ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಮತದಾನ ಮಾಡುವಾಗ ರೀಲ್ಸ್ ಮಾಡಿ ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ರಾಯಘಡದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯಘಡ ಲೋಕಸಭಾ ಕ್ಷೇತ್ರದ ರೇವದಂಡದ ಮತಗಟ್ಟೆ ಸಂಖ್ಯೆ 244ರಲ್ಲಿ ಈ ಘಟನೆ ನಡೆದಿದೆ.
ಪ್ರಸಾದ್ ಶರದ್ ಗಾಂಧಿ ಎಂಬ ಮತದಾರ ಈ ಕೃತ್ಯ ಎಸಗಿದ್ದು, ಮತದಾನ ಮಾಡುವಾಗ ಮೊಬೈಲ್ನಲ್ಲಿ ರೀಲ್ಸ್ ಮಾಡಿದ್ದಾರೆ. ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಈ ಚುನಾವಣೆಯು ಭ್ರಷ್ಟಾಚಾರ ನಿರ್ಮೂಲನೆ ವಿರುದ್ಧ ಹೋರಾಟ ನಡೆಸುವುದಾಗಿದೆ ; ಪ್ರಿಯಾಂಕಾ ಗಾಂಧಿ
ವಿಡಿಯೊ ಚಿತ್ರೀಕರಿಸಿದ ಬಳಿಕ ಆತ ಅದನ್ನು ರೀಲ್ಸ್ ಮಾಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ವಾಟ್ಸ್ಆ್ಯಪ್ನಲ್ಲೂ ಸ್ಟೇಟಸ್ ಹಾಕಿದ್ದಾನೆ. ಈ ಮೂಲಕ ಮತದಾನ ಪ್ರಕ್ರಿಯೆಯ ಗೋಪ್ಯತಾ ನಿಯಮಗಳ ಉಲ್ಲಂಘನೆಯಾಗಿದ್ದು, ರೇವದಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Lok Sabha Election 2024 ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.
ಇದನ್ನು ನೋಡಿ : ಮೋದಿಯ ಹತ್ತು ವರ್ಷ ಆಡಳಿತದಲ್ಲಿ 40ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದರೆJanashakthi Media