ನವದೆಹಲಿ: ಸಿಎಎ ಕಾಯ್ದೆ ರದ್ದತಿಗೆ ಸಂಬಂಧಿಸಿದ ಹೋರಾಟದಲ್ಲಿ ಜಾಗತಿಕವಾಗಿ ಹೆಸರಾಗಿದ್ದ ಶಾಹೀನ್‌ಬಾಗ್ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ದಕ್ಷಿಣ ದೆಹಲಿ ಮುನ್ಸಿಪಾಲ್ ಕಾರ್ಪೋಷನ್ ಇಂದು (ಮೇ 09) ಬೆಳಗ್ಗೆ ಪ್ರಾರಂಬಿಸಿದ್ದ ಆಕ್ರಮಿತ ಪ್ರದೇಶಗಳ ನೆಲಸಮಗೊಳಿಸವ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಶಾಹಿನ್‌ಬಾಗ್ ಪ್ರದೇಶದಲ್ಲಿನ ರಸ್ತೆಗಳು ಮತ್ತು ಸರ್ಕಾರಿ ಜಾಗವನ್ನು ಆಕ್ರಮಿಸಿ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಟ್ಟಡಗಳನ್ನು ನೆಲಸಮಗೊಳಿಸಲು ಮೇ 5ರ ಗುರುವಾರದಿಂದ ಕಾರ್ಯಾಚರಣೆ ನಡೆಸಲು ಯೋಜಿಸಲಾಗಿತ್ತು.
ಇದನ್ನು ಓದಿ: ಶಾಹೀನ್‌ಬಾಗ್ ಸ್ಥಳಕ್ಕೆ ಜೆಸಿಬಿ–ಬುಲ್ಡೋಜರ್‌ಗಳ ಧಾಳಿ: ಸ್ಥಳೀಯರ ಆಕ್ರೋಶ
ದ್ವಂಸ ಕಾರ್ಯಾಚರಣೆಯಲ್ಲಿ ದಕ್ಷಿಣ ದೆಹಲಿ ಮುನ್ಸಿಪಾಲ್ ಕಾರ್ಪೋಷನ್ ಆಡಳಿತ ಯಂತ್ರ ಜೆಸಿಬಿಗಳು ಮತ್ತು ಬುಲ್ಡೋಜರ್‌ಗಳು ಸ್ಥಳಕ್ಕೆ ದಾವಿಸಿದ್ದವು. ಧ್ವಂಸ ಕಾರ್ಯಾಚರಣೆ ವಿರುದ್ಧ ಸಿಪಿಐ(ಎಂ) ಪಕ್ಷವು ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ರಾಜಕೀಯ ಪಕ್ಷವು ನ್ಯಾಯಲಯವನ್ನು ಸಮೀಪಿಸುತ್ತಿದೆ” ಎಂದು ಬಲವಾಗಿ ಆಕ್ಷೇಪಿಸಿದೆ. ಈ ವಿಷಯವಾಗಿ ಸಿಪಿಐ(ಎಂ) ತನ್ನ ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದು, ಹೈಕೋರ್ಟ್ ಗೆ ಮೊರೆ ಹೋಗಲು ತಿಳಿಸಿದೆ.
ಎಸ್‌ಡಿಎಂಸಿಯ ಅತಿಕ್ರಮಣ ವಿರೋಧಿ ಅಭಿಯಾನದ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಪಿಐ(ಎಂ) ಹಾಗೂ ಬೀದಿ ಬದಿ ವ್ಯಾಪಾರಿಗಳು ಏಕೆ ಪ್ರಕರಣ ದಾಖಲಿಸಿದ್ದಾರೆ. ಆ ಪ್ರದೇಶದ ಯಾವುದೇ ನಿವಾಸಿಗಳು ಅಥವಾ ಅಂಗಡಿಯವರು ಏಕೆ ಮುಂದೆ ಬರುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಕೇಳಿತು. ಪೂರ್ವ ಸೂಚನೆ ಇಲ್ಲದೆ ಮತ್ತು ಕಾನೂನಿನ ಪತ್ರದ ಮೂಲಕ ಇಂತಹ ಚಟುವಟಿಕೆಗಳನ್ನು ಏಕೆ ಕೈಗೊಳ್ಳುವುದಿಲ್ಲ ಎಂದು ನ್ಯಾಯಪೀಠವು ನಗರಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.
“ನಾವು ಮಧ್ಯಪ್ರವೇಶಿಸುತ್ತಿಲ್ಲ. ಆದರೆ ನೀವು ಈ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡಾಗ ನೀವು ಅದನ್ನು ಕಾನೂನಿನ ಪ್ರಕಾರ ಏಕೆ ಮಾಡಬಾರದು? ಅವರಿಗೇಕೆ ನೋಟಿಸ್ ಜಾರಿ ಮಾಡಬಾರದು? ನೋಟಿಸ್ ನೀಡದೆ ಯಾವುದೇ ಕಟ್ಟಡಗಳನ್ನು ಕೆಡವಬೇಡಿ ಎಂದು ನಾವು ನಿಮಗೆ ಹೇಳುತ್ತಿದ್ದೇವೆ” ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನು ಓದಿ: ಅಕ್ರಮ ಕಟ್ಟಡಗಳ ನೆಲಸಮ: ಸುಪ್ರೀಂ ಆದೇಶ ಉಲ್ಲಂಘನೆಗೆ ಬೃಂದಾ ಕಾರಟ್ ಆಕ್ರೋಶ
ಸಿಪಿಐ(ಎಂ) ಪಕ್ಷವು ಕನಿಷ್ಠ ಎರಡು ದಿನಗಳ ಮಟ್ಟಿಗಾದರೂ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರಿ ಎಂದು ಮನವಿ ಮಾಡಿಕೊಂಡಾಗ ನ್ಯಾಯಾಲಯವು ನೀವು ಹೈಕೋರ್ಟಿ ಹೋಗುವುದಿಲ್ಲ, ನೀವು ನೇರವಾಗಿ ಸುಪ್ರೀಂ ಕೋರ್ಟಿಗೆ ಬರುತ್ತೀರಿ. ರಾಜಕೀಯ ಪಕ್ಷವು ಇಲ್ಲಿಗೆ ಬಂದು ಏನು ಮಾಡಬೇಕೆಂದು ಹೇಳುತ್ತಿದೆ. ಈ ನಿಮ್ಮ ಮನವಿಯನ್ನು ಹಿಂತೆಗೆದುಕೊಳ್ಳಿ ಅಥವಾ ನಿಮ್ಮ ಮನವಿಯನ್ನು ನಾವೇ ವಜಾಗೊಳಿಸುತ್ತೇವೆ” ಎಂದು ಸೂಚಿಸಿತು.
ಪ್ರತಿಯೊಬ್ಬರಿಗೂ ತಮ್ಮ ಮನೆ ಕೆಡವಿದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪರವಾನಗಿ ನೀಡಲಾಗುವುದಿಲ್ಲ, ಅದು ಕಾನೂನುಬಾಹಿರವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ನಾವು ಕಾನೂನು ಉಲ್ಲಂಘನೆಯಾದರೆ ಮಧ್ಯಪ್ರವೇಶಿಸುತ್ತೇವೆ, ರಾಜಕೀಯ ಪಕ್ಷಗಳ ಒತ್ತಾಯಕ್ಕೆ ಮಣಿದು ಈ ರೀತಿ ಅರ್ಜಿ ಸಲ್ಲಿಸಬೇಡಿ, ಇಷ್ಟು ದಿನ ಇಲ್ಲೇ ಕಳೆದಿದ್ದೀರಿ, ಕ್ರಮಕೈಗೊಂಡಿದ್ದರೆ ಹೈಕೋರ್ಟಿಗೆ ಹೋಗಬಹುದಿತ್ತುʼʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಧ್ವಂಸ ಕಾರ್ಯಾಚರಣೆ ಸ್ಥಗಿತ
ಇಂದು ಬೆಳಗ್ಗೆ ಆರಂಭಿಸಿರುವ ಅತಿಕ್ರಮಣ ತೆರವು ಕಾರ್ಯಾಚರಣೆಯು ಭಾರೀ ಪ್ರತಿಭಟನೆಯ ಕಾರಣದಿಂದಾಗಿ ಸ್ಥಗಿತಗೊಂಡಿದೆ. ಬುಲ್ಡೋಝರ್‌ಗಳು ಆಗಮಸುತ್ತಿದ್ದಂತೆ ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ಸೇರಿದಂತೆ ಕಾಂಗ್ರೆಸ್ ಹಾಗೂ ಎಎಪಿ ಬೆಂಬಲಿಗರು ಪ್ರದೇಶವನ್ನು ತಲುಪಿದರು. ಖಾನ್ ಅವರು ಪ್ರದೇಶದಲ್ಲಿನ ಎಲ್ಲಾ ಅಕ್ರಮ ಕಟ್ಟಡ ತೆಗೆದುಹಾಕಲಾಗಿದೆ ಹಾಗೂ ಈಗ ಯಾವುದೂ ಇಲ್ಲ ಎಂದು ಹೇಳಿದರು.