ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಸ ಬಸ್ ಪಾಸ್ ವಿತರಣೆ ಮಾಡುವವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಕಲ್ಪಿಸಲು ಆಗ್ರಹಿಸಿ ಹಾಗೂ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅವಧಿ ವಿಸ್ತರಣೆಯ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ಟಿಕೆಟ್ ಪಡೆದು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ಮಾಡಿ ಪರೀಕ್ಷೆ ಸಮಯಕ್ಕೆ ತಡಮಾಡಿದ KA28 F1487 ಬಸ್ ಕಂಡಕ್ಟರ್ ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ 2020-21ನೇ ಸಾಲಿನ ಪ್ರವೇಶಾತಿ ಪಡೆದ ಅಂತಿಮ ತರಗತಿ, ಪರೀಕ್ಷೆಗಳು ಬಾಕಿ ಇರುವ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವಸತಿ ಕಾಲೇಜು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಸ್ ಪಾಸ್ ಅವಧಿ ವಿಸ್ತರಣಿಗೆ 27.09.2021 ರಂದು ಆದೇಶ ಹೊರಡಿಸಲಾಗಿದೆ. ಆದರೆ ಅಂತಿಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿ, ಪರೀಕ್ಷಾ ಹಿತದೃಷ್ಟಿಯಿಂದಾಗಿ 2020-21ನೇ ಸಾಲಿನ ಬಸ್ ಪಾಸ್ ಆಧಾರದ ಮೇಲೆ ಪರೀಕ್ಷಾ ದಿನಗಳವರೆಗೆ ಸೀಮಿತಗೊಳಿಸಿ ಗರಿಷ್ಠ ನವೆಂಬರ್-2021 ರವರೆಗೆ ಅವಕಾಶ ಕಲ್ಪಸಿ’ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಆದೇಶ ಜಾರಿಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಪರೀಕ್ಷಾ ದಿನಾಂಕ ಮುಕ್ತಾಯ ಗರಿಷ್ಠ ನವೆಂಬರ್ ಸದರಿ ಬಸ್ ಪಾಸ್ ಅವಧಿ ವಿಸ್ತರಿಸಿ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿಸಲಾಗಿದನ್ನು ಸ್ವಾಗತಿಸಿರುವ ಎಸ್‌ಎಫ್‌ಐ ಸಂಘಟನೆ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೂ ಹೊಸ ಬಸ್ ಪಾಸ್ ವಿತರಣೆ ಮಾಡುವವರೆಗೂ ಉಚಿತ ಪ್ರಯಾಣ ಕಲ್ಪಿಸ ಕೊಡಬೇಕೆಂದು ಆಗ್ರಹಿಸಿದೆ.
ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅವಧಿ ವಿಸ್ತರಣೆಯ ಆದೇಶ ಉಲ್ಲಂಘಿಸಿ ಹಾವೇರಿ ತಾಲ್ಲೂಕಿನ ಬೆಂಚಿಹಳ್ಳಿ, ಮೆಳ್ಳಾಗಟ್ಟಿ ವಿದ್ಯಾರ್ಥಿಗಳು ಸೇರಿದಂತೆ ಅನೇಕ ವಿದ್ಯಾರ್ಥಿಗಳಿಂದ ಟಿಕೆಟ್ ಪಡೆದ ಸಾರಿಗೆ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ಮಾಡಿ ಪರೀಕ್ಷೆ ಸಮಯಕ್ಕೆ ತಡಮಾಡಿದ KA28 F1487 ಬಸ್ ಕಂಡಕ್ಟರ್ ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ನೂತನ ಬಸ್ ಪಾಸ್ ವಿತರಣೆ ಮಾಡುವವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಕಲ್ಪಿಸ ಕೊಡಬೇಕೆಂದು ಬಸವರಾಜ ಭೋವಿ ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ಶಿವರಾಜ್ ಗೊಟಗೊಡಿ ಮಾತಾನಾಡಿ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿದ್ದಾರೆ ಆದೇಶ ನೋಡಿ ಅಂದರು ಸಾರಿಗೆ ನೌಕರರು ಟಿಕೆಟ್ ತೆಗೆದುಕೊಳ್ಳಿ ಎಂದು ವಾಗ್ವಾದ ಮಾಡಿ ಪೋಟೋ ವಿಡಿಯೋ ತೆಗೆದು ಬೆದರಿಕೆ ಹಾಕಿದರು ಎಂದು ಅಳಲು ತೊಡಗಿಕೊಂಡರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮನವಿ ಸ್ವೀಕರಿಸಿ ಟಿಕೆಟ್ ನೀಡಿದ ಸಾರಿಗೆ ನೌಕರರ ಮೇಲೆ ಕ್ರಮ ಜರುಗಿಸಲಾಗುವುದು, ಟಿಕೆಟ್ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮಹೇಶ್ ನರೇಗಲ್, ಅರುಣ್, ಶಿವರಾಜ್, ಕಿರಣ ಅಡಗಂಟ್ಟಿ ವಿದ್ಯಾರ್ಥಿಗಳಾದ ಕಿರಣ ಜಿ ಎಸ್, ಅಭಿಶೇಕ ಎನ್ ಬಿ, ನವೀನ ಎಸ್ ಕೆ, ಶಶಾಂಕ, ಮೋಹನ್, ಶಿವಕುಮಾರ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.