2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ರಜೆ ಕಡಿತ; ಮೇ 16 ರಿಂದ ಶಾಲೆಗಳು ಆರಂಭ!

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020-21 ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷಗಳಲ್ಲಿ  ವಿದ್ಯಾರ್ಥಿಗಳಿಗೆ ಕನಿಷ್ಠ ಶೇಕಡಾ 40 ರಷ್ಟು ಭೌತಿಕ ತರಗತಿಗಳು ನಷ್ಟವಾಗಿದ್ದು, ಶಿಕ್ಷಣ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷಕ್ಕೆಕಲಿಕೆಯ ನಷ್ಟವನ್ನು ಸರಿದೂಗಿಸಲು 26 ಹೆಚ್ಚುವರಿ ದಿನಗಳೊಂದಿಗೆ ಶೈಕ್ಷಣಿಕ ತರಗತಿಯನ್ನು ಆರಂಭಿಸಿ, ತಡವಾಗಿ ಕೊನೆಗೊಳ್ಳಲು ನಿರ್ಧರಿಸಿದೆ.

ಈ ವರ್ಷ ಶೈಕ್ಷಣಿಕ ವರ್ಷದ ಮೊದಲ ಅವಧಿಯು ಮೇ 16 ರಿಂದ ಅಕ್ಟೋಬರ್ 2 ರವರೆಗೆ ಹಾಗೂ ಎರಡನೆ ಅವಧಿಯು ಅಕ್ಟೋಬರ್ 17 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ಬೇಸಿಗೆ ರಜೆಗಳನ್ನು 48 ದಿನಗಳಿಗೆ ಮತ್ತು ದಸರಾ ರಜೆಯನ್ನು 14 ದಿನಗಳವರೆಗೆ ಕಡಿತಗೊಳಿಸಲಾಗುತ್ತದೆ. ಎಲ್ಲೆಲ್ಲಿ ಕ್ರಿಸ್‌ಮಸ್‌ ರಜೆ ಘೋಷಣೆ ಮಾಡಬೇಕೋ ಅಲ್ಲೆಲ್ಲ ದಸರಾ ರಜೆ ಕಡಿತಗೊಳಿಸಲಾಗುತ್ತದೆ.

330 ದಿನಗಳಲ್ಲಿ ದಸರಾ, ಬೇಸಿಗೆ ಮತ್ತು ಸರ್ಕಾರಿ ರಜೆಗಳು ಸೇರಿದಂತೆ 60 ದಿನಗಳ ರಜೆ ಇರುತ್ತದೆ. ಸಹಪಠ್ಯ ಚಟುವಟಿಕೆಗಳು, ಪರೀಕ್ಷೆಗಳು, ಪೋಷಕ-ಶಿಕ್ಷಕರ ಸಭೆಗಳು, ವಿಹಾರಗಳು ಮತ್ತು ಕಾರ್ಯಗಳು 28 ದಿನಗಳನ್ನು ತೆಗೆದುಕೊಳ್ಳುತ್ತದೆ, ತರಗತಿಗಳನ್ನು 228 ದಿನಗಳಲ್ಲಿ ನಡೆಸಲಾಗುತ್ತದೆ. ತರಗತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಬೆಳಿಗ್ಗೆ 10 ರಿಂದ ಸಂಜೆ 4.20 ರವರೆಗೆ ಇರುತ್ತದೆ

Donate Janashakthi Media

Leave a Reply

Your email address will not be published. Required fields are marked *