- ಕೆಲಸ ಮಾಡುವ ಕಾರ್ಮಿಕರಿಗೆ ಸುವರ್ಣಸೌಧದ ಘನತೆ ಎತ್ತಿ ಹಿಡಿಯುವಂತೆ ಸೂಚನೆ
- ಕಾರ್ಮಿಕ ಮಹಿಳೆಯನ್ನು ಗುತ್ತಿಗೆಯಿಂದ ತೆಗೆದು ಹಾಕಿಲ್ಲ
ಬೆಂಗಳೂರು: ಬೆಳಗಾವಿ ಸುವರ್ಣಸೌಧದ ಮುಖ್ಯ ದ್ವಾರದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಕಾರ್ಮಿಕ ಮಹಿಳೆ ಮಲ್ಲವ್ವಾಳನ್ನು ಕೆಲಸದಿಂದ ತೆಗೆದಿದ್ದ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ʻಮಲ್ಲವ್ವಾ ಅವರನ್ನ ಕೆಲಸದಿಂದ ತೆಗೆದು ಹಾಕಿರಲಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.
ಜೂನ್ 1 ರಂದು ಬೆಳಗಾವಿ ಸುವರ್ಣಸೌಧದ ಮುಖ್ಯದ್ವಾರದ ಮೆಟ್ಟಿಲು ಮೇಲೆ ಶಾವಿಗೆ ಒಣ ಹಾಕಿದ್ದ ಕಾರ್ಮಿಕ ಮಹಿಳೆಯನ್ನು ಗುತ್ತಿಗೆಯಿಂದ ತೆಗೆದು ಹಾಕಿರುವ ವಿಚಾರವಾಗಿ, ಬದಲಾಗಿ ಇನ್ನೊಂದು ಸೈಟ್ ನಲ್ಲಿ ಕೆಲಸ ನೀಡಲಾಗಿತ್ತು. ಅತಾಚುರ್ಯದಿಂದ ಘಟನೆ ಆಗಿರುವುದು ತಿಳಿದು ಬಂದಿದ್ದರಿಂದ, ಸುವರ್ಣ ಸೌಧಕ್ಕೆ ಭೇಟಿ ನೀಡಿದಾಗಲೇ ಕೆಲಸದಿಂದ ತೆಗೆಯದಂತೆ ಹಾಗೂ ವೇತನ ಕಡಿತ ಮಾಡದಂತೆ ಹೇಳಿದ್ದೆ. ಬೇರೆ ಸ್ಥಳದಲ್ಲಿ ಕೆಲಸ ನೀಡಿದ್ದು, ಅಲ್ಲಿಂದ ಮತ್ತೆ ಸುವರ್ಣಸೌಧದಲ್ಲಿ ಕೆಲಸ ನೀಡುವಂತೆ ಹೇಳಿದ್ದೆ ಹಾಗೂ ಎಲ್ಲಾ ಕೆಲಸ ಮಾಡುವ ಕಾರ್ಮಿಕರಿಗೆ ಸುವರ್ಣಸೌಧದ ಘನತೆ ಎತ್ತಿ ಹಿಡಿಯುವಂತೆ ಸೂಚನೆ ನೀಡಿದ್ದೇನೆ ಎಂದರು.
ಈ ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೆ, ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಿಂದ ಸೂಚನಾ ಪತ್ರ ಕಳಿಸಲಾಗಿದೆ. ಈ ವಿಚಾರದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದರು.