ಬೆಂಗಳೂರು : ನಮಸ್ಕರಿಸಲು ಬಂದ ಸಂಸದನನ್ನು “ನೀನು ಅಸ್ಪೃಶ್ಯ ನನ್ನ ಕಾಲು ಮುಟ್ಟಬೇಡ ಎಂದು ಸ್ವಾಮೀಜಿಯೊಬ್ಬರು ಅವಮಾನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಲಿತ ಸಮುದಾಯಕ್ಕೆ ಸೇರಿದ ಇಟಾವ ಉತ್ತರಪ್ರದೇಶದ ಸಂಸದರು ಡಾ. ರಾಮಶಂಕರ್ ಕಠೇರಿಯಾ ಅವರು ಇಂದು ಶಂಕರಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಲು ಹೋದಾಗ ಅವರು ತನ್ನ ಪಾದ ಮುಟ್ಟಿ ನಮಸ್ಕರಿಸಲೂ ಕೂಡ ಆಸ್ಪದ ನೀಡಿಲ್ಲ. ನೀನು ಅಸ್ಪೃಶ್ಯ ನೀನೇಗೆ ಒಳಗೆ ಬಂದೆ ಎಂದು ಗದರಿದ್ದಾರೆ.
ಈ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸ್ವಾಮೀಜಿಯ ಈ ನಡೆಗೆ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಈ ಘಟನೆಯ ಬಗ್ಗೆ ಮಾಜಿ ಸಚಿವ ಡಾ.ಎಚ್.ಸಿ.ಮಹಾದೆವಪ್ಪ ಅವರು ತೀವ್ರವಾಗಿ ಖಂಡಿಸಿದ್ದು, ಟ್ವೀಟ್ ಮಾಡುವ ಮೂಲಕ ತಮ್ಮ ಸ್ವಾಮೀಜಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
This is the reason why Manuvadis don't believe in constitution.
Let me remind Article 17 has prohibited untouchability and why Dr B R Ambedkar is against to Hindu Fundamentalism! pic.twitter.com/RzuE0KQclx
— Dr H.C.Mahadevappa (@CMahadevappa) August 26, 2022
ಮನುವಾದಿಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ಇದೇ ಕಾರಣ. ಆರ್ಟಿಕಲ್ 17 ಅಸ್ಪೃಶ್ಯತೆಯನ್ನು ನಿಷೇಧಿಸಿದೆ ಮತ್ತು ಡಾ ಬಿ ಆರ್ ಅಂಬೇಡ್ಕರ್ ಹಿಂದೂ ಮೂಲಭೂತವಾದಕ್ಕೆ ಏಕೆ ವಿರುದ್ಧವಾಗಿದೆ ಎಂಬುದನ್ನು ನಾನು ನೆನಪಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ.
ಫೆಸ್ಬುಕ್ ನಲ್ಲಿ ಅನೇಕರು ಸ್ವಾಮೀಜಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಕಚಡ ಕಳ್ ಸ್ವಾಮಿಜಿ ಗಳ ಕಾಲ್ ಯಾಕ್ ಮುಗಿಬೇಕು ಇವರು ಯಾರು ಕಳರು ಕದಿಮರು ಕಂತ್ರಿಗಳು ಇವರಿಗೆ ಏನ್ ಯೊಗಿತೆ ಇದೆ ಅಂಥ ಕಾಲ್ ಮುಗಿಬೇಕು ತು… ಇವ್ರಜನ್ಮಕೆ