ತನ್ನ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೃಷ್ಟಿಸಿದ ಲಕ್ಪಾ ಶೆರ್ಪಾ

ಕಠ್ಮಂಡು(ನೇಪಾಳ): ಜಗತ್ತಿನಲ್ಲೇ ಯಾವ ಮಹಿಳೆಯು ಮಾಡದ ಸಾಹಸವೊಂದನ್ನ ನೇಪಾಳಿಯ ಲಕ್ಪಾ ಶೆರ್ಪಾ ಮಾಡಿದ್ದು ಎವರೆಸ್ಟ್‌ ಶಿಖರವನ್ನ ಅತೀಹೆಚ್ಚು ಬಾರಿ ಏರಿ ತಮ್ಮ ದಾಖಲೆಯನ್ನ ಜಗತ್ತಿಗೆ ಪ್ರದರ್ಶಿಸಿದ್ದಾರೆ.

ನೇಪಾಳಿಯ  ಶೆರ್ಪಾ ಇವರು ಗುರುವಾರ ವಿಶ್ವದ ಅತೀ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ ಶಿಖರವನ್ನ 10 ಬಾರಿ ಯಶಶ್ವಿಯಾಗಿ ತಲುಪುದರ ಮೂಲಕ ಜಗತ್ತಿನ್ನಲ್ಲೇ ಅತಿ ಹೆಚ್ಚುಬಾರಿ ಎವರೆಸ್ಟ್‌ ಶಿಖರವನ್ನ ಏರಿದ ಮಹಿಳೆ ಎಂದೆನಿಸಿಕೊಂಡು ತಮ್ಮದೆ ದಾಖಲೆ ಮುರಿದಿದ್ದಾರೆ.

48 ರ ಹರೆಯದ ಲಕ್ಪಾ ಶೆರ್ಪಾ ಅವರು ಚಾರಣಿಗರಿಗೆ ಕ್ಲೈಂಬಿಂಗ್‌ ಗೇರ್‌ ಮತ್ತು ಸಾಮಾಗ್ರಿಗಳನ್ನ ಸಾಗಿಸುವ ಮೂಲಕ ತಮ್ಮ ಜೀವನವನ್ನ ನಡೆಸಬೇಕಾಗಿತ್ತು. ಹಾಗಾಗಿ ಇವರಿಗೆ ಔಪಚಾರಿಕ ಶಿಕ್ಷಣ ಪಡೆಯುವುದಕ್ಕೆ ಅವಕಾಶ ದೊರಕಲಿಲ್ಲ. ನೇಪಾಳ ಮೂಲದ ಶೆರ್ಪಾ ಶರ್ಮಕನೆಕ್ಟಿಕಟನ್‌ ವೆಸ್ಟ್‌  ಹಾರ್ಟ್‌ ಪೋರ್ಡ್‌ನಲ್ಲಿ, ತನ್ನ ಮೂವರು ಮಕ್ಕಳೊಂದಿಗೆ ಯುಎಸ್ನಲ್ಲಿ ವಾಸಿಸುತ್ತಿದ್ದಾರೆ.

ಮುಂಜಾನೆ  ಶಿಖರವನ್ನು ಏರಲು ಅನುಕೂಲಕರವಾದ ವಾತವರಣ ಇದ್ದಿದ್ದರಿಂದಾಗಿ 8.849 ಮೀಟರ್‌ (29.032) ಅಡಿ ಎತ್ತರದ ಶಿಖರವನ್ನ ಏರಲು ಶೆರ್ಪಾ ಮತ್ತು ಇತರ ಹಲವಾರು ಪರ್ವತಾರೋಹಿಗಳಿಗೆ ಸಹಕಾರಿಗಾಗಿತ್ತು.ಶಿಖರವನ್ನೇರಿದ ಶೆರ್ಪಾ ಅವರು ಆರೋಗ್ಯವಾಗಿದ್ದಾರೆ, ಅವರು ಸುರಕಷಿತವಾಗಿ ಶಿಖರವನ್ನ ಇಳಿಯುತ್ತಿದ್ದಾರೆ. ಎಂದು ಅವರ ಸಹೋದರ ಮತ್ತು ದಂಡಯಾತ್ರೆಯ ಸಂಘಟಕ  ಮಿಂಗ್ಮಾ ಗಲು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *