ನವದೆಹಲಿ : ಷೇರು ಮಾರುಕಟ್ಟೆಯಲ್ಲಿ 700 ಅಂಕಗಳಷ್ಟು ಸೆನ್ಸೆಕ್ಸ್ ಕುಸಿತ ಕಂಡಿದ್ದರಿಂದ ಹೂಡಿಕೆದಾರರಿಗೆ ಕೆಲವೇ ಗಂಟೆಗಳಲ್ಲಿ 4 ಲಕ್ಷ ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ.
ಶುಕ್ರವಾರ ಬೆಳಿಗ್ಗೆ ಮುಂಬೈ ಷೇರು ಮಾರುಕಟ್ಟೆ ಆರಂವಾಗುತ್ತಿದ್ದಂತೆ ಕುಸಿತ ಕಂಡು ಬಂದಿದ್ದು, ಸೆನ್ಸೆಕ್ಸ್ 700 ಅಂಕಗಳಷ್ಟು ಕುಸಿತ ಕಂಡಿದೆ.
ಮಧ್ಯಾಹ್ನದ ವೇಳೆ ಅಲ್ಪ ಚೇತರಿಕೆ ಕಂಡಿದ್ದು, 81,026ರಿಂದ ಆರಂಭವಾದ ವಹಿವಾಟು ಒಟ್ಟಾರೆ 814 ಅಂಕ ಕುಸಿತ ಕಂಡಿದೆ. ಇದರಿಂದ ಹೂಡಿಕೆದಾರರಿಗೆ ಸುಮಾರು 4 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
ನಿಫ್ಟಿ ಮೆಟಲ್ ಮತ್ತು ಪಿಎಸ್ ಯು ಬ್ಯಾಂಕ್ ಗಳ ಷೇರುಗಳು ಭಾರೀ ನಷ್ಟಕ್ಕೆ ಒಳಗಾಗಿವೆ. ಷೇರು ಮಾರುಕಟ್ಟೆ ಕುಸಿತಕ್ಕೆ ಕೆಲವು ದಲ್ಲಾಳಿಗಳು ಕಾರಣ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳಿಂದ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿದ್ದು, ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ. ಅಲ್ಲದೇ ಹಲವು ಬ್ಯಾಂಕ್ ಗಳು ನಷ್ಟದ ಭೀತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲೂ ಪರಿಣಾಮ ಬೀರಲು ಆರಂಭಿಸಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.