ಹೆಚ್ಚುವರಿ ಶುಲ್ಕ ವಸೂಲಿ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

ಹರಪನಹಳ್ಳಿ: ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವಸತಿ ಕಲ್ಪಿಸಬೇಕು. ಇಲ್ಲದಿದ್ದರೆ ಕೊಠಡಿ ಬಾಡಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಸ್.ಎಸ್.ಎಚ್. ಜೈನ್ ಪಿಯು ಕಾಲೇಜ್ ಆವರಣದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಬಳಿಕ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ದೀಪಾವಳಿ ಬಳಿಕ ಜನಸಾಮಾನ್ಯರು ದುಡಿಮೆಗಾಗಿ ದೂರದ ಕಾಫಿ ಎಸ್ಟೇಟ್‌ಗಳಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ತಮ್ಮ ಮಕ್ಕಳನ್ನು ಗ್ರಾಮದಲ್ಲಿ ಬಿಟ್ಟು ಹೋಗಿರುತ್ತಾರೆ. ಆ ಮಕ್ಕಳನ್ನು ಗುರುತಿಸಿ, ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಸ್ವಾತಂತ್ರ‍್ಯದ ನಂತರದಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಶಾಲಾ ಶಿಕ್ಷಣ – ಒಂದು ಅವಲೋಕನ

ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಎಸ್.ಎಚ್. ಜೈನ್ ಪಿಯು ಕಾಲೇಜಿನಲ್ಲಿ ಅಂಕಪಟ್ಟಿ ಪಡೆಯುವ ಸಮಯದಲ್ಲಿ ಬೋಧನಾ ಶುಲ್ಕದ ಹೆಸರಿನಲ್ಲಿ ರೂ 1700ರಿಂದ ರೂ 2000 ವರೆಗೆ ಅಧಿಕ ಶುಲ್ಕವನ್ನು ಪಡೆಯಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈಗಾಗಲೇ ಪಾವತಿಸಿರುವ ವಿದ್ಯಾರ್ಥಿಗಳ ಹಣವನ್ನು ವಾಪಸ್‌ ಮಾಡಬೇಕು. ಮುಂದೆ ಹಣ ವಸೂಲಿ ನಿಲ್ಲಿಸಿ, ಅಂಕಪಟ್ಟಿ ವಿತರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ರಮಾವತ್, ಕಾರ್ಯದರ್ಶಿ ವೆಂಕಟೇಶ್, ಪ್ರಸನ್ನ, ಕುಮಾರ್, ಲಕ್ಯನಾಯ್ಕ, ಕರಿಬಸವರಾಜ್, ಸಚಿನ್, ಶಂಕರ್, ರವಿಕುಮಾರ್, ಮಂಜು ರಂಗಾಪುರ, ಸಂತೋಷ್, ದರ್ಶನ್, ವಿ. ಕುಮಾರ, ಜಿ. ರಮೇಶ್, ಶಶಾಂಕ್, ಚಂದ್ರಕಾಂತ್, ಲೋಕೇಶ್, ಚೇತನ್, ಅಶೋಕ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *