ಶಾಹೀನ್‌ಬಾಗ್ ಸ್ಥಳಕ್ಕೆ ಜೆಸಿಬಿ–ಬುಲ್ಡೋಜರ್‌ಗಳ ಧಾಳಿ: ಸ್ಥಳೀಯರ ಆಕ್ರೋಶ

ನವದೆಹಲಿ: ಮೂರು ವರ್ಷಗಳ ಹಿಂದೆ ಸಿಎಎ ವಿರೋಧಿ ಹೋರಾಟಕ್ಕೆ ಪ್ರೇರಣೆ ನೀಡಿದ್ದ ಇಡೀ ದೇಶದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪ್ರತಿಭಟನಾ ಕೇಂದ್ರ ಪ್ರದೇಶ ದೆಹಲಿಯ ಶಾಹೀನ್‌ಬಾಗ್‌ ಪ್ರದೇಶಕ್ಕೆ ಇಂದು(ಮೇ 09) ಅತಿಕ್ರಮಣದಾರರು ಎಂದು ಒಕ್ಕಲೆಬ್ಬಿಸಲು ದಕ್ಷಿಣ  ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ತನ್ನ ಆರೋಪಿಸಿ ಶಾಹಿನ್‌ಬಾಗ್ ನತ್ತ ಜೆಸಿಬಿಗಳು ಮತ್ತು ಬುಲ್ಡೋಜರ್‌ಗಳನ್ನು ತಲುಪಿದ್ದವು.

ಮುನ್ಸಿಪಲ್‌ ಕಾರ್ಪೊರೇಷನ್‌ ನ ದಬ್ಬಾಳಿಕೆ ಆಕ್ರಮಣದ ವಿರುದ್ಧ ಸ್ಥಳೀಯ ನಿವಾಸಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಪೊಲೀಸ್ ಪಡೆಗಳೊಂದಿಗೆ ಆಗಮಿಸಿದ ಅಧಿಕಾರಿಗಳು ಮತ್ತು ಬುಲ್ಡೋಜರ್ ಮತ್ತು ಜೆಸಿಬಿಗಳನ್ನು ತಡೆದು ಸ್ಥಳಿಯರು ಒಟ್ಟುಗೂಡಿ ಪ್ರತಿಭಟನೆ ನಡೆಸಿದರು.

ಇದನ್ನು ಓದಿ: ಅಕ್ರಮ ಕಟ್ಟಡಗಳ ನೆಲಸಮ: ಸುಪ್ರೀಂ ಆದೇಶ ಉಲ್ಲಂಘನೆಗೆ ಬೃಂದಾ ಕಾರಟ್‌ ಆಕ್ರೋಶ

ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ, ನಿವಾಸಿಗಳು, ಇಲ್ಲಿನ ಸ್ಥಳೀಯರು ಸಾರ್ವಜನಿಕ ಭೂಮಿಯಲ್ಲಿ ಯಾವುದೇ ಅಕ್ರಮ ಒತ್ತುವರಿ ಮಾಡಿಕೊಂಡಿದ್ದ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಮ್ ಆದ್ಮಿ ಪಕ್ಷದ ಓಖ್ಲಾ ಕ್ಷೇತ್ರದ ಶಾಸಕ ಅಮನತುಲ್ಲಾ ಖಾನ್ ಮಾತನಾಡಿ, ಯೋಜಿತ ಧ್ವಂಸ ಅಭಿಯಾನ ಸ್ಥಳಕ್ಕೆ ಬಂದಿರುವೆ, ಉದ್ದೇಶಪೂರ್ವಕವಾಗಿ ಕಾನೂನು ಕ್ರಮದ ಸುವ್ಯವಸ್ಥೆಯ ನೆಪದಲ್ಲಿ, ಸಾರ್ವಜನಿಕರ ಗೌರವಕ್ಕೆ ಧಕ್ಕೆ ತರಲು ಇಂತಹ ಕಾರ್ಯಗಳನ್ನ ಮಾಡಲಾಗುತ್ತಿದೆ. ನಾನೀಗ ಸ್ಥಳಕ್ಕೆ ಭೇಟಿಕೊಟ್ಟಿದ್ದೇನೆ, ಅತಿಕ್ರಮಣ ಎಲ್ಲಿದೆ ಎಂಬುದನ್ನು ನನಗೆ ತೋರಿಸಿರಿ ಎಂದು ಹೇಳಿದರು.

ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ಗೂ ಸಿಪಿಡಬ್ಲೂಡಿ ರಸ್ತೆಗೂ ಯಾವುದೇ ಸಂಭದವಿಲ್ಲ. ಜನರು ತಮ್ಮ ರಸ್ತೆಗಳ ಮುಂದೆ ಜಾಗಬಿಟ್ಟಿದ್ದಾರೆ ಎಂದು ಅತಿಕ್ರಮಣವನ್ನು ನಿರಾಕರಿಸಿದ ಮುನ್ಸಿಪಲ್‌ ಕಾರ್ಪೊರೇಷನ್‌ ಸದಸ್ಯ ವಾಜಿಬ್ ಮಾತನಾಡಿದರು. ರೋಹಿಂಗ್ಯಾಗಳು, ಬಾಂಗ್ಲಾದೇಶಿಗಳು ಮತ್ತು ಸಮಾಜ ವಿರೋಧಿಗಳ ಅತಿಕ್ರಮಣ ತೆಗೆದುಹಾಕಲು ಏಪ್ರಿಲ್ 20ರಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಆಡಳಿತ ಪಕ್ಷದ ಮೇಯರ್ ಅವರಿಗೆ ಪತ್ರ ಬರೆದ ನಂತರ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ತನ್ನ ಪ್ರದೇಶಗಳಲ್ಲಿ ಅತಿಕ್ರಮಣ ನಡೆದಿದೆ ಎಂದು ಯೋಜಿತ ಧಾಳಿಗಳನ್ನು ಮಾಡುತ್ತಿದೆ.

ಶಾಹಿನ್‌ಬಾಗ್ ಪ್ರದೇಶದಲ್ಲಿನ ರಸ್ತೆಗಳು ಮತ್ತು ಸರ್ಕಾರಿ ಜಮೀನುಗಳಲ್ಲಿ ನೀತಿ ನಿಯಮಗಳಿಲ್ಲದ ಕಟ್ಟಡಗಳನ್ನು ನೆಲಸಮಗೊಳಿಸಲು ಮೇ 5ರಂದು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ, ಪೊಲೀಸರ ಸಹಾಯವಿಲ್ಲದೆ ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.

ಇನ್ನು, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮೇ 4 ರಿಂದ ಪ್ರಾರಂಭ ಮಾಡಿರುವ ಮೊದಲ ಹಂತದ ಅತಿಕ್ರಮಣದಾರರ ಮೇಲಿನ ದಾಳಿಯು ಮೇ 13 ರವರೆಗೆ ಮುಂದುವರೆಯಲಿದ್ದು, ಮುಂದಿನ ಹಂತದ ಕಾರ್ಯಯೋಜನೆಯು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *