ರಾಯಚೂರು: ಶಿಕ್ಷಣದ ಉಳಿವಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಿಲ ಭಾರತ ಮಟ್ಟದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವತಿಯಿಂದ ಹಮ್ಮಿಕೊಂಡಿರುವ ಜಾಥಾ ಇಂದು(ಆಗಸ್ಟ್ 11) ನಗರಕ್ಕೆ ಆಗಮಿಸಿದ್ದು, ನಗರದ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ಹಾರ ಹಾಕಿ ಜಾಥಾಕ್ಕೆ ಸ್ವಾಗತ ಕೋರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣದ ಮೇಲೆ ಮಾಡುತ್ತಿರುವ ದಾಳಿಯನ್ನು ಖಂಡಿಸಿದರು. ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರ ಕೇಸರೀಕರಣದ ಹುನ್ನಾರು ನಡೆಸುತ್ತಿದೆ, ಗುಣ ಮಟ್ಟದ ಶಿಕ್ಷಣಕ್ಕಾಗಿ ಮತ್ತು ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಆಗ್ರಹಿಸಲಾಗುತ್ತದೆ.
ಸರಕಾರಿ ಶಾಲಾ ಕಾಲೇಜು, ಹಾಸ್ಟೆಲ್ ಬಲಪಡಿಸಬೇಕು, ಪ್ರಾದೇ ಶಿಕ ಅಸಮತೋಲನ ನಿವಾರಣೆಗಾಗಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಬಸವೇಶ್ವರ ವೃತ್ತದಿಂದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು. ಜಾಥಾದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು, ಎಸ್ಎಫ್ಐ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ, ರಾಜ್ಯಾದ್ಯಕ್ಷ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಕೆ ಜಿ ವೀರೇಶ, ಕರಿಯಪ್ಪ ಅಚ್ಚಳ್ಳಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ಮೀರಾಪೂರ, ಭೀಮನಗೌಡ ಸುಂಕೇಶ್ವರಹಾಳ, ಚಿದಾನಂದ ಕರಿಗೂಳಿ , ಬಸವರಾಜ, ಮೌನೇಶ, ಮಹಾಲಿಂಗ ದೊಡ್ಡಮನಿ, ತಿಪ್ಪಣ್ಣ ನಾಗಮೋಹನ್ ದಾಸ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಯಚೂರಿನಲ್ಲಿ ನಡೆದ ಭಾರೀ ಬಹಿರಂಗ ಸಭೆಯಲ್ಲಿ ಎಸ್ಎಫ್ಐ ಸಂಘಟನೆಯ ಮುಖಂಡರು ಮಾತನಾಡಿದರು. ತದ ನಂತರ ಹಾವೇರಿ ಹಾಗೂ ಗಂಗಾವತಿಗೆ ಜಾತಾ ಪ್ರಯಾಣ ಬೆಳೆಸಿತು.