ಗಜೇಂದ್ರಗಡ : ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಗಜೇಂದ್ರಗಡ ತಾಲೂಕ ಸಮಿತಿ ನೇತೃತ್ವದಲ್ಲಿ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಇಂದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 450 ಜನ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ಗಜೇಂದ್ರಗಡ ನಗರಕ್ಕೆ ಬರುತ್ತಿದ್ದಾರೆ ಆದರೆ ಕಾಲೇಜಿನಲ್ಲಿ ಸರಿಯಾಗಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಬಹು ಮುಖ್ಯವಾಗಿ ಹೋರಹೊಮ್ಮುತ್ತಿದೆ ಆದರೆ ರಾಜ್ಯದಲ್ಲಿರುವ ಸರ್ಕಾರಿ 85 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸರಿಯಾಗಿ ಉಪನ್ಯಾಸಕರು ಇಲ್ಲದೆ ಸಾವಿರಾರು ವಿದ್ಯಾರ್ಥಿಗಳು ಪರಿಕ್ಷೆಯಲ್ಲಿ ಉತ್ತೀರ್ಣವಾಗುತ್ತಿಲ್ಲ. ತಾಂತ್ರಿಕ ಕಾಲೇಜುಗಳಲ್ಲಿ ಲ್ಯಾಬ್ ಸಾಮಗ್ರಿಗಳು ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆ ಹಾಗೂ ಆಂತರಿಕ ಅಂಕ ಪಡೆಯಲು ಲ್ಯಾಬ್ ಸಾಮಗ್ರಿಗಳ ಅವಶ್ಯಕತೆ ತುಂಬಾ ಇದೆ ಆದರೆ ಯಾವುದೇ ಲ್ಯಾಬ್ ಸಾಮಗ್ರಿಗಳು ಇಲ್ಲದೆ ಇರುವುದು ಖಂಡನಿಯ ಎಂದು ತಿವ್ರವಾಗಿ ವಿರೋದಿಸಿದರು.
ಇದನ್ನೂ ಓದಿ: ಜಾರ್ಖಂಡ್ | ಲಾಲ್ಗಡಿ ಗ್ರಾಮವು ಅಫರಾದ ಮುಕ್ತ ಗ್ರಾಮ
ನಂತರ ಎಸ್ ಎಫ್ ಐ ನ ಜಿಲ್ಲಾದ್ಯಕ್ಷ ಚಂದ್ರು ರಾಠೋಡ ಮಾತನಾಡಿ ವಿದ್ಯಾರ್ಥಿಗಳ ಶಾಲಾ- ಕಾಲೇಜು ಅಂದರೆ ದೇವಸ್ಥಾನ ಅಂತ ಕರೆಯುತ್ತೆವೆ ಆದರೆ ಕಾಲೇಜಿನಲ್ಲಿ ಸರಿಯಾದ ಕಟ್ಟಡದ ಸ್ವಚ್ಚತೆ ಇಲ್ಲ, ಶೌಚಾಲಯಗಳ ಸ್ವಚ್ಚತೆ ಇಲ್ಲ, ಕೊಠಡಿಗಳಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕೂಡ ಇಲ್ಲದೆ ಇರುವುದು ಖೇದಕರ ಸಂಗತಿಯಾಗಿದೆ. ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಿ ಸುಮಾರು ೧೩ ವರ್ಷಗಳ ಕಾಲ ಗತಿಸಿದರೂ ಕೂಡ ಈವರೆಗೂ ಖಾಯಂ ಉಪನ್ಯಾಸಕರೆ ಸರ್ಕಾರದಿಂದ ಭರ್ತಿಯಾಗಿಲ್ಲ. ಸ್ವಚ್ಚತಾ ಸಿಬ್ಬಂದಿ, ಆಟದ ಸಾಮಗ್ರಿಗಳು ಏನು ಕಾಣದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ತಾಲೂಕಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುತ್ತ ಮುತ್ತಲಿನ ಸುಮಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಬಸ್ ಮೂಲಕ ಗಜೇಂದ್ರಗಡ ತಲುಪುತ್ತಾರೆ ಆದರೆ ಪಾಲಿಟೆಕ್ನಿ ಕಾಲೇಜು ಕಾಲೇಜು ಗಜೇಂದ್ರಗಡದ ಬಸ್ ನಿಲ್ದಾಣದಿಂದ ಸುಮಾರು ೩ಕೀ.ಮಿ ದೂರದಲ್ಲಿದ್ದು ಯಾವುದೇ ಸ್ಟೇಜ್ ಇಲ್ಲದ ಕಾರಣ ಬಸ್ ನಿಲುಗಡೆಗೆ ಮಾಡುವುದಿಲ್ಲ. ಈ ಕುರಿತು ಮಾನ್ಯ ಡಿಪೋ ಮ್ಯಾನೇಜರ ಅವರಿಗೆ ಸುಮಾರು ಬಾರಿ ಮನವಿ ಮೂಲಕ ವಿನಂತಿಸಿದರು ಸರಿಪಡಿಸಲು ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಆಗುತ್ತಿಲ್ಲ ಆ ಕಾರಣದಿಂದ ಈ ಹೋರಾಟವನ್ನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಹೋರಾಟದ ಸ್ಥಳಕ್ಕೆ ಮಾನ್ಯ ಡಿಪೋ ಮ್ಯಾನೇಜರ್ ಬೇಟಿ ನೀಡಿ ಈಗಾಗಲೇ ಇಲ್ಲಿ ಸಬ್ ಸ್ಟೇಜ್ ಮಾಡಿದ್ದೆನೆ ನನಗೆ ಸೋಮವಾರದ ತನಕ ಅವಕಾಶ ನೀಡಿ ಎಲ್ಲಾ ಬಸ್ ನಿಲ್ಲಿಸಲು ವ್ಯವಸ್ಥೆ ಮಾಡುತ್ತೆನೆ ಎಂದು ಭರವಸೆ ನೀಡಿದರು. ಗಜೇಂದ್ರಗಡ
ಹೋರಾಟದ ಸ್ಥಳಕ್ಕೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಬರಲೇಬೇಕೆಂದು ಹೋರಾಟಗಾರರು ಸಂಜೆ 6 ಗಂಟೆಗಳ ತನಕ ಹೋರಾಟ ಮುಂದುವರಿಸಿದರು ನಂತರ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ತಹಶಿಲ್ದಾರರು ಹೋರಾಟದ ಸ್ಥಳಕ್ಕೆ ಬೇಟಿ ನೀಡಿ ಹೋರಾಟಗಾರರ ಮನ ಒಲಿಸಿ ಸಮಯಾವಕಾಶ ಕೊಡಿ ಜಿಲ್ಲಾಧಿಕಾರಿಗಳ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಮನವಿ ಸಲ್ಲಿಸಿ ಬಗೆಹರಿಸಲು ಮುಂದಾಗುತ್ತವೆ ಜೊತೆಗೆ ಶಾಸಕರ ಗಮನಕ್ಕೂ ತಂದು ಬಗೆಹರಿಸಲು ಮನವಿ ಮಾಡುತ್ತೆವೆ ಎಂದು ಹೋರಾಟಗಾರರ ಮನ ಒಲಿಸಿದರು.

ಈ ಸಂಧರ್ಭದಲ್ಲಿ ಹಲವು ಹೋರಾಟದ ಹಕ್ಕೋತ್ತಯಗಳೊಂದಿಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಖಾಯಂ ಉಪನ್ಯಾಸಕರ ಭರ್ತಿ ಮಾಡಬೇಕು.ಮೂಲಭೂತ ಸೌಕರ್ಯಗಳಾದ ಬಿಲ್ಡಿಂಗ್ ರಿಪೇರಿ, ವಿದ್ಯುತ್ ಸಂಪರ್ಕ, ಫ್ಲೆಮಿಂಗ್ ಕೆಲಸ, ಹಾಗೂ ಬಾಗಿಲು ಇತರೆ ರಿಪೇರಿ ಕೆಲಸಗಳು ತಕ್ಷಣ ದುರಸ್ತಿ ಮಾಡಬೇಕು. ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಡೇಸ್ ಗಳು ಇಲ್ಲ ಅವುಗಳನ್ನು ಕಲ್ಪಿಸಬೇಕು. ಕಾಲೇಜುಗಳಲ್ಲಿ ಶೌಚಾಲಯ ಸ್ವಚ್ಛತೆ ಹಾಗೂ ಅಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಕಟ್ಟಡ ಸೋರಿಕೆ ತಡೆಗಟ್ಟುಬೇಕು,ಬಿಲ್ಡಿಂಗ್ ಮರು ಬಣ್ಣವಾಗಬೇಕು. ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಬ್ ಸಾಮಗ್ರಿಗಳು ಕಲ್ಪಿಸಬೇಕು, ಲ್ಯಾಬ್ ಸಿಬ್ಬಂದಿಗಳನ್ನು ನೇಮಿಸಬೇಕು. ಆಟದ ಸಾಮಗ್ರಿಗಳು, ಲೈಬ್ರರಿ, ಹಾಗೂ ಲೈಬ್ರರಿಗಳಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಬೇಕಾಗುವ ಪುಸ್ತಕಗಳನ್ನು ಒದಗಿಸಬೇಕು. ನಗರದ ಹೋರ ಭಾಗದಲ್ಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ, ಬಾಲಕರ ಕಾಲೇಜು ವಸತಿ ನಿಲಯ, ನರ್ಸಿಂಗ್ ಕಾಲೇಜು ಒಟ್ಟಾರೆ ಸಾವಿರಾರು ವಿದ್ಯಾರ್ಥಿಗಳು ಅದೆ ಪ್ರದೇಶದಲ್ಲಿ ಇರುವುದರಿಂದ ಒಂದು ಬಸ್ ನಿಲ್ದಾಣ ಕೊಠಡಿ ವ್ಯವಸ್ಥೆ ಆಗಬೇಕು ಎಂದರು.
ಹೋರಾಟವನ್ನು ಬೆಂಬೆಲಿಸಿ CITU ನ ಮುಖಂಡರಾದ ಪೀರು ರಾಠೋಡ ಮಾತನಾಡಿದರು. ಸರ್ಕಾರಿ ಪಿಯು ಕಾಲೇಜಿನ ಮತ್ತು ಎಸ್ ಎಂ ಬಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸೌಹಾರ್ದ ಬೆಂಬಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ತಾಲ್ಲೂಕು ಅಧ್ಯಕ್ಷರಾದ ಅನಿಲ್ ರಾಠೋಡ, ಮುಖಂಡರಾದ ಶರಣು ಮಾಟರಂಗಿ, ಮಾಂತೇಶ ಪೂಜಾರ, ಕಾಲೇಜು ಘಟಕದ ಅಧ್ಯಕ್ಷರಾದ ಸೋಮಶೇಖರ ವಡ್ಡರ್, ಕಾರ್ಯದರ್ಶಿ ತನುಜಾ ರಾಯಬಾಗಿ ಮುಖಂಡರಾದ ಅನುಷಾ ತಳವಾರ, ಆಕಾಶ ಲಮಾಣಿ, ರವಿ ಮದಿ, ತೇಜಶ್, ವಿರೇಶ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ: FRS ಗೆ ಯಾಕೆ ವಿರೋಧ? ಐಸಿಡಿಎಸ್ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers
