ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ

ಸಂಡೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ದೇಶವು 75ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ಸ್ವಾತಂತ್ರ್ಯ ಭಾರತವನ್ನು ನಿರ್ಮಿಸುವಲ್ಲಿ ಆಪಾರ ಕೊಡಗೆ ನೀಡಿದ ಮಹನ್ ಸೇನಾನೀಗಳು ತ್ಯಾಗ -ಬಲಿದಾನಗಳ ಸ್ಮರಣೆಯ ವರ್ಷವಾಗಿದೆ, ಸ್ವತಂತ್ರ್ಯದ ಯಾವದೇ  ಬದ್ಧತೆ ತೋರದ ನಡೆಸುವ ಕಾರ್ಯಕ್ರಮಗಳ ಕೇವಲ ಸಂಕೇತವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಚರಣೆಯ ಅಂಗವಾಗಿ ಸ್ವಾತಂತ್ರ್ಯ ಭಾರತದ ಕಣ್ಣೋಟವನ್ನು ವಿವಿಧ ಆಯಾಮಗಳಿಂದ ಜನತೆಯ ಹತ್ತಿರ ಕೊಂಡ್ಯೊಯಲು ಒಂದು ಪ್ರಯತ್ನದ ಭಾಗವಾಗಿ ತೋರಣಗಲ್ಲು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಚಿತ್ರಕಲಾ, ಭಾಷಣ, ಭಕ್ತಿ ಗೀತೆ, ರಂಗೋಲಿ ಕಾರ್ಯಕ್ರಮಗಳನ್ನು ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯಸ್ಥರಾದ ಎಂ. ಹೊನ್ನರಾಸಬ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ ಪಾರ್ವತಿ, ಶಿಕ್ಷಕರು ಮತ್ತು  ತೀರ್ಪುಗಾರರುಗಳಾಗಿ ಎನ್‌ ಸಂಕಣ್ಣ, ಯು ಸಂಕಣ್ಣ, ವಿಜಯ ಕುಮಾರ್, ಸಿಐಟಿಯು ಚನ್ನಬಸಯ್ಯ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಡಿಹೆಚ್‌ಎಸ್‌ ಸಂಘಟನೆಯ ಎ ಸ್ವಾಮಿ, ಡಿವೈಎಫ್‌ಐ ಸಂಘಟನೆಯ ಹೆಚ್‌ ಸ್ವಾಮಿ, ನಾಗಭೂಷನ್, ಶಿವರೆಡ್ಡಿ, ರವಿ, ಕುಮಾರ್ ನಾಯ್ಕ್, ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕರಾದ ಈರಣ್ಣ ಅವರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *