ಹಲವಾರು ಕ್ರಿಮಿನಲ್ ಪ್ರಕರಣಗಳ ಆರೋಪಿ ಶರಣ್‌ ಪಂಪ್‌ವೆಲ್ ಉಡುಪಿ ಪ್ರವೇಶಕ್ಕೆ ತಡೆ

ಉಡುಪಿ: ಬಿಜೆಪಿ ಪರ ಸಂಘಟನೆಗಳು ಮಣಿಪಾದಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಹಲವಾರು ಕ್ರಿಮಿನಲ್ ಪ್ರಕರಣಗಳ ಆರೋಪಿ ಶರಣ್‌ ಪಂಪ್‌ವೆಲ್‌ ಜಿಲ್ಲೆ ಪ್ರವೇಶಿಸದಂತೆ ಪೊಲೀಸರು ಪಡೆದಿದ್ದಾರೆ. ಜಾಮೀನು ನಿಯಮ ಉಲ್ಲಂಘಿಸಿದ್ದಕ್ಕಾಗಿ ಜಿಲ್ಲೆಯ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ.

ಈ ಹಿಂದೆ ಉಡುಪಿಯಲ್ಲಿ ಮಾಡಿದ್ದ ಪ್ರಚೋದನಕಾರಿ ಭಾಷಣಕ್ಕಾಗಿ ಶರಣ್ ಪಂಪ್‌ವೆಲ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಶರಣ್‌ಗೆ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಲಾಗಿತ್ತು. ಆದರೆ ಆತ ಅನುಮತಿಯಿಲ್ಲದೆ ಉಡುಪಿ ಪ್ರವೇಶಿಸುವುದಕ್ಕೆ ಪೊಲೀಸರು ತಡೆಯೊಡ್ಡಿದ್ದು, ವಾಪಾಸು ಮಂಗಳೂರಿಗೆ ವಾಪಸ್ ಕಳುಹಿಸಲಾಗಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಗ್ರಾಮಪಂಚಾಯಿತಿಯಲ್ಲಿ ಗೆಲ್ಲಿಸಲು ಶಕ್ತಿ ಇಲ್ಲದವರು ಬಿಜೆಪಿ ನಿಯಂತ್ರಿಸ್ತಿದ್ದಾರೆ? ರೇಣುಕಾಚಾರ್ಯ ಆರೋಪ

ಶರಣ್‌ ಪಂಪ್‌ವೆಲ್ ಬಿಜೆಪಿಯ ಸಹ ಸಂಘಟನೆಯಾದ ವಿಎಚ್‌ಪಿ ಮುಖಂಡನಾಗಿದ್ದು, ಹಲವಾರು ಬಾರಿ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವುದರ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಬಾರಿ ಉಡುಪಿ ಹಿಜಾಬ್ ಪ್ರಕರಣದಲ್ಲಿ ವಿಚಾರದಲ್ಲಿ ಶರಣ್‌ ದ್ವೇ‍ಷ ಭಾಷಣ ಮಾಡಿದ್ದನು. ಹೀಗಾಗಿ ಆತನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.

ವಿಡಿಯೊ ನೋಡಿ: ‌ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *