾರ್ಥಿನಿ ಪ್ರಕರಣ: ಪ್ರಮುಖ ಆರೋಪಿ ಬಂಧನ

ಇದರೊಂದಿಗೆ ದೇಶದ ಕೈಗಾರಿಕೆ, ತಾಂತ್ರಿಕ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ಪ್ರಾದೇಶಿಕ ಶಕ್ತಿ ಸಮತೋಲನ ಪ್ರದರ್ಶಿಸುವ ಮೂರು ಯುದ್ಧ ನೌಕೆಗಳ ಸ್ಕ್ವಾರ್ಡನ್ ಭಾರತ ಹೊಂದಿದಂತಾಗಿದೆ.

ಉದಗಿರಿಯು ವಾರ್‌ಶಿಪ್ ಡಿಸೈನ್ ಬ್ಯುರೋ ವಿನ್ಯಾಸದ 100ನೇ ಸ್ವದೇಶಿದಲ್ಲಿ ನಿರ್ಮಾಣವಾದ ಐಎನ್‌ಎಸ್ ಯುದ್ಧ ನೌಕೆ.ಹಿಂದಿನ ಐಎನ್‌ಎಸ್ ಯುದ್ಧನೌಕೆಗಳಿಗಿಂತ ಶೇ. 5ರಷ್ಟು ದೊಡ್ಡದಾಗಿವೆ.200ಕ್ಕೂ ಹೆಚ್ಚು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳು ಭಾಗಿಯಾಗಿದ್ದವು. 4 ಸಾವಿರ ನೇರ ಹಾಗೂ 10 ಸಾವಿರಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು.ಐನ್‌ಎಸ್ ಉದಯಗಿರಿ, ಹಿಮಗಿರಿ 6700 ಟನ್ ತೂಕದ್ದಾಗಿವೆ.

ಇದನ್ನೂ ನೋಡಿ: ತುಮಕೂರು ರಸ್ತೆಯ ತಾಳೇಕೇರಿ ಬಳಿ ಭೀಕರ ಅಪಘಾತ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *