ತುಮಕೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರ ನಡುವಿನ ಮನಸ್ತಾಪದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸಿಗದ ಹಿನ್ನೆಲೆಯಲ್ಲಿ ಬೇಸತ್ತುಹೋದ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ.
ಶಾಲೆಯ ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಸದಾ ವೈಷಮ್ಯವಿದೆ. ಹೀಗಾಗಿ ಪ್ರತಿದಿನವೂ ಇವರು ಶಾಲೆಗೆ ತಡವಾಗಿ ಬರುತ್ತಿದ್ದರು. ಅಲ್ಲದೆ ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿರುತ್ತಾರೆ.
ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಸಂಗ ನಡೆದಿದೆ. ಶಿಕ್ಷಕಿಯರು ಶಾಲೆಗೆ ತಡವಾಗಿ ಬರುವುದು ಮಾತ್ರವಲ್ಲದೇ ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದರು. ಶಿಕ್ಷಕಿಯರ ಈ ವರ್ತನೆ ಕಂಡು ಗ್ರಾಮಸ್ಥರು, ಪಾಠ ಮಾಡದೇ ಜಗಳವಾಡುತ್ತಾರೆಂದು ಶಾಲೆಗೆ ಬೀಗ ಹಾಕಿದ್ದಾರೆ.
ತುಮಕೂರು ಬಿಇಒ ಹನುಮನಾಯಕ್ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೀಗ ಹಾಕಿದ್ದಕ್ಕೆ ಮಕ್ಕಳು ಹೊರಗೆ ಕೂತಿದ್ದಾರೆ.